ಬೆಂಗಳೂರು : ಕಲಾಪ ಆರಂಭವಾಗುತ್ತಿದ್ದಂತೆ  ಬಿಜೆಪಿಯ ಶಾಸಕ ಆರಗ ಜ್ಞಾನೇಂದ್ರ ವಿಷಯ ಪ್ರಸ್ತಾಪಿಸಿ, ಪಕ್ಷಕ್ಕೆ ಸೀಮಿತರಲ್ಲದ ನೀವು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಹೋಗಿದ್ದು ನಿಜವೇ? ಅಥವಾ ಇದು ಮಾಧ್ಯಮ ಗಳ ಸೃಷ್ಟಿಯೋ? ನೀವೇ ಸ್ಪಷ್ಟನೆ ನೀಡಿ ಎಂದು ಸಭಾಧ್ಯಕ್ಷರನ್ನು ಕೇಳಿದರು.


COMMERCIAL BREAK
SCROLL TO CONTINUE READING

ಇದಕ್ಕೆ ಸಭಾಧ್ಯಕ್ಷರು, ಮುಖ್ಯಮಂತ್ರಿಗಳು ಔತಣ ಕೂಟಕ್ಕೆ ಕರೆದಿದ್ದರು ಹೋಗಿದ್ದೆ.ಔತಣ ಕೂಟಕ್ಕೆ ಹೋಗುವುದು ತಪ್ಪಲ್ಲವಲ್ಲ? ನಾಳೆ ನೀವು (ವಿಪಕ್ಷ) ಕರೆದರೂ ಔತಣ ಕೂಟಕ್ಕೆ ಬರುವೆ.ಸಭಾಧ್ಯಕ್ಷರಾಗಿದ್ದರೂ ಮನುಷ್ಯನೇ ಅಲ್ಲವೇ ಎಂದಷ್ಟೇ ನುಡಿದರು.


ಇದನ್ನೂ ಓದಿ: ಹೈಟೆಕ್‌ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ₹10 ಸಾವಿರ ಕೋಟಿ ಹೂಡಿಕೆ; ಫಾಕ್ಸ್‌ಕಾನ್ ಕಂಪನಿ!


ಇದಕ್ಕೂ ಮುನ್ನ ಬಿಜೆಪಿಯ ಶಾಸಕ ಸುರೇಶ ಕುಮಾರ್ ಮಾತನಾಡಿ,ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ 9 ಸಚಿವರು ಇಲ್ಲ.ಎಲ್ಲರೂ ತಾರಾ ಹೋಟೆಲ್‍ನಲ್ಲಿ ಇದ್ದಂತೆ ಕಾಣುತ್ತದೆ.ಈ ಹಿನ್ನೆಲೆಯಲ್ಲಿ ಒಂದು ದಿನದ ಮಟ್ಟಿಗಾದರೂ ಅಧಿವೇಶನವನ್ನು ತಾರಾ ಹೋಟೆಲ್‍ ಸ್ಥಳಾಂತರಿಸಿ ಬಿಡಿ ಎಂದು ಹೇಳುವ ಮೂಲಕ ಸದನದಲ್ಲಿ ನಗೆಯುಕ್ಕಿಸಿದರು.


ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷರು ನೀವು ಸಲಹೆ ಕೊಟ್ಟಿದ್ದೀರಿ.ಆದರೆ, ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂದು  ಅಷ್ಟೇ ತೀಕ್ಷಣವಾಗಿ ಉತ್ತರಿಸಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ,ಮೊದಲ ಸಾಲಿನ ಪ್ರಮುಖ ಖಾತೆ ಗಳನ್ನು ನಿರ್ವಹಿಸುವ 9 ಸಚಿವರು ಗೈರು ಹಾಜರಾಗಿದ್ದಾರೆ.ಸದನದ ಕಾರ್ಯಕಲಾಪಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದರು.


ಇದನ್ನೂ ಓದಿ: ತರಕಾರಿ ದರ ಏರಿಕೆ ಬೆನ್ನಲ್ಲೇ ಒಂದೊಂದೇ ಬೆಲೆ ಏರಿಕೆಯ ಶಾಕ್..!


ಆಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‍ ಗುಂಡೂರಾವ್‍ ನಾನು ಸೇರಿದಂತೆ ಮೂವರು ಸಚಿವರು ಸದನದಲ್ಲಿ ಇದ್ದೇವೆ.  ನೀವು ಹೇಳುವ ವಿಚಾರವನ್ನು ನಾವು ದಾಖಲಿಸಿಕೊಂಡು ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತೇವೆ ಎಂದು ಸಮಜಾಯಿಸಿ ನೀಡಿದರು.


ತಾರಾ ಹೋಟೆಲಿನಲ್ಲಿ ನಡೆಯುತ್ತಿರುವ ಮಹಾಘಟಬಂಧನ್  ಸಭೆಗೆ ಮುಖ್ಯಮಂತ್ರಿ ಸೇರಿದಂತೆ ಪ್ರಮುಖರೆಲ್ಲ ಹೋಗಿದ್ದರಿಂದ ಸದನದಲ್ಲಿ ಪ್ರಮುಖ ಸಚಿವರು ಇರಲಿಲ್ಲ.ಸುರೇಶಕುಮಾರ್  ಕಟುಕಿಗೆ ಇದು ಕಾರಣವಾಗಿತ್ತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.