ಚಾಮರಾಜನಗರ: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಾಗಿ ರಾಜಕೀಯ ಪಕ್ಷಗಳು ಸಿದ್ಧತೆಗಳನ್ನು ಆರಂಭಿಸಿವೆ. ಈ ಮಧ್ಯೆ ರಾಜಕೀಯ ಪಕ್ಷಗಳ ನಡುವಿನ ವಾಕ್ಸಮರವೂ ಜೋರಾಗಿಯೇ ಇದೆ. ಚಾಮರಾಜನಗರದಲ್ಲಿಂದು  ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ವಿ.ಶ್ರೀನಿವಾಸಪ್ರಸಾದ್ ಜೆಡಿಎಸ್ ಪಕ್ಷದ ಮಿಷನ್ 123 ಬಗ್ಗೆ ಲೇವಡಿ ಮಾಡಿದ್ದು, ಇರೋರೇ ಪಕ್ಷ ಬಿಟ್ಟು ಹೋಗ್ತಿದ್ದಾರೆ ಇನ್ನು ಅವರೆಲ್ಲಿ ಗೆಲ್ತಾರೆ 123 ಸೀಟು  ಎಂದು ವ್ಯಂಗ್ಯದ ಮಾತುಗಳನ್ನಾಡಿದ್ದಾರೆ. 


COMMERCIAL BREAK
SCROLL TO CONTINUE READING

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಸಂಸದ ವಿ.ಶ್ರೀನಿವಾಸಪ್ರಸಾದ್, ಜಿಟಿಡಿ, ಶ್ರೀನಿವಾಸ್ ಹೀಗೆ ಇರೋ ಶಾಸಕರೇ ಪಕ್ಷ ಬಿಟ್ಟು ಹೋಗ್ತಿದ್ದಾರೆ. ಇದೀಗ ಹೆಚ್.ಡಿ. ಕುಮಾರಸ್ವಾಮಿ ಅವರು ದಲಿತರನ್ನು ಮುಖ್ಯಮಂತ್ರಿಯಾಗಿ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ.  ಅವರ ಪಕ್ಷವು ಗೆದ್ದು ದಲಿತರನ್ನು ಸಿಎಂ ಮಾಡಿ ತೋರಿಸಲಿ. ಸಿ.ಎಂ.ಇಬ್ರಾಹಿಂ ಒಬ್ಬರು ಜೆಡಿಎಸ್ ಪಕ್ಷವನ್ನು ಸೇರಿದರೆ ಎಲ್ಲಾ ಆಗೋಗತ್ತಾ ಎಂದು ನಗುತ್ತಲೇ ಜೆಡಿಎಸ್ ಮಿಷನ್ 123 ರ ಬಗ್ಗೆ ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ.


ಇದನ್ನೂ ಓದಿ- "ಸಂಪುಟ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ತೀರ್ಮಾನ"


ಬಿಜೆಪಿಯ ಮಿಷನ್ 150ರ ಬಗ್ಗೆ ವಿಶ್ವಾಸ:
ಇದೇ ವೇಳೆ ಬಿಜೆಪಿಯ ಮಿಷನ್ 150ರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿ ಆಶಾವಾದಿಯಾಗಿದ್ದು 150 ಸ್ಥಾನಗಳು ಗೆಲ್ಲುವ ವಿಶ್ವಾಸದಲ್ಲಿದೆ. ಬೇರೆ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಆಡಳಿತವನ್ನು ಜನರು ಮೆಚ್ಚಿದ್ದಾರೆ. ಬೆಲೆ ಏರಿಕೆ, ಕೊರೊನಾ ಅವಾಂತರ, ಲಾಕ್ಡೌನ್ ಮಧ್ಯೆಯೂ ಆಡಳಿತ ವಿರೋಧಿ ಅಲೆ ಕಾಣಿಸಿಲ್ಲ. ಬಿಜೆಪಿ ಕಾರ್ಯಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಈಗ ವಿಪಕ್ಷಗಳಲ್ಲಿ ಶಕ್ತಿ ಉಳಿದಿಲ್ಲ, ನಾವು ಮಿಷನ್ 150ನ್ನು ಪೂರೈಸುತ್ತೇವೆ ಎಂದರು.


ಇದನ್ನೂ ಓದಿ- ಈಶ್ವರಪ್ಪ ರಾಜೀನಾಮೆಗೂ ಮುನ್ನ ಅನೇಕ ಟೆಂಡರ್ ಮಂಜೂರು: ಆಲಂ ಪಾಷಾ


ಇದೇ ವೇಳೆ, ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಸಂಸದ ವಿ. ಶ್ರೀನಿವಾಸ ಪ್ರಸಾದ್, ಅತೀ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಸಚಿವ ಸಂಪುಟ ಪುನರ್ ರಚನೆ ಆಗಲಿದೆ. ಈ ಬಾರಿ ಸಚಿವ ಸಂಪುಟದಲ್ಲಿ ಮೈಸೂರು ಭಾಗಕ್ಕೆ ಪ್ರಾಧಾನ್ಯತೆ ಕೊಡುವ ವಿಶ್ವಾಸವಿದೆ. ಮೈಸೂರು ಭಾಗದವರು ಈ ಬಾರಿ ಸಂಪುಟ ಸೇರಲಿದ್ದಾರೆ  ಎಂದು ವಿಶ್ವಾಸದಿಂದ ನುಡಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.