ಬೆಂಗಳೂರು : ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಡಾಳ್‌ ವಿರೂಪಾಕ್ಷಪ್ಪ ಇನ್ನೂ ಸಹ ಲೋಕಾಯುಕ್ತ ವಿಚಾರಣೆ ಎದುರಿಸಲು ಮನಸ್ಸು ಮಾಡ್ತಾಯಿಲ್ಲ. ಇತ್ತ ಬೇಲ್ ಸಿಕ್ಕಿದ್ರೂ ಸಹ ಇನ್ನು ಬರ್ತಿನಿ ಬರ್ತಿನಿ ಅಂತ ಕಾಲಹರಣ ಮಾಡುತ್ತಿರುವ ಶಾಸಕರ ಬರುವೆಕೆಗಾಗಿ ಲೋಕಾಯುಕ್ತ ಅಧಿಕಾರಿಗಳು ಸಹ ಕಾದು ಕಾದು ಸುಸ್ತಾಗಿದ್ದಾರೆ. ಮತ್ತೊಂದು ಕಡೆ ಲೋಕಾ ಅಧಿಕಾರಿಗಳ ವಿರುದ್ಧವಾಗಿಯೂ ಸಹ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈ ಬಗ್ಗೆ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.  


COMMERCIAL BREAK
SCROLL TO CONTINUE READING

ಲೋಕಾಯುಕ್ತ ಅಧಿಕಾರಿಗಳು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ವಿಚಾರಣೆ ಮಾಡಲು ಸಾಧ್ಯವಾಗುತ್ತಿಲ್ಲ. ನಿನ್ನೆ ತಾನೇ ನಾನು ಮನೆಯಲ್ಲಿಯೇ ಇದ್ದೆ ಅಂತ ಹೇಳಿಕೆ ನೀಡಿದ್ದ ಎಂಎಲ್‌ಎ ಲೋಕಾಯುಕ್ತ ಅಧಿಕಾರಿಗಳಿಗೆ ಮುಜುಗರ ಆಗುವಂತೆ ಮಾಡಿದ್ದಾರೆ.. ಇನ್ನು ಇದ್ರಿಂದ ಜನರಿಗಿದ್ದ ನಂಬಿಕೆ ಕಳೆದುಕೊಂಡ್ರಾ ಲೋಕಾಯುಕ್ತಾ ಅಧಿಕಾರಿಗಳು ಎಂಬಾ ಮಾತುಗಳು ಸಹ ಕೇಳಿ ಬರುತ್ತಿದೆ. ಮೊದಲ ಪ್ರಕರಣದಲ್ಲೇ ಎರಡನೇ ಎಸಿಬಿಯಾಯ್ತೂ ಲೋಕಾಯುಕ್ತ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ:ಲೋಕಾಯುಕ್ತರು ತೆಗೆದುಕೊಂಡು ಹೋಗಿದ್ದು ಭ್ರಷ್ಟಾಚಾರದ ಹಣವಲ್ಲ, ನಮ್ಮ ಹಣ


ಮನೆಯಲ್ಲೇ ಇದ್ದೆ ಅಂದಿರುವ ವಿರೂಪಾಕ್ಷಪ್ಪ ಲೋಕಾಯುಕ್ತ ಅಧಿಕಾರಿಗಳಿಗೆ ಕಾಣಿಸಲೇ ಇಲ್ವಾ, ಇದೇ ರೀತಿಯಾದ ಇನ್ವೇಸ್ಟಿಗೇಷನ್ ಇವರು ಮಾಡೋದಾ...? ಎಂತೆಂಥಾ ಕ್ರಿಮಿನಲ್ ಗಳನ್ನ ಹಿಡಿಯೋ ಅಧಿಕಾರಿಗಳಿಗೆ ವಿರೂಪಾಕ್ಷಪ್ಪ ಕಾಣಿಸಲೇ ಇಲ್ವಾ, ಜನಸಾಮಾನ್ಯರಾಗಿದ್ರೆ ಸುಮ್ಮನೆ ಬಿಡ್ತಿದ್ರಾ, ಸರ್ಕಾರದ ಕೈ ಗೊಂಬೆಯಾದ್ರಾ ಲೋಕಾಯುಕ್ತ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿರೂಪಾಕ್ಷಪ್ಪ ಹೇಳಿಕೆ ಮತ್ತು ಬಂಧನ ವಿಳಂಬದ ಬಗ್ಗೆ ಲೋಕಾಯುಕ್ತ ವಿರುದ್ಧ ಜನರ ಅಕ್ರೋಶಕ್ಕೆ ಕಾರಣವಾಗಿದೆ.


