Joint Tusk Elephant: ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಓಡಾಡುತ್ತಿದ್ದ ಕೂಡು ದಂತದ ಕಾಡಾನೆ ಮೃತಪಟ್ಟಿದೆ.  


COMMERCIAL BREAK
SCROLL TO CONTINUE READING

ಬಿ‌ಆರ್‌ಟಿ ಹುಲಿ ಸಂರಕ್ಷಿತ ಪ್ರದೇಶವಾದ ಯಳಂದೂರು ವನ್ಯ ಜೀವಿ ವಲಯದ ಕಾಡಿತಾಳಕಟ್ಟೆ ಗಸ್ತು ಕಾರ್ಯಾಚರಣೆ ಸಂದರ್ಭದಲ್ಲಿ ಕೂಡುದಂತದ ಕಾಡಾನೆ ಮೃತಪಟ್ಟಿರುವುದು ತಿಳಿದು ಬಂದಿದೆ ಎಂದು ವರದಿಯಾಗಿದೆ. 


ಇದನ್ನೂ ಓದಿ- ವಕ್ಫ್ ಆಸ್ತಿ ವಿಚಾರ: ವಕ್ಫ್ ಆಸ್ತಿ ತೆರವುಗೊಳಿಸಲು 216 ಪ್ರಕರಣಗಳಲ್ಲಿ ಬಿಜೆಪಿಯೇ ನೋಟೀಸ್ ಕೊಟ್ಟಿತ್ತಲ್ಲಾ ಏಕೆ: ಸಿಎಂ ಸಿದ್ದರಾಮಯ್ಯ ಪ್ರಶ್ನೆ


ಗಸ್ತಿನಲ್ಲಿ ಕೂಡುದಂತದ ಕಾಡಾನೆ ಮೃತಪಟ್ಟಿರುವ ಬಗ್ಗೆ ತಿಳಿಯುತ್ತಿದ್ದಂತೆ ಅದರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸ್ವಾಭಾವಿಕವಾಗಿ ಆನೆ ಮೃತಪಟ್ಟಿದೆ ಎಂದು  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪಶು ವೈದ್ಯ ಡಾ.ವಾಸಿಂ ಮಿರ್ಜಾ ಖಚಿತ ಪಡಿಸಿದ್ದಾರೆ. 


ಮೃತ ಕೂಡುದಂತದ ಕಾಡಾನೆಗೆ 50 ರಿಂದ 55 ವರ್ಷ ವಯಸ್ಸಾಗಿತ್ತು ಎಂದು ಅಂದಾಗಿಸಲಾಗಿದೆ.  


ಇದನ್ನೂ ಓದಿ- ಮತ್ತೊಂದು ಜನ್ಮ ಎತ್ತಿ ಬಂದರೂ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರ ಅಲುಗಾಡಿಸಲು ಸಾಧ್ಯವಿಲ್ಲ: ಡಿಕೆಶಿ


ಗಮನಾರ್ಹವಾಗಿ, ಬಿಳಿಗಿರಿರಂಗನ ಬೆಟ್ಟದ ಮುಖ್ಯರಸ್ತೆ, ಬಂಗಲೆ ಪೋಡು ಸೇರಿದಂತೆ ವಿವಿಧೆಡೆ ಈ  ನೀಳದಂತದ ಕಾಡಾನೆ ಓಡಾಡುತ್ತಿತ್ತ.  ಇದರ ಓಡಾಡದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.