ಬೆಂಗಳೂರು: ಕಂಬಳ ಎಂದರೆ ಕೇವಲ ಕ್ರೀಡೆಯಲ್ಲ. ಅದು ಕರಾವಳಿ ಜನರ ಸಂಸ್ಕೃತಿಯ ಪ್ರತೀಕ. ಇನ್ನು ಇದುವರೆಗೆ ಕಂಬಳ‌ ಆಯೋಜನೆ ಆಗೋದನ್ನು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತಿತ್ತು. ಆದರೆ ಇದೀಗ ಉದ್ಯಾನನಗರಿ ಬೆಂಗಳೂರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮೊದಲ ಟಿ20ಗೆ ಆರಂಭಿಕ ಜೋಡಿ ಇವರೇ! ನೂತನ ನಾಯಕ, ಕೋಚ್ ಬಳಿಕ ಓಪನರ್ಸ್ ಕೂಡ ಹೊಸಬರು


ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ:


90 ಜೋಡಿ ಕೋಣಗಳೊಂದಿಗೆ ನಡೆಯುವ ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ- ಪುಷ್ಟವಾಗಿ ಬೆಳೆದು, ಪಳಗಿದ ಕೋಣಗಳನ್ನ ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ಈ ಕ್ರೀಡೆಯನ್ನ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಆಯೋಜನೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಕಂಬಳವನ್ನ ರೈತಾಪಿ ಜನರು ಭತ್ತದ ಕೊಯಿಲಿನ ನಂತರದಲ್ಲಿ ಮನರಂಜನೆಗೋಸ್ಕರ ಏರ್ಪಡಿಸಲಾಗುತ್ತಿತ್ತು. ಆದ್ರೆ ಈ ವರ್ಷ ತುಳುಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ‌ ಕಂಬಳ‌ ಆಯೋಜನೆ ಮಾಡಲು ಸಿದ್ದತೆ ನಡೆಯುತ್ತಿದೆ.


ತುಳುಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆ ಮೊಟ್ಟ ಮೊದಲು ಬಾರಿಗೆ ರಾಜಧಾನಿಯಲ್ಲಿ ಕಂಬಳವನ್ನ ಆಯೋಜನೆ ಮಾಡಲು ತುಳುಕೂಟ ನಿರ್ಧರಿಸಿದೆ. ಸದ್ಯ ಈ‌ ಕಂಬಳವನ್ನ ಪ್ಯಾಲೇಸ್ ಗ್ರೌಂಡ್’ನಲ್ಲಿ ಆಯೋಜನೆ ಮಾಡಲು ಜಾಗ ಗುರುತಿಸಿದ್ದು, ಈಗಾಗಲೇ ಮೈಸೂರು ಒಡೆಯರ್ ಜೊತೆಗೂ ಚರ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ನವೆಂಬರ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಕಂಬಳ ನಡೆಸಲು ದಿನಾಂಕ ನಿಗದಿ ಮಾಡಲಿದ್ದು, ಕಂಬಳಕ್ಕೆ 100 ರಿಂದ 150 ಜೋಡಿಯ ಕೋಣಗಳು ಬರಲಿವೆ ಎಂದು ಮೂಲಗಳು ಹೇಳಿವೆ.


ಈ ಕಂಬಳ ಒಟ್ಟು ಮೂರು ದಿನಗಳ ಕಾಲ ನಡೆಯಲಿದ್ದು, ಅಂದಾಜು 50 ಸಾವಿರದಷ್ಟು ಜನರು ಬರುವ ನಿರೀಕ್ಷೆ ಇದೆ. ಬಾಲಿವುಡ್ ನಟಿ ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಚೀಫ್ ಗೆಸ್ಟ್ ಆಗಿ ಬರುವ ಸಾಧ್ಯತೆ ಕೂಡ ಇದ್ದು, ಸಿಎಂ ಸಿದ್ದರಾಮಯ್ಯ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.


ಕಂಬಳಕ್ಕೆ ಬರುವ ಕೋಣಗಳನ್ನ ರೈಲಿನಲ್ಲಿ ಕರೆತರಲು, ಕೇಂದ್ರ ರೈಲು ಸಚಿವರ ಜೊತೆಗೆ ಒಂದು ಸುತ್ತಿನ ಮಾತುಕತೆಯು ನಡೆದಿದೆ ಎನ್ನಲಾಗಿದೆ. ಕೆಸರುಗದ್ದೆಯನ್ನ ಕಂಬಳ ಪ್ರಾರಂಭಕ್ಕೆ ಒಂದು ವಾರ ಮುಂಚಿತವಾಗಿ ಸಿದ್ಧಪಡಿಸಲಾಗುತ್ತದೆ.‌ ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಬೆಂಗಳೂರಿಗರಿಗೆ ಕಂಬಳವನ್ನ ಪರಿಚಯಿಸುವ ಕೆಲಸವನ್ನ  ತುಳುಕೂಟ ಮಾಡುತ್ತಿದೆ.


ಇದನ್ನೂ ಓದಿ: ಚಂದ್ರನ ವೃತ್ತಾಕಾರದ ಕಕ್ಷೆ ಪ್ರವೇಶಿಸಲು ಚಂದ್ರಯಾನ 3 ಕ್ಷಣಗಣನೆ! ಇಸ್ರೋ ಸಿದ್ಧತೆ ಪೂರ್ಣ


ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಕರಾವಳಿ ಮೂಲದ ಜನರು, “ಬೆಂಗಳೂರಿನಲ್ಲೇ ಕಂಬಳ ನಡೆಯುತ್ತಿರುವ ಕಾರಣ ಕುಟುಂಬ ಸಮೇತ ನೋಡಲು ಹೋಗುತ್ತೇವೆ. ‌ಜೊತೆಗೆ ನಮ್ಮ ಬೆಂಗಳೂರಿಗರು ಕಂಬಳದ ಬಗ್ಗೆ ತಿಳಿದುಕೊಳ್ಳುವುದಕ್ಕೂ ಇದು ಸಹಾಯವಾಗಲಿದೆ” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