ಬೆಂಗಳೂರು: ಬೆಂಗಳೂರು ಐಟಿ ಸಿಟಿಯಾಗಿ ಮಾರ್ಪಟ್ಟಿದೆ.ಇದರಿಂದ ನಗರದೆಲ್ಲಡೆ ಇಂಗ್ಲಿಷ್ ನಾಮಫಲಕಗಳೇ ರಾಜಾಜಿಸುತ್ತಿದೆ. ರಾಜಧಾನಿಯಲ್ಲಿ ಕನ್ನಡ ನಾಮಫಲಕ ರೂಲ್ಸ್ ಇದ್ರೂ ಉದ್ದಿಮೆಗಳು ಫಾಲೋನೇ ಮಾಡ್ತಿಲ್ಲ.ಇದು ಕನ್ನಡ ಪರ ಸಂಘನೆಗಳ ಕೆಂಗಣ್ಣಿಗೆ ಗುರಿಯಾಗಿದೆ.ಈ ಬಗ್ಗೆ  ಕೆರಳಿರೋ ಕರವೇ ಕನ್ನಡ ನೆಲ, ಜಲ, ಅನ್ನ ತಿಂದುಂಡು ಕನ್ನಡಕ್ಕೆ ಅಗೌರವ ತೋರುವ ಉದ್ದಿಮೆಗಳ ವಿರುದ್ದ ಕರವೇ ಕಹಳೆ ಮೊಳಗಿಸಿತ್ತು. ರಾಜಧಾನಿಯ ವಿವಿಧ ರಸ್ತೆಗಳಲ್ಲಿ ಬೃಹತ್ ರ್ಯಾಲಿ ನಡೆಸಿ ಇಂಗ್ಲಿಷ್ ಬೋರ್ಡ್ಗಳನ್ನ ಧ್ವಂಸಗೊಳಿಸಿ, ಜಾಹೀರಾತು ಫಲಕಗಳನ್ನು ಕಿತ್ತು ಹಾಕಿದ್ರು, ಹಾಗಾದ್ರೆ ಬೆಂಳೂರಿನಲ್ಲಿ ಕರವೇ ಇಂಗ್ಲಿಷ್ ಬೋರ್ಡ್  ಸಮರ ಹೇಗಿತ್ತು ಬನ್ನಿ ತೋರಿಸ್ತೀವಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Daily GK Quiz: ವಿಶ್ವ ಪ್ರಸಿದ್ಧ ಗೊಮ್ಮಟೇಶ್ವರ ಪ್ರತಿಮೆ ಎಲ್ಲಿದೆ..?


ಬೆಂಗಳೂರಿನಲ್ಲಿ ಇಂಗ್ಲಿಷ್ ನಾಮಫಲಕ ಧ್ವಂಸಗೊಳಿಸಿ ಆಕ್ರೋಶ: 


