ಫೆ. 18, 19 ಮತ್ತು 20 ರಂದು ಕನ್ನಡ ಸಾಹಿತ್ಯ ಪರೀಕ್ಷೆ
ಕನ್ನಡ ಸಾಹಿತ್ಯ ಪರಿಷತ್ತು ಪ್ರಸಕ್ತ ಸಾಲಿನ ವಿವಿಧ ಪರೀಕ್ಷೆಗಳನ್ನು ಫೆ. 18, 19 ಮತ್ತು 20 ರಂದು ನಡೆಯಲಿವೆ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಪ್ರಸಕ್ತ ಸಾಲಿನ ವಿವಿಧ ಪರೀಕ್ಷೆಗಳನ್ನು ಫೆ. 18, 19 ಮತ್ತು 20 ರಂದು ನಡೆಯಲಿವೆ.
ಕೋವಿಡ್-19ರ ಮಾರ್ಗಸೂಚಿಯಂತೆ ಅನಿರ್ಧಿಷ್ಠ ಕಾಲಾವಧಿಯವರೆಗೂ ಮುಂದೂಡಲಾಗಿದ್ದ 2021-22ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳನ್ನು ಪ್ರಸ್ತುತ ಫೆಬ್ರವರಿ 18, 19 ಮತ್ತು 20 ರಂದು ಒಟ್ಟು 3 ದಿನಗಳ ಕಾಲ ರಾಜ್ಯದ 19 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: Zameer Ahmed : ಕೆಪಿಸಿಸಿಯಿಂದ ಶಾಸಕ ಜಮೀರ್ ಅಹಮದ್ ಗೆ ಬಿಗ್ ಶಾಕ್!
ಈಗಾಗಲೇ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಬದಲಾದ ಪರೀಕ್ಷಾ ವೇಳಾಪಟ್ಟಿಯನ್ನು ಅಂಚೆ ಮೂಲಕ ಕಳುಹಿಸಲಾಗಿದೆ. ಫೆ. 10ರ ನಂತರವೂ ವೇಳಾಪಟ್ಟಿ ತಲುಪದಿರುವ ಬಗ್ಗೆ ವಿದ್ಯಾರ್ಥಿಗಳು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18 ಇವರಲ್ಲಿ ಈ ವಿಷಯವನ್ನು ತಿಳಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-26623584/ 26612991 ಅಥವಾ ವೆಬ್‌ಸೈಟ್ www.kasapa.in ನ್ನು ಸಂಪರ್ಕಿಸಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.