ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಜೆಡಿಎಸ್ ಬಂಡಾಯ ಶಾಸಕರು
ಮೈಸೂರಿನಲ್ಲಿ ಸ್ಪೀಕರ್ ಕೆ.ಬಿ.ಕೋಳಿವಾಡರಿಗೆ ತಮ್ಮ ರಾಜೀನಾಮೆ ನೀಡಲಿರುವ ಶಾಸಕರು.
ಮೈಸೂರು: ಜೆಡಿಎಸ್ ಬಂಡಾಯ ಶಾಸಕರು ಇಂದು(ಮಾರ್ಚ್ 24) ಮೈಸೂರಿನಲ್ಲಿ ಸ್ಪೀಕರ್ ಕೆ.ಬಿ.ಕೋಳಿವಾಡರಿಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.
ಸ್ಪೀಕರ್ ಕೋಳಿವಾಡ ಇಂದು ಮೈಸೂರಿನಲ್ಲಿ ಸಿಗುವುದಾಗಿ ಹೇಳಿರುವ ಕಾರಣ ಜೆಡಿಎಸ್ ನ ಆರು ಬಂಡಾಯ ಶಾಸಕರು ಇಂದು ಮೈಸೂರಿನಲ್ಲಿ ಭೇಟಿಯಾಗಿ ಶಾಸಕರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಶಾಸಕರಾದ ಜಮ್ಮೀರ್ ಅಹಮ್ಮದ್, ಎಚ್.ಸಿ. ಬಾಲಕೃಷ್ಣ, ಭೀಮಾ ನಾಯ್ಕ್, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸ್ ಮೂರ್ತಿ, ಚಲುವರಾಯಸ್ವಾಮಿಯಿಂದ ರಾಜೀನಾಮೆ ಸಲ್ಲಿಸಲಿದ್ದಾರೆ.
ಈಗಾಗಲೇ ಶುಕ್ರವಾರ(ಮಾರ್ಚ್ 23) ಜೆಡಿಎಸ್ ಶಾಸಕ ಬಂಡಿಸಿದ್ದೇಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮೈಸೂರಿನಲ್ಲಿ ನಡೆಯಲಿರುವ ಕಾಂಗ್ರೆಸಿನ ಜನಾಶೀರ್ವಾದ ಸಮಾವೇಶದಲ್ಲಿ ಜೆಡಿಎಸ್ ನ ಏಳು ರೆಬೆಲ್ ಶಾಸಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.