Drinking Water: ಜಾತ್ರೆ ಸಂಭ್ರಮದ ಮುಗಿದರೂ ಊರ ಜನ ಮಾತ್ರ ಆಸ್ಪತ್ರೆಗೆ ಮೆಟ್ಟಿಲು ಹತ್ತೊದು ತಪ್ತಾನೇ ಇಲ್ಲ.. ಆರು ತಿಂಗಳ ಹಸುಗೂಸಿನಿಂದ ಹಿಡಿದು ಮಹಿಳೆಯರು ಮಕ್ಕಳು ಸೇರಿ ವೃದ್ಧರೂ ಜಿಲ್ಲಾ ಆಸ್ಪತ್ರೆ ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಈವರೆಗೆ 98 ಗ್ರಾಮಸ್ಥರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೆ. ಈ ಪೈಕಿ 58 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಈ ಅವಘಡಕ್ಕೆಲ್ಲಾ ಕಾರಣ ಜೀವ ಉಳಿಸಬೇಕಾಗಿದ್ದ ಜೀವಜಲ ಕುಡಿಯುವ ನೀರು. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಚಿನ್ನೇಹಳ್ಳಿಯ ಕುಡಿಯುವ ನೀರಿಗೆ ಕಲುಷಿತ ನೀರು ಸೇರಿ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. 


COMMERCIAL BREAK
SCROLL TO CONTINUE READING

ಜೂನ್ 7ರಿಂದ 11 ರವೆಗೆ ಗ್ರಾಮದ ಲಕ್ಷ್ಮೀದೇವಿ ಮತ್ತು ಕೆಂಪಮ್ಮ ಜಾತ್ರಾ (Laxmidevi And Kempamma Jatre) ಮಹೋತ್ಸವ ನಡೆಯಿತು. ಜಾತ್ರೆ ಮುಗಿದ ಮಾರನೇ ದಿನವೇ ಇಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಿಕ್ಕದಾಸಪ್ಪ (74), ಪೆದಣ್ಣ (74) ಮೃತಪಟ್ಟಿರೋದನ್ನ ಖಚಿತಪಡಿಸಲಾಗಿದೆ. ಇದಲ್ಲದೆ, ಮಧಿಗಿರಿ ಖಾಸಗಿ ಆಸ್ಪತ್ರೆಗೆಯಲ್ಲಿ ಮೂರು ವರ್ಷದ ಬಾಲಕಿ ಮೀನಾಕ್ಷಿ ಮೃತಪಟ್ಟಿದ್ದಾಳೆ . ಆದರೆ ಇದಕ್ಕೆ ಸರಿಯಾದ ಉತ್ತರ ನೀಡಿದ ಅಧಿಕಾರಿಗಳು ತನಿಖೆ ನಡೆಸುವ ಮಾತನ್ನಾಡಿದ್ದಾರೆ. 


ಇದನ್ನೂ ಓದಿ- ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಶಾಲಾ ಮಕ್ಕಳಿಂದ ಜನಜಾಗೃತಿ ಜಾಥಾ


ಇನ್ನೂ ವಿಷಯ ತಿಳಿದ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ (Minister Dr G Parameshwar) ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿರುವ ಜಿಲ್ಲಾ ಆಸ್ಪತ್ರೆಗೆ ಬೆಳಂಬೆಳಗ್ಗೆ ಭೇಟಿ ನೀಡಿದ್ದರು. ಅಸ್ವಸ್ಥರು ಹಾಗೂ ಅವರ ಕುಟುಂಬಸ್ಥರನ್ನು ಮಾತನಾಡಿಸಿ ಮಾಹಿತಿ ಪಡೆದರು. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಗೃಹ ಸಚಿವ ಪರಮೇಶ್ವರ್, ಮೃತರ ಕುಟುಂಬಗಳಿಗೆ ಪರಿಹಾರಕ್ಕೆ ಸಿಎಂ ಸಿದ್ಧರಾಮಯ್ಯ ಜತೆ ಮಾತನಾಡುವ ಭರವಸೆ ನೀಡಿದ್ದಾರೆ. ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಕೂಡ ಸೂಚನೆ ನೀಡಿದ್ದಾರೆ.


ಇದನ್ನೂ ಓದಿ- Darshan Arrest: ದರ್ಶನ್‌, ಪರಮೇಶ್ವರ್ ಎಲ್ಲರಿಗೂ ಕಾನೂನು ಒಂದೇ- ಗೃಹ ಸಚಿವ ಡಾ. ಜಿ ಪರಮೇಶ್ವರ್


ಗ್ರಾಮದ ಶುದ್ಧ ನೀರಿನ ಘಟಕ ಮತ್ತು ಓವರ್ ಹೆಡ್ ಟ್ಯಾಂಕ್ (Over head tank) ನೀರಿನ ಮಾದರಿಯನ್ನು ಜಿಲ್ಲಾ ಪರಿಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಟ್ಯಾಂಕ್ ನ ನೀರು ಕುಡಿಯಲು ಯೋಗ್ಯವಲ್ಲ ಅನ್ನೋ ವರದಿ ಬಂದಿರುವ ಬಗ್ಗೆ ತಾಲೂಕು ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ. ಈ ನಡುವೆ ಸಾವಿನ ಸಂಖ್ಯೆಯನ್ನ ಆರೋಗ್ಯ ಇಲಾಖೆ ಮುಚ್ಚಿಡುವ ಯತ್ನ ಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದ್ದಾರೆ. 


ಈ ರೀತಿಯಾಗಿ ಜೀವಜಲವೇ ಗ್ರಾಮದ ಜನರಿಗೆ ಕಂಟಕಪ್ರಾಯವಾಗಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಒಟ್ಟಾರೆಯಾಗಿ  ಜಾತ್ರೆಯ ಸಂಭ್ರಮ ಮುಗಿದರೂ ಊರಿನಲ್ಲಿ ಆತಂಕ ಮಾತ್ರ ದೂರವಾಗಿಲ್ಲ. ಗ್ರಾಮದಲ್ಲಿ ಟ್ಯಾಂಕ್ ಮೂಲಕ ನೀರಿಗೆ ಬದಲಿ ವ್ಯವಸ್ಥೆಗೆ ಮಾಡಲಾಗಿದೆ. ಉಳಿದವರು ಗುಣಮುಖರಾಗಿ ಬರ್ಲಿ ಅಂತಾ ಜನ ಪ್ರಾರ್ಥಿಸುತಿದ್ದಾರೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.