`ಕಲ್ಯಾಣ ಕರ್ನಾಟಕದ ಹೆಸರಿಗೆ ತಕ್ಕಂತೆ ಅರ್ಥ ತರಲು ನಾವು ಬದ್ಧರಾಗಿದ್ದೇವೆ`
ಕಲ್ಯಾಣ ಕರ್ನಾಟಕದ ಹೆಸರಿಗೆ ತಕ್ಕಂತೆ ಅರ್ಥ ತರಲು ನಾವು ಬದ್ಧರಾಗಿದ್ದೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ಭರವಸೆ ನೀಡಿದ್ದಾರೆ.
ಕಲಬುರ್ಗಿ: ಕಲ್ಯಾಣ ಕರ್ನಾಟಕದ ಹೆಸರಿಗೆ ತಕ್ಕಂತೆ ಅರ್ಥ ತರಲು ನಾವು ಬದ್ಧರಾಗಿದ್ದೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ಭರವಸೆ ನೀಡಿದ್ದಾರೆ.
ಈ ಕುರಿತಾಗಿ ಅವರು ಟ್ವೀಟ್ ಮಾಡಿದಿಷ್ಟು..
ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸಚಿವರೂ ಸೇರಿ ಮೊನ್ನೆ, ಯೋಜನಾ ಸಚಿವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಹಿಂದಿನ ಸರ್ಕಾರದಲ್ಲಿ ನಡೆದ ವ್ಯಾಪಕ ಭೃಷ್ಟಾಚಾರ ಇಡೀ ಮಂಡಳಿಯ ಉದ್ದೇಶಿತ ಹಾದಿಯನ್ನೇ ಮುಳುಗಿಸಿತ್ತು. ಕೇವಲ ಹೆಸರಿಗೆ ₹5,000 ಕೋಟಿ ಹಣ ಕೊಟ್ಟಿದ್ದಾಗಿ ಹೇಳಿ ಮೋಸ ಮಾಡಿದ್ದು, ಅನೇಕ ಕಾನೂನುಗಳನ್ನು ಉಲ್ಲಂಘಿಸಿ ಹಣ ಲೂಟಿ ಮಾಡುವ ಕೆಟ್ಟ ಸಂಪ್ರದಾಯ ಚಾಲ್ತಿಯಲ್ಲಿದಿದ್ದದ್ದು ಕಂಡು ಬಂದಿದೆ.
ಇದನ್ನೂ ಓದಿ: ಮೊಹರಂ ನಿಮಿತ್ಯ ಹಾಕಿದ ಕೆಂಡದಲ್ಲಿ ಕಂಬಳಿ ಹಾಸಿ ಕುಳಿತ ವ್ಯಕ್ತಿ..!
ಈ ಕಾರಣಗಳಿಂದ ಕಳೆದ ಸಾಲಿನಲ್ಲಿ 26%ನಷ್ಟು ಅನುದಾನವನ್ನು ಬಳಸಿಕೊಳ್ಳಲೂ KKRDB ಯಿಂದ ಸಾಧ್ಯವಾಗಿರುವುದಿಲ್ಲ.
ಈ ಹಿನ್ನಲೆಯಲ್ಲಿ ಕಾನೂನು ಮುರಿದು ಅಕ್ರಮಗಳಿಗೆ ಕಾರಣರಾದರೆಲ್ಲರನ್ನೂ ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಲು ಕ್ರಮ ಕೈಗೊಳ್ಳಲು ಯೋಜನಾ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ನಮ್ಮ ಭಾಗದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ದಿವಂಗತ ಶ್ರೀ ಧರಂ ಸಿಂಗ್ ಮುಂತಾದ ನಾಯಕರ ಅವಿರತ ಶ್ರಮದಿಂದ ಸಾಂವಿಧಾನಿಕ ತಿದ್ದುಪಡಿ ಮಾಡಿ 371(J) ಜಾರಿ ಮಾಡಲಾಯಿತು. ಆದರೆ ಕಳೆದ ನಾಲ್ಕು ವರ್ಷದಲ್ಲಿ ಕಾನೂನನ್ನು ನಿಯಮಗಳಿಗೆ ವಿರುದ್ಧವಾಗಿ ಸಡಿಲಗೊಳಿಸಿ ನಮ್ಮ ಭಾಗದ ಜನರಿಗೆ ಸಿಕ್ಕಿರುವ ಹಕ್ಕನ್ನು ಕಸಿದುಕೊಳ್ಳುವ ಕೆಲಸ ನಡೆಸಲಾಗಿತ್ತು.
ಇದನ್ನೂ ಓದಿ: ಸ್ವಾವಲಂಬಿ ಜೀವನಕ್ಕಾಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ
ಆದ್ದರಿಂದ KKRDBಯನ್ನ ಮತ್ತೆ ಪ್ರಗತಿಯ ಹಾದಿಗೆ ತರಲು ನಮ್ಮ ಸಂಪೂರ್ಣ ಪ್ರಯತ್ನ ಜಾರಿಯಲ್ಲಿರಲಿದೆ. ಕಲ್ಯಾಣ ಕರ್ನಾಟಕದ ಹೆಸರಿಗೆ ತಕ್ಕಂತೆ ಅರ್ಥ ತರಲು ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.