ಚಿಕ್ಕಮಗಳೂರು: ಗುಜರಾತ್ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಸೆಡ್ಡು ಹೊಡೆದು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದು ಶಾಸಕರಾಗಿರುವ ಜಿಗ್ನೇಶ್ ಮೇವಾನಿ ಇಂದು ಕಾಫಿ ನಾಡಿಗೆ ತೆರಳಲಿದ್ದಾರೆ. ಕಾಫಿ ನಾಡಿನ ಕೋಮು ಸೌಹಾರ್ದ ವೇದಿಕೆ ಜಿಗ್ನೇಶ್ ಸ್ವಾಗತಕ್ಕಾಗಿ ಸಜ್ಜಾಗಿದೆ.


COMMERCIAL BREAK
SCROLL TO CONTINUE READING

ಚಿಕ್ಕಮಗಳೂರಿನಲ್ಲಿಂದು ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಸ್ಮರಣಾರ್ಥ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೋಮು ಸೌಹಾರ್ದ ವೇದಿಕೆ 15 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಗ್ನೇಶ್ ಮೇವಾನಿ ಅಲ್ಲಿಗೆ ತೆರಳಿದ್ದಾರೆ. ಈ  ಕಾರ್ಯಕ್ರಮದಲ್ಲಿ ಜಿಗ್ನೇಶ್ ಮೇವಾನಿ, ಪ್ರಕಾಶ್ ರೈ ಮತ್ತು ಹಲವು ಪ್ರಗತಿಪರ ಚಿಂತಕರು, ಸಾಹಿತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 


'ಬಾಬಾಬುಡನ್ ಗಿರಿಯನ್ನು ಅಯೋಧ್ಯೆಯಾಗಲು ಬಿಡಲ್ಲ, ಕರ್ನಾಟಕ ಗುಜರಾತ್ ಆಗೋಕೆ ಬಿಡಲ್ಲ, ಗೌರಿ ಲಂಕೇಶ್ ಹತ್ಯೆ ವ್ಯರ್ಥವಾಗೋಲ್ಲ' ಎಂಬ ಘೋಷಣೆಯಡಿ ಸೌಹಾರ್ದ ಮಂಟಪದ ವೇದಿಕೆ ಸಜ್ಜಾಗಿದೆ.