ಇನ್ನೂ ನಿನ್ನೆ ಮಧ್ಯಂತರ ಜಾಮೀನು ಪಡೆದಿದ್ದ ಮಾಡಾಳ್‌ ವಿರೂಪಾಕ್ಷಪ್ಪ ತನಿಖಾಧಿಕಾರಿ ಮುಂದೆ 48 ಗಂಟೆಗಳ ಒಳಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು.  ಇಂದು ಲೋಕಾಯುಕ್ತ ತನಿಖಾಧಿಕಾರಿ ಮುಂದೆ ಮಾಡಾಳು ವಿಚಾರಣೆಗೆ ಹಾಜರಾಗುತ್ತಾರೆ ಎನ್ನಲಾಗಿತ್ತು. ಆದರೆ ಇಂದು ಸಹ ವಿರೂಪಾಕ್ಷಪ್ಪ ವಿಚಾರಣೆಗೆ ಹಾಜರಾಗಿಲ್ಲ. ಮಾಡಾಳು ವಿರೂಪಾಕ್ಷಪ್ಪನ ತನಿಖೆಗೆ ಲೋಕಾಯುಕ್ತ ಅಧಿಕಾರಿಗಳು ಸುಮಾರು 50 ಪ್ರಶ್ನೆಗಳನ್ನ ಸಿದ್ಧಪಡಿಸಿಕೊಂಡು ಕಾಯುತ್ತಿದ್ದಾರೆ ಎನ್ನಲಾಗಿದೆ. ನಿಮ್ಮ ಮಗನಿಗೂ ಎಸ್ ಡಿಎಲ್ ಗೂ ಏನು ಸಂಬಂಧ..? ನಿಮ ಮಗ ಎಸ್ ಡಿ ಎಲ್ ನ ವಿಚಾರವಾಗಿ ಹಣ ಪಡೆಯುತ್ತಿರುವುದು ನಿಮಗೆ ಗೊತ್ತಿರಲಿಲ್ವಾ..


ಇದನ್ನೂ ಓದಿ:ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್‌ ಇಲ್ಲವೆಂದ ಬಿಎಸ್‌ವೈ ..!


ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಣ ಕೊಡಲು ದೂರುದಾರಿಗೆ ನೀವೇ ಹೇಳಿದ್ರಾ..?ಮನೆಯಲ್ಲಿ ಸಿಕ್ಕ 6 ಕೋಟಿ ಹಣ ಎಲ್ಲಿಂದ ಬಂತು ಅದಕ್ಕೆ ಸರಿಯಾದ ಲೆಕ್ಕ ಇದ್ಯಾ..;!!ಅಡಿಕೆಯಿಂದ ಬಂದ ಹಣವಾಗಿದ್ರೆ ಅದಕ್ಕೆ ಮಂಡಿಯಲ್ಲಿ ಅಡಿಕೆ ಮಾರಿದಕ್ಕೆ ರಶೀದಿ ಇದ್ಯಾ, ನಿಕೋಲಸ್ ಮತ್ತು ಗಂಗಾಧರ್ ನಿಮಗೆ ಪರಿಚಯ ಇದೀಯಾ, ನಿಕೋಲಸ್ ಮತ್ತು ಗಂಗಾಧರ್ ಕೆಲಸ ಮಾಡುವ ಕಂಪನಿಯ ಬಗ್ಗೆಯೂ ಸಹ ಪ್ರಶ್ನೆಗಳನ್ನು ರೆಡಿ ಮಾಡಿದ್ದಾರೆ. ಇನ್ನೂ ದೂರುದಾರರು ನಿಮಗೂ ಕರೆ ಮಾಡಿರುವುದಾಗಿ ಹೇಳಿದ್ದಾರೆ ಅದು ನಿಜವೇ, ದೂರುದಾರನ್ನ ನೀವು ಯಾವಾಗಲಾದ್ರೂ ಈ ಹಿಂದೆ ಸಂಪರ್ಕಿಸಿದ್ರಾ..? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ವಿರೂಪಾಕ್ಷಪ್ಪ ಮುಂದೆ ಇಡಲು ಲೋಕಾಯುಕ್ತ ಅಧಿಕಾರಿಗಳು ರೆಡಿಯಾಗಿದ್ದಾರೆ. 


ಈ ಮಧ್ಯೆ ಇಂದು ಲೋಕಾಯುಕ್ತ ಅಧಿಕಾರಿಗಳ ಟ್ರ್ಯಾಪ್‌ಗೆ ಒಳಗಾಗಿದ್ದ ಪ್ರಶಾಂತ್‌ ಮಾಡಾಳ್‌ ರ ಸಂಜಯನಗರದ ನಿವಾಸದಲ್ಲಿ ಇನ್ಸ್‌ಪೆಕ್ಟರ್ ಮಹದೇವಯ್ಯ ನೇತೃತ್ವದ ಮೂರು ಜನರ ಲೋಕಾಯುಕ್ತ ಅಧಿಕಾರಿಗಳ ತಂಡ ತಲಾಶ್‌ ನಡೆಸಿದೆ. ಅಕ್ರಮದ ಬಗ್ಗೆ ಏನಾದ್ರೂ ದಾಖಲೆಗಳ ಮಾಹಿತಿ ಪಡೆಯಲು ಮನೆಯನ್ನು ಇಂಚಿಂಚೂ ಜಾಲಾಡಿದ್ದಾರೆ. ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಅದೆನೇ ಇರ್ಲಿ. ಶಾಸಕರ ಮಗ ಈಗಾಗಲೇ ಲೋಕಾ ಅಧಿಕಾರಿಗಳಿಂದ ಬಂದನಕ್ಕೊಳಗಾಗಿ ವಿಚಾರಣೆ ಎದುರಿಸುತ್ತಿದ್ದಾನೆ. ಇನ್ನೂ ಮಾಡಾಳ್‌ ನಾಳೆ ಲೋಕಾ ಅಧಿಕಾರಿಳ ಮುಂದೆ ಹಾಜರಾಗುತ್ತಾರಾ.. ಇಲ್ಲವಾ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.