ಹುಬ್ಬಳ್ಳಿ : ಮುಸ್ಲಿಂ ಸಮುದಾಯಕ್ಕೆ ಇದ್ದ ಶೇಕಡಾ ನಾಲ್ಕರಷ್ಟು ಮೀಸಲಾತಿಯನ್ನ ರದ್ದು ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತಂದೆ ದಿವಂಗತ ಎಸ್ ಆರ್ ಬೊಮ್ಮಾಯಿ ಅವರ ತತ್ವ ಸಿದ್ಧಾಂತಗಳಿಗೆ ತಿಲಾಂಜಲಿ ಹಾಕಿದ್ದು, ಕೇವಲ ನಾಲ್ಕು ದಿನಗಳ ಪದವಿಗಾಗಿ ತಂದೆ ಹೆಸರು ನಾಶ ಮಾಡಿದರು ಎಂದು ರಾಜ್ಯ ಜಾತ್ಯಾತೀತ ಜನತಾದಳ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದರು. 


COMMERCIAL BREAK
SCROLL TO CONTINUE READING

ನಗರದ ಖಾಸಗಿ ಹೊಟೇಲ್ ನಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಮುಸಲ್ಮಾನರ ಮೀಸಲಾತಿ ಕಿತ್ತುಕೊಳ್ಳುವ ಅಗತ್ಯವಾದರು ಏನಿತ್ತು  ರಾಜ್ಯದ ಇತಿಹಾಸದಲ್ಲಿಯೇ ಕರಾಳ ದಿನನಾಗಿದ್ದು ಇದೊಂದು ಸರಿಯಾದ ನಿರ್ಧಾರ ಅಲ್ಲ. 1995 ರಲ್ಲಿಯೇ ಅಂದು  ಮುಸಲ್ಮಾನರಿಗೆ ಶೇಕಡಾ 4 ರಷ್ಟು ಮೀಸಲಾತಿ ಕೊಟ್ಟವರು ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರು ಅಂದು ಮುಸಲ್ಮಾನರ ಬಡತನ ಅವರ ಆರ್ಥಿಕ ಸ್ಥಿತಿ ಗತಿ ಮತ್ತು ಸಾಮಾಜಿಕ ಸಮೀಕ್ಷೆ ಮೂಲಕ ಮಾಹಿತಿ ಆಧಾರದ ಮೇಲೆ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿದ್ದರು‌ ನಂತರ ಯಾವುದೇ ಭಾರತೀಯ ಜನತಾ ಪಕ್ಷದ ನಾಯಕರು ಬಂದ ಮೇಲೆ ಮೀಸಲಾತಿ ರದ್ದು ಮಾಡರಲಿಲ್ಲ  ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೀಸಲಾತಿ ರದ್ದು ಮಾಡಿದ್ದಾರೆ ಎಂದರು.


ಇದನ್ನೂ ಓದಿ : ರಾಜ್ಯ ಸರಕಾರದಿಂದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ


ದುರಾದೃಷ್ಟ ಅಂದ್ರೆ ಎಸ್ ಆರ್ ಬೊಮ್ಮಾಯಿ ನನ್ನ ಜೊತೆಗೆ ಮಂತ್ರಿ ಮಂಡಲ ದಲ್ಲಿದ್ದವರು. ಎಸ್ ಆರ್ ಬೊಮ್ಮಾಯಿ ಅವರೇ ನನ್ನನ್ನ ಮೊಹಿಸಿನ್ ವಿರುದ್ಧ ಧಾರವಾಡ ದಕ್ಷಿಣ ಕ್ಷೇತ್ರದಲ್ಲಿ ಕ್ಯಾಂಡಿಯಟ್ ಮಾಡಿದ್ದರು.‌ ದೊಡ್ಡ ಮಹಾನ್ ನಾಯಕರಾದ ಎಸ್ ಆರ್ ಬೊಮ್ಮಾಯಿ ಹೊಟ್ಟೆಯಲ್ಲಿ ಬಸವರಾಜ ಬೊಮ್ಮಾಯಿಯಂತಹ ಮಗ ಹುಟ್ಟಿದ್ದಾನೆ‌. ಅಧಿಕಾರಿಕ್ಕಾಗಿ ತಂದೆಯ ಸಿದ್ಧಾಂತಗಳಿಗೆ ತಿಲಾಂಜಲಿ ಹಾಕಿ ನಾಲ್ಕು ದಿನಗಳ ಪದವಿಗಾಗಿ ತಂದೆ ಹೆಸರು ನಾಶ ಮಾಡಿದರು ಎಂದು ಕಿಡಿಕಾರಿದರು.


ಮುಸಲ್ಮಾನರಿಗೆ ಮೀಸಲಾತಿ ರದ್ದು ಮಾಡುವ ಮೂಲಕರಂಜಾನ್ ತಿಂಗಳಲ್ಲಿ ಮಾಡಿರುವ ದೊಡ್ಡ ಘಾತ‌ ನೀಡಿದೆ.ಬಇದು ಶಾಶ್ವತ ಅಲ್ಲ, ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡರು ಕೊಟ್ಟಂತಹ ಮೀಸಲಾತಿಯನ್ನು ಎರಡು ತಿಂಗಳಲ್ಲಿ ಮತ್ತೆ ಅನ್ಯಾ ಯವನ್ನ ಸರಿಪಡಿಸುವ ಕಾಲ ಬರುತ್ತದೆ.‌ನಮ್ಮ ಸರ್ಕಾರದ‌ ಅಧಿಕಾರಕ್ಕೆ ಬಂದರೆ ‌ಆದ್ಯತೆ ಕೊಡುತ್ತೇವೆ ಎಂದರು.


ಇದನ್ನೂ ಓದಿ : ಹೈವೇ - ಎಕ್ಸ್‌ಪ್ರೆಸ್‌ವೇ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಸಂಪೂರ್ಣ ಮಾಹಿತಿ 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.