ಬೆಂಗಳೂರು : ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯು 12 ನೇ ತರಗತಿ ಅಥವಾ ದ್ವಿತೀಯ ಪಿಯುಸಿ (PUC II) ವಾರ್ಷಿಕ ಪರೀಕ್ಷೆ 2022 ರ ವೇಳಾಪಟ್ಟಿ ಬಿಡುಗಡೆ ಮಾಡಿದೆ. ವೇಳಾಪಟ್ಟಿಯ ಪ್ರಕಾರ, ವಾರ್ಷಿಕ ದ್ವಿತೀಯ ಪಿಯುಸಿ ಪರೀಕ್ಷೆಗಳು ಏಪ್ರಿಲ್ 16 ರಿಂದ ಮೇ 6 ರವರೆಗೆ ನಡುವೆ ನಡೆಯಲಿವೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್-- pue.kar.nic.in ಮೂಲಕ  ದ್ವಿತೀಯ ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು.


COMMERCIAL BREAK
SCROLL TO CONTINUE READING

 ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು(2nd PUC Exam 2022) ಬೆಳಿಗ್ಗೆ ವೇಳೆಯಲ್ಲಿ ನಡೆಸಲಾಗುತ್ತದೆ - ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ.  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಮೊದಲ ದಿನ ಗಣಿತ, ಶಿಕ್ಷಣ ಮತ್ತು ಮೂಲ ಗಣಿತ ಪರೀಕ್ಷೆಯೊಂದಿಗೆ ಪ್ರಾರಂಭವಾಗಲಿದ್ದು, ನಂತರ ಏಪ್ರಿಲ್ 18 ರಂದು ರಾಜ್ಯಶಾಸ್ತ್ರ ಮತ್ತು ಸ್ಟ್ಯಾಟಿಸ್ಟಿಕ್ಸ್ ಪರೀಕ್ಷೆಗಳು ನಡೆಯಲಿವೆ.


PUC II) ಟೈಮ್ ಟೇಬಲ್ 2022: ಡೌನ್‌ಲೋಡ್ ಮಾಡುವುದು ಹೇಗೆ


- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ-- pue.kar.nic.in.


- 'Bulletin Board' ವಿಭಾಗದ ಅಡಿಯಲ್ಲಿ, 'download time table' ಲಿಂಕ್ ಅನ್ನು ಕ್ಲಿಕ್ ಮಾಡಿ.


- ಪರದೆಯ ಮೇಲೆ PDF ಕಾಣಿಸುತ್ತದೆ. PDF ಟೈಮ್ ಟೇಬಲ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.


2nd ಪಿಯುಸಿ ಪರೀಕ್ಷೆ 2022: ವೇಳಾಪಟ್ಟಿ ಈ ಕೆಳಗಿನಂತಿದೆ.


ಏಪ್ರಿಲ್ 16- ಗಣಿತ, ಶಿಕ್ಷಣ, ಮೂಲ ಗಣಿತ


ಏಪ್ರಿಲ್ 18- ರಾಜ್ಯಶಾಸ್ತ್ರ, ಸ್ಟ್ಯಾಟಿಸ್ಟಿಕ್ಸ್


ಏಪ್ರಿಲ್ 19- ಮಾಹಿತಿ ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ  ಮತ್ತು ವೆಲ್ನೆಸ್


ಏಪ್ರಿಲ್ 20- ಇತಿಹಾಸ, ಭೌತಶಾಸ್ತ್ರ


ಏಪ್ರಿಲ್ 21- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೇಬಿಕ್, ಫ್ರೆಂಚ್


ಏಪ್ರಿಲ್ 22- ಲಾಜಿಕ್, ಬಿಸಿನೆಸ್ ಸ್ಟಡೀಸ್


ಏಪ್ರಿಲ್ 23- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ


ಏಪ್ರಿಲ್ 25 - ಅರ್ಥಶಾಸ್ತ್ರ


ಏಪ್ರಿಲ್ 26- ಹಿಂದಿ


ಏಪ್ರಿಲ್ 28- ಕನ್ನಡ


ಏಪ್ರಿಲ್ 30- ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್


ಮೇ 2- ಭೂಗೋಳ, ಜೀವಶಾಸ್ತ್ರ


ಮೇ 4 - ಇಂಗ್ಲಿಷ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.