ಗೋಣಿಕೊಪ್ಪ: ಇತ್ತೀಚೆಗೆ ರಾಜ್ಯ ಸರ್ಕಾರ ನಡೆಸಿದ ಟಿಪ್ಪು ಜಯಂತಿ ಆಚರಣೆ ವಿರೋಧಿಸುವ ನೆಪದಲ್ಲಿ ಧರ್ಮ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಪತ್ರಕರ್ತ ಹಾಗೂ ಪ್ರಸಿದ್ಧ ಅಂಕಣಕಾರ ಸಂತೋಷ ತಮ್ಮಯ್ಯ ಅವರನ್ನು ಪೊಲೀಸರು ಮಂಗಳವಾರ ಮುಂಜಾನೆ ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ನವೆಂಬರ್ 5ರಂದು ಗೋಣೆಕೊಪ್ಪದ ಪ್ರಜ್ಞಾ ಕಾವೇರಿ ಸಂಘಟನೆ ಆಯೋಜಿಸಿದ್ದ "ಟಿಪ್ಪು ಕರಾಳ ಮುಖಗಳ ಅನಾವರಣ" ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ತಮ್ಮಯ್ಯ ಧರ್ಮವೊಂದರ ಕುರಿತು ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಪೊಲೀಸರು ಬಂಧಿಸಿದ್ದು, ಪೊನ್ನಂಪೇಟೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. 


ನಾಳೆ ಕೊಡಗಿನಲ್ಲಿ ಬಂದ್ ಆಚರಣೆ
ಈ ಮಧ್ಯೆ ತಮ್ಮಯ್ಯ ಅವರ ಬಂಧನವನ್ನು ವಿರೋಧಿಸಿ ಗೋಣಿಕೊಪ್ಪದಲ್ಲಿ ಹಿಂದೂಪರ ಕಾರ್ಯಕರ್ತರು ಸೇರಿ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ನಾಳೆ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಕೊಡಗಿನಾದ್ಯಂತ ಬಂದ್ ಆಚರಣೆಗೆ ಹಿಂದೂ ಸುರಕ್ಷಾ ವೇದಿಕೆ ಕರೆ ನೀಡಿದೆ.