Basavaraj Bommai : ಯೂಕ್ರೇನ್ ನಲ್ಲಿ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತ : ಸಿಎಂ ಬೊಮ್ಮಾಯಿ
ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್ ಗೆ ಕಳಿಸ್ತಿದ್ದಾರೆ. ಅಲ್ಲಿಂದ ವಿದ್ಯಾರ್ಥಿಗಳನ್ನು ಉಕ್ರೇನಿನ ಪಶ್ಚಿಮ ಭಾಗದಲ್ಲಿರುವವ ರಸ್ತೆ ಮಾರ್ಗದ ಮೂಲಕ ಸ್ಥಳಾಂತರ ಮಾಡಬಹುದೆಂಬ ಚಿಂತನೆ ನಡೀತಿದೆ.
ಬೆಂಗಳೂರು : ಯೂಕ್ರೇನ್ ವಿರುದ್ಧ ರಷ್ಯಾ ಯುದ್ಧ(Ukraine Russia War) ಸಾರಿದ್ದು, ಉನ್ನತ ಶಿಕ್ಷಣದಲ್ಲಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಈ ಹಿನ್ನಲೆಯಲ್ಲಿ ಅವರ ಪೋಷಕರಿಗೂ ಆತಂಕ ಸೃಷ್ಟಿಯಾಗಿದೆ.
ಇಂದು ವಿದೇಶಾಂಗ ಸಚಿವ ಜೈಶಂಕರ್ ಜತೆ ಮಾತುಕತೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai), ವಿದ್ಯಾರ್ಥಿಗಳು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಅವರು ಸದ್ಯಕ್ಕೆ ಸುರಕ್ಷಿತ ಸ್ಥಳದಲ್ಲಿರಬೇಕು, ಭಾರತ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡ್ತಿದೆ. ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್ ಗೆ ಕಳಿಸ್ತಿದ್ದಾರೆ. ಅಲ್ಲಿಂದ ವಿದ್ಯಾರ್ಥಿಗಳನ್ನು ಉಕ್ರೇನಿನ ಪಶ್ಚಿಮ ಭಾಗದಲ್ಲಿರುವವ ರಸ್ತೆ ಮಾರ್ಗದ ಮೂಲಕ ಸ್ಥಳಾಂತರ ಮಾಡಬಹುದೆಂಬ ಚಿಂತನೆ ನಡೀತಿದೆ.
ಇದನ್ನೂ ಓದಿ : Karnataka Government : ರಾಜ್ಯ ಸರ್ಕಾರದಿಂದ ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯವಾಣಿ!
ವಾಯು ಮಾರ್ಗದ ಮೂಲಕ ಸ್ಥಳಾಂತರ ಸಾಧ್ಯವಿಲ್ಲ
ಈ ಸಂಬಂಧ ವಿದೇಶಾಂಗ ಮಟ್ಟದಲ್ಲಿ ಮಾತುಕತೆಗಳು ನಡೀತಿವೆ ಎಂದರು. ಸರಿಯಾದ ಸಂದರ್ಭ ನೋಡಿಕೊಂಡು ನಮ್ಮ ರಾಯಭಾರಿ ಕಚೇರಿ(Embassy of Ukraine in the Republic of India) ಸಂದೇಶ ಕೊಡಲಿದೆ, ಸದ್ಯ ಎಲ್ಲರೂ ಸುರಕ್ಷಿತವಾಗಿ ಇದ್ದಾರೆ.ಎಲ್ಲರ ಜತೆ ನಮ್ಮ ರಾಯಭಾರಿ ಕಚೇರಿ ಅಧಿಕಾರಿಗಳು ಸಂಪರ್ಕದಲ್ಲಿ ಇದ್ದಾರೆ.ನಮ್ಮವರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡುವಂತೆ ಹೇಳಿದ್ದೇವೆ.ನಮ್ಮ ಸರ್ಕಾರವೂ ಹೆಲ್ಪ್ ಲೈನ್ ಆರಂಭಿಸಿದೆ,ಭಾರತ ಸರ್ಕಾರವೂ ಹೆಲ್ಪ್ ಲೈನ್ ಆರಂಭಿಸಿದೆ.ಯುದ್ಧದ ಪರಿಸ್ಥಿತಿ ತಿಳಿಗೊಳ್ಳುವರೆಗೂ ಎಲ್ಲರೂ ಎಚ್ಚರಿಕೆಯಿಂದಿರಬೇಕೆಂದು ವಿದೇಶಾಂಗ ಇಲಾಖೆಯಿಂದ ಸೂಚನೆ ನೀಡಲಾಗಿದೆ ಎಂದರು.
ಈಗಾಗಲೇ ರಾಜ್ಯ ಸರ್ಕಾರ ಯೂಕ್ರೇನ್(Ukraine) ನಲ್ಲಿ ಸಿಲುಕಿರುವ ವಿದ್ಯಾರ್ಥಿ ಸಹಾಯವಾಣಿ ಪ್ರಾರಂಭಮಾಡಿದೆ. ಸಹಾಯವಾಣಿ ನಂಬರ್ : 080-1070,080-22340676 ಅಥವಾ manoarya@gmail.com/revenuedmkar@gmail.com ಕ್ಕೆ ಸಂಪರ್ಕಿಸಬಹುದು. ಈ ಸಾಹಾಯವಾಣಿ ದಿನದ 24x7 ಸಹಾಯವಾಣಿ ಓಪನ್ ಇರಲಿದೆ, ಹಾಗೂ ಇದರ ಜವಾಬ್ದಾರಿಯನ್ನ ರಾಜ್ಯ ವಿಪ್ಪತು ನಿರ್ವಾಣ ಇಲಾಖೆ ಆಯುಕ್ತ,ಮನೋಜ್ ರಂಜನ್ ಗೆ ವಹಿಸಲಾಗಿದೆ.ಯೂಕ್ರೇನ್ ನಲ್ಲಿರುವ ಕನ್ನಡಿಗರ ಸಮಸ್ಯೆಗಳಿಗೆ ಅಥವಾ ಯಾವುದೇ ಮಾಹಿತಿಗೆ ಸಹಾಯವಾಣಿಗೆ ಸಂಪರ್ಕ ಮಾಡಬಹುದು.