ಜಗತ್ತಿನ ಪ್ರಮುಖ ನಗರಗಳ ಪೈಕಿ ಬೆಂಗಳೂರು ಒಂದು. ವಿಶ್ವಮಟ್ಟದಲ್ಲಿ ಬೆಂಗಳೂರು ಹೆಸರು ರಾರಾಜಿಸುತ್ತಿದೆ.ನಗರ ಬೆಳೆದಂತೆ ಕನ್ನಡ ನೆಲದಲ್ಲೇ ಕನ್ನಡವನ್ನ ಕಡೆಗಣಿಸಲಾಗ್ತಿದೆ ಅನ್ನೋ ಆರೋಪ ಇದೆ. ನಗರದಲ್ಲಿ ನಾಮಫಲಕಗಲ್ಲಿ  ಶೇ 60 ರಷ್ಟು ಕನ್ನಡ ನಾಮಫಲಕ ಆಳವಡಿಕೆಗೆ ಸರ್ಕಾರ ಸೂಚನೆ ನೀಡಿದ್ರೂ ಉದ್ದಿಮೆಗಳು ನಿರ್ಲಕ್ಷ್ಯ ಮಾಡ್ತಿವೆ.ಈ ಬಗ್ಗೆ ಕೆರಳಿಸಿರೋ ಕನ್ನಡ ಪರ ಸಂಘಟೆಗಳು ಇಂದು  ಹೋರಾಟಕ್ಕೆ ಧುಮ್ಮುಕ್ಕಿದ್ದುವು. ಏರ್ಪೋರ್ಟ್ ಸಾದಹಳ್ಳಿ ಟೋಲ್ ಗೇಟ್ ನಿಂದ ಆರಂಭವಾದ ಇಂದಿನ ಹೋರಾಟ, ನಗರದ ವಿವಿಧ ರಸ್ತೆಗಳಲ್ಲಿ  ರ್ಯಾಲಿ ನಡೆಸಿದ ಕರವೇ ಕಾರ್ಯಕರ್ತರು ಇಂಗ್ಲಿಷ್ ನಾಮಫಕಗಳನ್ನ ಧ್ವಂಸಗೊಳಿಸಿ, ಜಾಹೀರಾತು ಫಲಕಗಳನ್ನ ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ರು. 


ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 6ರ ಷ್ಟು ಕನ್ನಡ ನಾಮಫಲಕಗಳ ಅಳವಡಿಕೆಗೆ ಸರ್ಕಾರ ಸೂಚನೆ ಇದೆ. ಆದರೆ ಕನ್ನಡ ನಾಮಫಕಲ ಆಳವಡಿಕೆಗೆ ವಾಣಿಜ್ಯ ಉದ್ದಿಮೆಗಳು ಅಸೆಡ್ಡೆ ತೋರುತ್ತಿದ್ರು . ಕನ್ನ ಡ ನಾಮಫಕಕ ಆಳವಡಿಕೆ ನಿರ್ಲಕ್ಷ್ಮ ಮಾಡುತ್ತಿರುವವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ  ಬೀದಿಗಿಳಿದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ವೇಳೆ ಆಂಗ್ಲ ಭಾಷೆಯಲ್ಲಿದ್ದ ನಾಮಫಲಕಗಳನ್ನು ಕಿತ್ತೊಗೆದು ಆಕ್ರೋಶ ವ್ಯಕ್ತಪಡಿಸಿದರು. ಕೆಲವೆಡೆ ಕಲ್ಲು ತೂರಾಟ, ನಾಮಫಲಕಗಳ ಧ್ವಂಸದಂತಹ ಘಟನೆಗಳು ನಡೆದಿವು. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.ಸಾದಹಳ್ಳಿ ಟೋಲ್ ಗೇಟ್‌ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ವೇಳೆ ವ್ಯಾಪಕ ಆಕ್ರೋಶ ಹಾಗೂ ನಾಮಫಲಕ ಧ್ವಂಸ ಪ್ರಕರಣಗಳು ನಡೆದಿದ್ದರಿಂದ ಪರಿಸ್ಥಿತಿ ಕೈಮೀರಿತ್ತು. ಈ ಹಿನ್ನೆಲೆಯಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಅವರನ್ನು ಬಂಧಿಸಿ ಕರೆದೊಯ್ದರು. ಈ ಪ್ರತಿಭಟನೆ ಕಬ್ಬನ್ ಪಾರ್ಕ್‌ವರೆಗೆ ನಡೆಸಬೇಕಾಗಿತ್ತು.ಮೆರವಣಿಯ ಮಾರ್ಗದಲ್ಲಿ ಕನ್ನಡ ನಾಮಫಲಕಗಳನ್ನು ಹಾಕದ ಅಂಗಡಿ ಮುಂಗಟ್ಟುಗಳಿಗೆ ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದರು.


ಇದನ್ನೂ ಓದಿ: Daily GK Quiz: ಕರ್ನಾಟಕದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಎಲ್ಲಿದೆ?


