ರಾಜ್ಯದಲ್ಲಿ ಈಗ ತುಘಲಕ್ ದರ್ಬಾರ್!: ಸಿದ್ದು-ಡಿಕೆಶಿ ವಿರುದ್ಧ ಬಿಜೆಪಿ ಆಕ್ರೋಶ!
‘ದ್ವೇಷಪೂರಿತ’ ಎಂಬ ಲೇಬಲ್ ಹಚ್ಚಿ ಕನ್ನಡಿಗರ ಧ್ವನಿಯನ್ನು ದಮನಿಸುವ ತಮ್ಮ ಕುತಂತ್ರ ಎಂದೂ ಸಫಲವಾಗದು. ಕನ್ನಡಿಗರ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುವ ಯಾವುದೇ ನೀತಿಗಳ ವಿರುದ್ಧ ಬಿಜೆಪಿ ಹೋರಾಟ ಕೈಗೊಳ್ಳಲಿದೆ ಎಂದು ಬಿಜೆಪಿ ಕುಟುಕಿದೆ.
ಬೆಂಗಳೂರು: ದ್ವೇಷಪೂರಿತ ಪೋಸ್ಟ್ ಸಹಿಸಲ್ಲವೆಂಬ ಸಿಎಂ ಸಿದ್ದರಾಮಯ್ಯರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯದಲ್ಲಿ ಈಗ ತುಘಲಕ್ ದರ್ಬಾರ್!. ಸಿದ್ದರಾಮಯ್ಯನವರೇ, ಸಾಮಾಜಿಕ ಮಾಧ್ಯಮದಲ್ಲಿ ಯಾವುದನ್ನು ಬರೆಯಬೇಕು, ಯಾವುದನ್ನು ಬರೆಯಬಾರದೆಂಬ ನಿಯಂತ್ರಣ ಹೇರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದದು! ಪೋಸ್ಟ್‌ಗಳಿಗೆ ಸರ್ಟಿಫಿಕೇಟ್ ಕೊಡುವ ಕೆಲಸ ನಿಮ್ಮದಲ್ಲ’ವೆಂದು ಟೀಕಿಸಿದೆ.
‘ದ್ವೇಷಪೂರಿತ’ ಎಂಬ ಲೇಬಲ್ ಹಚ್ಚಿ ಕನ್ನಡಿಗರ ಧ್ವನಿಯನ್ನು ದಮನಿಸುವ ತಮ್ಮ ಕುತಂತ್ರ ಎಂದೂ ಸಫಲವಾಗದು. ಕನ್ನಡಿಗರ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುವ ಯಾವುದೇ ನೀತಿಗಳ ವಿರುದ್ಧ ಬಿಜೆಪಿ ಹೋರಾಟ ಕೈಗೊಳ್ಳಲಿದೆ. ತಾವು ತುಕ್ಡೇ ಗ್ಯಾಂಗಿನ ಮುಖ್ಯಮಂತ್ರಿಗಳಲ್ಲ, ಸಂವಿಧಾನದ ಆಶಯಗಳನ್ನು ಸದಾ ಗೌರವಿಸುವ ಕರ್ನಾಟಕದ ಮುಖ್ಯಮಂತ್ರಿಗಳು ಎಂಬ ಎಚ್ಚರಿಕೆ ಇರಲಿ’ ಎಂದು ಬಿಜೆಪಿ ಕುಟುಕಿದೆ.
ಸಿಎಂ ಸಿದ್ದರಾಮಯ್ಯ ನಿವಾಸದ ಬಳಿ ಸಚಿವಾಕಾಂಕ್ಷಿಗಳ ಬೆಂಬಲಿಗರು
ATMSarkara ನಡೆಯುವುದೇ ಅನುಮಾನ!
ಚುನಾವಣೆ ಪೂರ್ವದಲ್ಲಿ ಉಚಿತ ವಿದ್ಯುತ್ ಅಂತಾ ಡಂಗುರ ಸಾರಿದ್ದು ಇದೇ ಕಾಂಗ್ರೆಸ್ ಪಕ್ಷದವರು. ಇದೀಗ ಸರ್ಕಾರ ಬಂದ ಬಳಿಕ ಯಾವುದೇ ಸ್ಪಷ್ಟವಾದ ನಿಲುವು ತಾಳಲು ಇಂದಿಗೂ ಸಾಧ್ಯವಾಗಿಲ್ಲ, ಸಾಧ್ಯವಾಗುವ ಲಕ್ಷಣಗಳೂ ಇಲ್ಲ! ಈ ಅಸ್ಪಷ್ಟತೆಯಿಂದ ರಾಜ್ಯದ ಜನರಲ್ಲಿ ಗೊಂದಲ ಮೂಡುತ್ತಿದೆ. ಈಗಾಗಲೇ ರಾಜ್ಯದಲ್ಲಿ ಹಲವಾರು ಕಡೆ ಈ ರೀತಿಯ ನಿದರ್ಶನಗಳು ಸಾಕಷ್ಟು ಕಂಡುಬಂದಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಈ #ATMSarkara ನುಡಿದಂತೆ ನಡೆಯುವುದು ಬಿಡಿ, ಮುಂದೆ ನಡೆಯುವುದೇ ಅನುಮಾನವಾಗಿದೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕೇಸರೀಕರಣಕ್ಕೆ ಅವಕಾಶವಿಲ್ಲವೆಂದು ಹೇಳಿರುವ ಸಿದ್ದರಾಮಯ್ಯ ಮತ್ತು ಡಿಕೆಶಿ ವಿರುದ್ಧ ಬಿಜೆಪಿ ಕಿಡಿಕಾರಿದೆ. ‘ಕಾಮಾಲೆ ಕಣ್ಣಿನವರಿಗೆ ಕಾಣುವುದೆಲ್ಲ ಹಳದಿಯೇ! ಚುನಾವಣೆಯ ಸಂದರ್ಭದಲ್ಲಿ ಕೇಸರಿ ವಸ್ತ್ರಗಳನ್ನು ಧರಿಸಿ, ಹಣೆಯ ಮೇಲೆ ಊರಗಲದ ತಿಲಕವನ್ನು ಪ್ರದರ್ಶಿಸುತ್ತಾ ‘Election Hindu’ ಗಳಾಗಿದ್ದ ಕಾಂಗ್ರೆಸ್ ಪಕ್ಷದ ನಾಯಕರೆಲ್ಲರೂ, ಊಸರವಳ್ಳಿ ಬಣ್ಣ ಬದಲಿಸಿದಂತೆ, ಇದೀಗ ತಮ್ಮ ಮೂಲರೂಪಕ್ಕೆ ಹಿಂದಿರುಗಿದ್ದಾರೆ. ರಾಜ್ಯದಲ್ಲಿ ಬಾಂಬಿಟ್ಟ ತಮ್ಮ ಬ್ರದರ್ಸ್‌ಗಳಿಗೆ ಬಿಡುಗಡೆ ಭಾಗ್ಯ ಕರುಣಿಸಲು ಸರ್ಕಾರ ಮುಂದಾದರೂ ಯಾವುದೇ ಅಚ್ಚರಿ ಪಡಬೇಕಿಲ್ಲ!’ವೆಂದು ಬಿಜೆಪಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಕಾಂಗ್ರೆಸ್ ನಿಂದ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.