Karnataka 2nd PUC Supplementary Result 2023 today: ಪದವಿ ಪೂರ್ವ ಶಿಕ್ಷಣ ಇಲಾಖೆಯು ಕರ್ನಾಟಕ 12 ನೇ ತರಗತಿಯ ಪೂರಕ ಫಲಿತಾಂಶ 2023 ಅನ್ನು ಇಂದು ಅಂದರೆ ಜೂನ್ 20 ರಂದು ಪ್ರಕಟಿಸಲು ಸಜ್ಜಾಗಿದೆ. ಫಲಿತಾಂಶ ಲಿಂಕ್ ಅನ್ನು ಸಕ್ರಿಯಗೊಳಿಸಿದ ನಂತರ, ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು. karresults.nic.in ನಲ್ಲಿ ಅಧಿಕೃತ ವೆಬ್‌ಸೈಟ್‌ನಿಂದ ಪರೀಕ್ಷೆ ರಿಸಲ್ಟ್ ಪರಿಶೀಲಿಸಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: GST Council Meet: ನಕಲಿ ಬಿಲ್ ನೀಡುವವರ ಮೇಲೆ ನಿಯಂತ್ರಣ, ರೀಟರ್ನ್ ನಲ್ಲಿ ಹೆಚ್ಚುವರಿ ಪರಿಶೀಲನೆಯ ಸಾಧ್ಯತೆ


ಕರ್ನಾಟಕ 12 ನೇ ತರಗತಿಯ ಪೂರಕ ಪರೀಕ್ಷೆ 2023 ಅನ್ನು ಮೇ 22 ರಿಂದ ಜೂನ್ 02 ರವರೆಗೆ ನಡೆಸಲಾಯಿತು. ಇದೀಗ, ಅಧಿಕಾರಿಗಳು ಅದರ ಫಲಿತಾಂಶವನ್ನು ಘೋಷಿಸಲಿದ್ದಾರೆ. ಫಲಿತಾಂಶದ ಲಿಂಕ್ ಅನ್ನು ಸಕ್ರಿಯಗೊಳಿಸಿದ ನಂತರ, ವಿದ್ಯಾರ್ಥಿಗಳು ತಮ್ಮ ಪೂರಕ ಫಲಿತಾಂಶವನ್ನು ಅಧಿಕೃತ ಪೋರ್ಟಲ್‌ ನಿಂದ ತಿಳಿದುಕೊಳ್ಳಬಹುದು.


ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2023 ಡೌನ್‌ಲೋಡ್ ಮಾಡುವುದು ಹೇಗೆ?


ಹಂತ 1: karresults.nic.in ನಲ್ಲಿ ಅಧಿಕೃತ ವೆಬ್‌ ಸೈಟ್ ಗೆ ಭೇಟಿ ನೀಡಿ


ಹಂತ 2: ಮುಖಪುಟದಲ್ಲಿ ಕರ್ನಾಟಕ PUC ಪೂರಕ ಫಲಿತಾಂಶ 2023ರ ಲಿಂಕ್ ಅನ್ನು ಕ್ಲಿಕ್ ಮಾಡಿ


ಹಂತ 3: ಹೊಸ ಪುಟವು ತೆರೆಯುತ್ತದೆ. ಅಲ್ಲಿ ನಿಮ್ಮ ನೋಂದಣಿ ಸಂಖ್ಯೆ ಮತ್ತು ಇತರ ವಿವರಗಳನ್ನು ನಮೂದಿಸಿ


ಹಂತ 4: ನಿಮ್ಮ ಪೂರಕ ಪರೀಕ್ಷೆಯ ಫಲಿತಾಂಶ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.


 ಹಂತ 5: ರಿಸಲ್ಟ್ ನ ಹಾರ್ಡ್ ಕಾಪಿಯನ್ನು ಡೌನ್‌ಲೋಡ್ ಮಾಡಿ ತೆಗೆದುಕೊಳ್ಳಿ


ಇದನ್ನೂ ಓದಿ: Bigg Boss OTT 2: ಬಿಗ್‌ ಬಾಸ್‌ ಒಟಿಟಿ ಸೀಸನ್‌ 2 ರ ಸ್ಪರ್ಧಿಗಳ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ


ಈ ವರ್ಷ, ಕರ್ನಾಟಕ ಪಿಯುಸಿ 12 ನೇ ತರಗತಿಯ ಪರೀಕ್ಷೆಗಳು 2023 ಅನ್ನು ಮಾರ್ಚ್ 9 ರಿಂದ 29, 2023 ರವರೆಗೆ ನಡೆಸಲಾಯಿತು. ಒಟ್ಟು 7,02,067 ಅಭ್ಯರ್ಥಿಗಳು ಹಾಜರಾಗಿದ್ದರು. ಪರೀಕ್ಷೆಯಲ್ಲಿ, 5,24,209 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಶೇಕಡಾ 74.67 ರಷ್ಟು ಉತ್ತೀರ್ಣರಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