ಸೋನಿಯಾ & ರಾಹುಲ್ ಗಾಂಧಿ ನಾಯಕತ್ವದಲ್ಲಿ ನವಭಾರತ ನಿರ್ಮಾಣಕ್ಕೆ ಕೈಜೋಡಿಸಿ: ಸಿದ್ದರಾಮಯ್ಯ
ಕಾಂಗ್ರೆಸ್ ಪಕ್ಷದ ಹಿರಿಯರು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಸೌಹಾರ್ದ ಭಾರತವನ್ನು ಜಾತಿ-ಧರ್ಮಗಳ ಹೆಸರಲ್ಲಿ ಒಡೆದುಹಾಕಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಮತ್ತು ಯುವನಾಯಕ ರಾಹುಲ್ ಗಾಂಧಿ ನಾಯಕತ್ವದಲ್ಲಿ ಕೈಗೆ ಕೈಜೋಡಿಸಿ ನವ ಕರ್ನಾಟಕವನ್ನೊಳಗೊಂಡ ನವಭಾರತ ನಿರ್ಮಿಸಲು ನಾವು ಸಂಕಲ್ಪ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನದ ಶುಭಾಶಯ ತಿಳಿಸಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
‘ನಾಡಿನ ಸಮಸ್ತ ಜನತೆಗೆ ಕಾಂಗ್ರೆಸ್ ಸಂಸ್ಥಾಪನಾ ದಿನ(Congress Foundation Day)ದ ಶುಭ ಹಾರೈಕೆಗಳು. ಆಧುನಿಕ ಭಾರತದ ಇತಿಹಾಸವೆಂದರೆ ಅದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಇತಿಹಾಸವೇ ಆಗಿದೆ. ಅದು ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಉಳಿಸಿದ ಮತ್ತು ಸ್ವಾತಂತ್ರ್ಯಾ ನಂತರ ದೇಶ ಕಟ್ಟಿದ ಇತಿಹಾಸವೂ ಹೌದು. ಸ್ವಾತ್ರಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಲಕ್ಷಾಂತರ ದೇಶಪ್ರೇಮಿ ಸದಸ್ಯರು ಗುಂಡಿಗೆ ಎದೆ ಕೊಟ್ಟರು, ಹಲವರು ಲಾಠಿಗೆ ಎದೆ ಕೊಟ್ಟರು, ಸಾವಿರಾರು ಜನ ಹುತಾತ್ಮರಾದರು, ಕಾಂಗ್ರೆಸ್ ಪಕ್ಷದ ಈ ಧೀರ ಹೋರಾಟಗಾರರು ಹರಿಸಿದ ರಕ್ತ, ಬೆವರಿನ ಫಲವೇ ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ’ ಅಂತಾ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ, ಗೃಹ ಸಚಿವರು ಸೇರಿ ಬಿಜೆಪಿಯ ಎಲ್ಲ ಶಾಸಕರ ವಿರುದ್ಧ ದೂರು ದಾಖಲು, ಕಾರಣ.?
‘ಮಹಾತ್ಮ ಗಾಂಧೀಜಿಯವರಿಂದ ತಾಯಿಯ ಹೃದಯವನ್ನು, ಜವಾಹರಲಾಲ ನೆಹರೂ ಅವರಿಂದ ವೈಚಾರಿಕ ಸ್ಪಷ್ಟತೆಯನ್ನೂ, ವಲ್ಲಭಬಾಯಿ ಪಟೇಲ್‌ರಿಂದ ಉಕ್ಕಿನ ಸ್ಥೈರ್ಯವನ್ನೂ ಪಡೆದ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಸಂಗ್ರಾಮದ ಗುರಿ ಈಡೇರಿಕೆಯಲ್ಲಿ ಯಶಸ್ವಿಯಾಯಿತು. ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಧುಮುಕದಿದ್ದರೆ ಏನಾಗುತ್ತಿತ್ತು? ನಾವಿಂದು ಕೂಡಾ ಬ್ರಿಟಿಷರ ಗುಲಾಮಗಿರಿಗೆ ಸಿಕ್ಕಿ ನರಳಾಡುತ್ತಿದ್ದೆವೇನೋ? ಸ್ವತಂತ್ರಭಾರತದ ನಾಯಕತ್ವವನ್ನು ಕಾಂಗ್ರೆಸ್ ಪಕ್ಷ ವಹಿಸದೆ ಹೋಗಿದ್ದರೆ ಇಂದು ಕೂಡಾ ದೇಶ ಬಡತನ, ಅನಕ್ಷರತೆ, ಅಸಮಾನತೆ, ನಿರುದ್ಯೋಗದ ಸಮಸ್ಯೆಗಳಲ್ಲಿಯೇ ಉರುಳಾಡುತ್ತಿತ್ತೋ ಏನೋ?’ ಅಂತಾ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
Rahul Gandhi)ಯವರು RSS ಮತ್ತು ಸಂಘ ಪರಿವಾರವನ್ನು ನಿರ್ಭೀತಿಯಿಂದ ಎದುರಿಸಿ ಎಂದು ಕರೆ ಕೊಟ್ಟರು. ಆವರ ಈ ಸೈದ್ದಾಂತಿಕ ಹೋರಾಟ ನಮ್ಮೆಲ್ಲರ ಹೋರಾಟವಾಗಬೇಕು. ನಮ್ಮಲ್ಲಿ ಬಹಳಷ್ಟು ಮಂದಿ RSS ವಿರುದ್ಧ ಮಾತನಾಡಲು ಹಿಂಜರಿಯುತ್ತಿದ್ದಾರೆ’ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ತಮ್ಮ ಆಪ್ತರ ಮೂಲಕ ಡಿಕೆಶಿ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ: ಬಿಜೆಪಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.