ಮೆಂತ್ಯ ನೀರಿನ ಪ್ರಯೋಜನಗಳು: ಭಾರತೀಯರ ಅಡುಗೆಮನೆಗಳು ರುಚಿ ಮಸಾಲೆಗಳಿಂದ ತುಂಬಿರುತ್ತವೆ. ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ಈ ಮಸಾಲೆಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹ ಸಹಕಾರಿಯಾಗಿವೆ. ಈ ಮಸಾಲೆಗಳ ಪೈಕಿ ಮೆಂತ್ಯ ಬೀಜಗಳು ಬರುತ್ತವೆ. ಮೆಂತ್ಯವು ಆಹಾರದ ರುಚಿಯನ್ನು ದ್ವಿಗುಣಗೊಳಿಸಲು ಸಹಾಯ ಮಾಡುತ್ತದೆ. ಮೆಂತ್ಯವನ್ನು ಸೇರಿಸುವುದರಿಂದ ಆಹಾರದ ರುಚಿ ಹೆಚ್ಚು ಉತ್ತಮವಾಗುತ್ತದೆ.


COMMERCIAL BREAK
SCROLL TO CONTINUE READING

ಅದೇ ರೀತಿ ಮೆಂತ್ಯ ನೀರನ್ನು ಪ್ರತಿನಿತ್ಯ ಕುಡಿದರೆ ದೇಹದ ಹಲವಾರು ರೋಗಗಳು ಗುಣವಾಗುತ್ತವೆ. ದೇಹಕ್ಕೆ ಅಗತ್ಯವಾದ ನಾರಿನಾಂಶ, ಪ್ರೋಟೀನ್, ಪಿಷ್ಟ, ಸಕ್ಕರೆ, ಫಾಸ್ಪರಿಕ್ ಆಮ್ಲ, ಸೋಡಿಯಂ, ಸತು, ರಂಜಕ, ಫೋಲಿಕ್ ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಇದರಲ್ಲಿ ಕಂಡುಬರುತ್ತದೆ. ಮೆಂತ್ಯ ನೀರನ್ನು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ.


1. ಮಧುಮೇಹ: ಸಾಕಷ್ಟು ಪ್ರಮಾಣದ ಫೈಬರ್, ಪ್ರೋಟೀನ್, ಪಿಷ್ಟ, ಸಕ್ಕರೆ ಮತ್ತು ಫಾಸ್ಪರಿಕ್ ಆಮ್ಲವು ಮೆಂತ್ಯದಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಮಧುಮೇಹಿಗಳಾಗಿದ್ದರೆ ಪ್ರತಿದಿನ ಮೆಂತ್ಯ ನೀರನ್ನು ಸೇವಿಸಬೇಕು.


ಇದನ್ನೂ ಓದಿ: Benefits of Elaichi: ಪ್ರತಿದಿನ ಏಲಕ್ಕಿ ಸೇವಿಸಿದ್ರೆ ಏನಾಗುತ್ತೆ ಗೊತ್ತಾ..?


2. ತೂಕ ನಷ್ಟ: ನೀವು ಹೊಟ್ಟೆಯ ಬೊಜ್ಜಿನ ಸಮಸ್ಯೆಯಿಂದ ಟೆನ್ಶನ್ ಆಗಿದ್ದರೆ ಮೆಂತ್ಯ ನೀರನ್ನು ಕುಡಿಯಿರಿ. ಮೆಂತ್ಯ ನೀರಿನಲ್ಲಿ ಹೇರಳವಾದ ನಾರಿನಂಶವಿದ್ದು, ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆ ತುಂಬಿರುತ್ತದೆ. ಈ ಕಾರಣದಿಂದ ಮೆಂತ್ಯ ನೀರು ತೂಕವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.


3. ಜೀರ್ಣಕ್ರಿಯೆ: ಮೆಂತ್ಯ ನೀರಿನಲ್ಲಿ ಸಾಕಷ್ಟು ಫೈಬರ್ ಇದ್ದು, ಅದು ಹೊಟ್ಟೆಗೆ ಒಳ್ಳೆಯದು. ಮಲಬದ್ಧತೆ, ಅಜೀರ್ಣ, ಹೊಟ್ಟೆನೋವಿನಂತಹ ಹೊಟ್ಟೆಯ ಕಾಯಿಲೆಗಳನ್ನು ಹೋಗಲಾಡಿಸಲು ಮೆಂತ್ಯ ನೀರು ತುಂಬಾ ಸಹಕಾರಿ.


ಇದನ್ನೂ ಓದಿ: ಚಳಿಗಾಲದಲ್ಲಿ ಜ್ಯೂಸ್ ಕುಡಿಯುವುದು ಒಳ್ಳೆಯದೋ ಕೆಟ್ಟದ್ದೋ? ಆಯುರ್ವೇದ ತಜ್ಞರು ಹೇಳುವುದೇನು ?


4. ಹೃದಯದ ಆರೋಗ್ಯ: ಹೃದಯದ ಆರೋಗ್ಯಕ್ಕೆ ಸಹಕಾರಿಯಾಗುವ ಸಂಯುಕ್ತಗಳು ಮತ್ತು ಪೋಷಕಾಂಶಗಳು ಮೆಂತ್ಯ ನೀರಿನಲ್ಲಿ ಕಂಡುಬರುತ್ತವೆ. ಇವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಸೇವನೆಯು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಪರಿಹಾರ ಪಡೆಯಲು ಪ್ರತಿದಿನ ಬೆಳಗ್ಗೆ ಮೆಂತ್ಯ ನೀರನ್ನು ಸೇವಿಸಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.