ದೇವನಹಳ್ಳಿಯ ಸಾದಹಳ್ಳಿ ಟೋಲ್ನಿಂದ ಬೆಂಗಳೂರು ಕಬ್ಬನ್ ಪಾರ್ಕ್ವರೆಗೆ ರ್ಯಾ್ಲಿ ಹಮ್ಮಿಕೊಂಡಿದ್ದ ಕರವೇ ಕಾರ್ಯಕರ್ತರು ಎಂ.ಜಿ.ರಸ್ತೆ , ಬ್ರಿಗೇಡ್ ರಸ್ತೆ, ಯುಬಿ ಸಿಟಿ ರಸ್ತೆಗಳಲ್ಲಿ ಕನ್ನಡ ಬಳಸದ ಮಳಿಗೆಗಳ ವಿರುದ್ಧ ಆಕ್ರೋಶ ತೋರಿದರು. ಕಾರ್ಯಕರ್ತರು ಇಂಗ್ಲಿಷ್ ನಾಮಫಲಕ ಹೊಂದಿದ್ದ ಎಂ.ಜಿ ರಸ್ತೆಯ ಕೆನರಾ ಬ್ಯಾಂಕ್ ಬೋರ್ಡ್ ಸೇರಿದಂತೆ ಕೆಲ ಆಂಗ್ಲ ಭಾಷಾ ನಾಮಫಲಕಗಳನ್ನು ಪುಡಿಗಟ್ಟಿದರು. ಇದೇ ಸಂದರ್ಭದಲ್ಲಿ ಪೊಲೀಸರು ಬರುತ್ತಿದ್ದಂತೆ ಕೆಲ ಕಾರ್ಯಕರ್ತರು ದಿಕ್ಕಾಪಾಲಾಗಿ ಓಡಿದ ಪ್ರಸಂಗವೂ ನಡೆಯಿತು. ಇನ್ನು ಈ ವೇಳೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ ಎ.ನಾರಾಯಣಗೌಡ,ರಾಜಧಾನಿ ಬೆಂಗಳೂರು ಕನ್ನಡಿಗರ ಕೈತಪ್ಪಿ ಹೋಗುವ ಸ್ಥಿತಿಯಲ್ಲಿದೆ. ಬೇರೆ ರಾಜ್ಯಗಳಿಂದ ಬಂದ ಹಿಂದಿ ಭಾಷಿಕರು ಕನ್ನಡ ಬಳಸದೆ ಧಿಮಾಕು ಪ್ರದರ್ಶನ ಮಾಡುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಎಚ್ಚರಿಕೆ ನೀಡುವುದಕ್ಕಾಗಿ ಈ ಈ ಹೋರಾಟ  ಎಂದು ಹೇಳಿದರು.


ಬಿಬಿಎಂಪಿ ನಾಮಫಲಕ್ಕೆ ರೂಲ್ಸ್ ಮಾಡಿದ್ರೂ ಬಹುತೇಕ ಮಳಿಗೆದಾರರು ಮಾಲ್ ಗಳು ಕನ್ನಡವನ್ನ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಫಕಕಗಳಲ್ಲಿ ಕನ್ನಡ ದ್ರೂ ಅದು ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುತ್ತದೆ. ಆದ್ರೆ ಹಲವು ಬಾರಿ ಪಾಲಿಕೆ ಕೂಡ ಗಡವು ನೀಡಿದ್ರೂ ಉದ್ದಿಮೆಗಳು ತಲೆಕೆಡಿಸಿಕೊಂಡಿರಲಿಲ್ಲ.ಆದ್ರೆ ಇವತ್ತು ಕರವೇ ಕಿಚ್ಚಿಗೆ ಉದ್ದಿಮೆಗಳು ನಡುಗಿದ್ದಾರೆ. ಇನ್ನಾದ್ರೂ ಇಂಗ್ಲಿಪ್ ನಾಮಫಲಕ ಜಾಗದಲ್ಲಿ ಕನ್ನಡ ಸೇರ್ಪಣೆ ಮಾಡ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.