ಇನ್ನು ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ(Medical Education) ಪಡೆಯುವುದಕ್ಕೆ ಯೂಕ್ರೇನ್ ನಲ್ಲಿದ್ದಾರೆ. ಈ ವರೆಗೆ ಜೀ ಕನ್ನಡ ನ್ಯೂಸ್ ಗೆ ಯೂಕ್ರೇನ್ ನಲ್ಲಿ ಇರುವ 11 ವಿದ್ಯಾರ್ಥಿಗಳನ್ನ ಸಂಪರ್ಕಿಸಲಾಗಿದೆ.
ಇದನ್ನೂ ಓದಿ : JOBS: ಅಥ್ಲೆಟಿಕ್ ತರಬೇತಿದಾರರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ
ರಾಜ್ಯದ ವಿದ್ಯಾರ್ಥಿಗಳು ಯೂಕ್ರೇನ್ ತುರ್ತು ಪರಿಸ್ಥಿತಿಯಲ್ಲಿ ; ಪೋಷಕರಲ್ಲಿ ಆತಂಕ
ರಾಯಚೂರುನ 6 ವಿದ್ಯಾರ್ಥಿಗಳು ಯೂಕ್ರೇನ್ ಸಂಕಷ್ಟದಲ್ಲಿದ್ದಾರೆ. ಯುದ್ಧದ ತುರ್ತು ಪರಿಸ್ಥಿತಿ ಹಿನ್ನಲೆ ಎಂಬಿಬಿಎಸ್(MBBS) ವಿದ್ಯಾಭ್ಯಾಸಕ್ಕೆ ಉಕ್ರೇನ್ ಗೆ ತೆರಳಿದ್ದ 6 ವಿದ್ಯಾರ್ಥಿಗಳು ಆತಂತ್ರಕ್ಕೆ ಸಿಲುಕಿದ್ದಾರೆ.
1) ಅಭಿಷೇಕ್, ದೇವದುರ್ಗದ ಬುದ್ದಿನ್ನಿ ಜಾಗಟಗಲ್ ಗ್ರಾಮದ ನಿವಾಸಿ.
2) ಪ್ರಜ್ವಲ್ ಹೂಗಾರ್, ಲಿಂಗಸ್ಗೂರು ಪಟ್ಟಣದ ನಿವಾಸಿ
3) ರುಬೀನಾ, ಹಟ್ಟಿ ಚಿನಗನದ ಗಣಿ ನಿವಾಸಿ
4) ಚನ್ನವಿರೇಶ್, ರಾಯಚೂರಿನ ದೇವಸಗೂರು ನಿವಾಸಿ.
5) ಸೋಮು, ಮಸ್ಕಿ ನಿವಾಸಿ
6) ನಂದೀಶ್, ಸಿಂಧನೂರಿನ ಬಾದರ್ಲಿ ನಿವಾಸಿ
ಇದನ್ನೂ ಓದಿ : ಸಿಖ್ ವಿದ್ಯಾರ್ಥಿನಿಗೆ ಟರ್ಬನ್ ತೆಗೆಯಲು ಹೇಳಿದ ಮೌಂಟ್ ಕಾರ್ಮೆಲ್ ಕಾಲೇಜಿನ ಆಡಳಿತ ಮಂಡಳಿ...!
ಇನ್ನು ಉಳಿದಂತೆ ಮಂಡ್ಯ ಜಿಲ್ಲೆಯ(Mandya District) ಮನೋಜ್ ಗೌಡ ಹಾಗೂ ಗಾಯತ್ರಿ ಖನ್ನಾ ವಿದ್ಯಾರ್ಥಿಗಳು ಯೂಕ್ರೇನ್ ನಲ್ಲಿದ್ದಾರೆ. ಚಿಕ್ಕೋಡಿಯ ಪ್ರಿಯಾ ನಿಡಗುಂದಿ, ಹಾಗೂ ರಕ್ಷಿತ್ ಗಣಿ, ಗದಗಿನ ಅರುಣ್ ಕುಮಾರ್ ಸಿಲುಕಿರುವ ಮಾಹಿತಿ ಲಭ್ಯವಿದೆ.
ವಿದ್ಯಾರ್ಥಿಗಳ ಜೊತೆ ಪೋಷಕರು ಸಂಪರ್ಕಕದಲ್ಲಿದ್ದಾರೆ, ಅಭಯ ನೀಡುತ್ತಿದ್ದಾರೆ ಹಾಗೂ ಇದರ ಜೊತೆ ಜಿಲ್ಲಾಧಿಕಾರಿ(DC) ಜೊತೆಯಲ್ಲೂ ಸಂಪರ್ಕಿಸಿ ಬೇಗ ಭಾರತಕ್ಕೆ ಕರೆತರಲು ವಿನಂತಿ ಮಾಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