ಬೆಂಗಳೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಏರ್ಪಡಿಸಿರುವ ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿ ಅಚ್ಚ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ ಏರ್ಪಡಿಸಲಾಗಿದೆ.


COMMERCIAL BREAK
SCROLL TO CONTINUE READING

ಸ್ಪರ್ಧೆಯಲ್ಲಿ ಎಲ್ಲ ಸಾರ್ವಜನಿಕರು ಭಾಗವಹಿಸಲು ಅವಕಾಶವಿರುತ್ತದೆ.ಯಾವುದಾದರೂ ಒಂದು ವಿಷಯದ ಕುರಿತು 5 ನಿಮಿಷದವರೆಗೆ ಕನ್ನಡ ಪದಗಳನ್ನು ಮಾತ್ರ ಬಳಸಿ ಮಾತನಾಡಿ, ವಿಡಿಯೋ ಚಿತ್ರೀಕರಿಸಿ ಸ್ಪರ್ಧೆಗೆ ಕಳುಹಿಸಬಹುದು.


ಇದನ್ನೂ ಓದಿ: 7th Pay Commission : ಕೇಂದ್ರ ನೌಕರರ ಸಂಬಳದಲ್ಲಿ ಸಿಗಲಿದೆ Double Bonanza! DA ಶೇ.3 ರಷ್ಟು ಮತ್ತು ಬಾಕಿ ಲೆಕ್ಕಾಚಾರ ನೋಡಿ


ಜಿಲ್ಲಾ ಹಂತದ ಹಾಗೂ ಹೊರನಾಡಿನವರಿಗಾಗಿ ಇರುವ ಮೊದಲ ಹಂತದ ಸ್ಪರ್ಧೆಯಲ್ಲಿ  ಭಾಗವಹಿಸಲು ಅಕ್ಟೋಬರ್ 26 ರಾತ್ರಿ 10 ಗಂಟೆಯೊಳಗೆ ಸಾರ್ವಜನಿಕರು ತಮ್ಮ ಮಾಹಿತಿಯೊಂದಿಗೆ ವಿಡಿಯೋ ಕೊಂಡಿಯನ್ನು https://forms.gle/CRfQAZonSGQh83Sf7 ಗೂಗಲ್ ನಮೂನೆಯಲ್ಲಿ ನಮೂದಿಸಬಹುದು.


ಏಮ್ಸ್ ಗೆ ದಾಖಲಾದ ಬಂಗಾಳದ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್


ಜಿಲ್ಲಾ ಹಂತದಲ್ಲಿ ಮೊದಲನೆ, ಎರಡನೆ ಹಾಗೂ ಮೂರನೇ ಸ್ಥಾನದಲ್ಲಿ ವಿಜೇತರಿಗೆ ಕ್ರಮವಾಗಿ ರೂ.5 ಸಾವಿರ, ರೂ.3 ಸಾವಿರ ಮತ್ತು ರೂ.2 ಸಾವಿರ ಬಹುಮಾನ ನೀಡಲಾಗುತ್ತದೆ.ವಿಜೇತರ ವಿವರಗಳನ್ನು ಅಕ್ಟೋಬರ್ 28 ರಂದು ಅವರ ಇ-ಮೇಲ್ ಅಥವಾ ದೂರವಾಣಿ ಪಠ್ಯ ಸಂದೇಶದ ಮೂಲಕ ಮಾಹಿತಿ ನೀಡಲಾಗುತ್ತದೆ.


ಬೆಂಗಳೂರಿನಲ್ಲಿ ಅಕ್ಟೋಬರ್ 30 ರಂದು ಅಂತಿಮ ಹಂತದ ಸ್ಪರ್ಧೆಯನ್ನು ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.