ಧರ್ಮ ನಿಂದನೆ ಪ್ರಕರಣ: ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಜಾಮೀನು
ಖ್ಯಾತ ಅಂಕಣಕಾರ ಸಂತೋಷ್ ತಿಮ್ಮಯ್ಯ ಅವರಿಗೆ ಪೊನ್ನಂಪೇಟೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪೊನ್ನಂಪೇಟೆ: ಧರ್ಮ ನಿಂದನೆ ಆರೋಪದಡಿ ಪೊಲೀಸರು ಬಂಧಿಸಿದ್ದ ಪತ್ರಕರ್ತ, ಖ್ಯಾತ ಅಂಕಣಕಾರ ಸಂತೋಷ್ ತಿಮ್ಮಯ್ಯ ಅವರಿಗೆ ಪೊನ್ನಂಪೇಟೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ನವೆಂಬರ್ 5ರಂದು ಗೋಣೆಕೊಪ್ಪದ ಪ್ರಜ್ಞಾ ಕಾವೇರಿ ಸಂಘಟನೆ ಆಯೋಜಿಸಿದ್ದ "ಟಿಪ್ಪು ಕರಾಳ ಮುಖಗಳ ಅನಾವರಣ" ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ತಮ್ಮಯ್ಯ ಧರ್ಮವೊಂದರ ಕುರಿತು ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಮಂಗಳವಾರ ಮುಂಜಾನೆ ಪೊಲೀಸರು ಬಂಧಿಸಿದ್ದರು.
ಸಂತೋಷ್ ತಮ್ಮಯ್ಯ ಅವರ ಬಂಧನವನ್ನು ವಿರೋಧಿಸಿ ಗೋಣಿಕೊಪ್ಪದಲ್ಲಿ ಹಿಂದೂಪರ ಕಾರ್ಯಕರ್ತರು ಸೇರಿ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ನಾಳೆ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಕೊಡಗಿನಾದ್ಯಂತ ಬಂದ್ ಆಚರಣೆಗೆ ಹಿಂದೂ ಸುರಕ್ಷಾ ವೇದಿಕೆ ಕರೆ ನೀಡಿದೆ.