ಬೆಂಗಳೂರು: “ಕೈ” ಸರ್ಕಾರದ ಆರಂಭದಲ್ಲಿ ನಮ್ಮ ಟಗರೇ ಮುಂದಿನ ಸಿಎಂ ಎಂದು ಅಬ್ಬರಿಸಿದ್ದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್‌ ಈಗ ಡಿ.ಕೆ.ಶಿವಕುಮಾರ್‌ ಸಿಎಂ ಆದರೆ ಒಳ್ಳೆಯದು ಎಂದು ಹೇಳಿರುವುದು ಡಿಕೆಶಿ ಪಕ್ಷದೊಳಗೆ ನಡೆಸುತ್ತಿರುವ “ಅಂದರ್‌ ಕೀ ಆಪರೇಷನ್‌” ನ ಸಣ್ಣ ಝಲಕ್ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.


COMMERCIAL BREAK
SCROLL TO CONTINUE READING

‘ಇಷ್ಟು ದಿನ ಸಂಪೂರ್ಣ ಹಳ್ಳ ಹಿಡಿದಿರುವ ಕರ್ನಾಟಕದ ಆಡಳಿತ ಇನ್ನು ಮುಂದೆ ಸಹ ಟೇಕಾಫ್‌ ಆಗುವುದು ಡೌಟ್.‌ ಬಣಗಳ ಹೊಯ್ದಾಟ, ಬಡಿದಾಟ ಮತ್ತಷ್ಟು ಜೋರಾಗಲಿದೆ. ಮತ ಹಾಕಿದ ಕನ್ನಡಿಗರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವುದು ಖಚಿತ-ನಿಶ್ಚಿತ-ಖಂಡಿತ! ಸಿಎಂ ಸಿದ್ದರಾಮಯ್ಯರ ಕೈಯಲ್ಲಿ ಚಕ್ಕಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕೈಯಲ್ಲಿ ಬಾರ್ಕೋಲು, ಇದು ರಾಜ್ಯದ ನಾಲ್ಕೂವರೆ ತಿಂಗಳ ಕಾಂಗ್ರೆಸ್ ಸರ್ಕಾರದ ಗಾಡಿ ಸಾಗುತ್ತಿರುವ ಪರಿ. ನಾಯಕರ ವೈಯುಕ್ತಿಕ ಪ್ರತಿಷ್ಠೆ, ಬಣಗಳ ಮೇಲಾಟ, ಒಣ ದರ್ಪ, ನಾನೇ ಸರಿ ಎಂಬ ಅಹಂಕಾರದಿಂದ ಅಕ್ಷರಶಃ ನಲುಗುತ್ತಿರುವುದು ಮಾತ್ರ ಕರ್ನಾಟಕದ ಮಹಾಜನತೆ!!’ ಎಂದು ಬಿಜೆಪಿ ಕುಟುಕಿದೆ.


‘ಸರ್ಕಾರ ಆರಂಭವಾದ ದಿನದಿಂದಲೂ ಒಂದಲ್ಲಾ ಒಂದು ರೀತಿ ಕಿತ್ತಾಟ ನಡೆಸುತ್ತಲೇ ರಾಜ್ಯದ ಆಡಳಿತವನ್ನು ಹಳ್ಳ ಹಿಡಿಸಿಯಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ, ಬರಗಾಲ, ನಿರುದ್ಯೋಗ, ಅರಾಜಕತೆ ತಾಂಡವವಾಡುತ್ತಿದೆ. ಕಾವೇರಿ ವಿವಾದ ಸೇರಿದಂತೆ ರಾಜ್ಯದ ಅಸ್ಮಿತೆಗೆ ಧಕ್ಕೆ ತರುವ ಎಲ್ಲಾ ವಿಷಯಗಳಲ್ಲಿಯೂ ಕಾಂಗ್ರೆಸ್‌ ಮುಖಂಡರು ಒಳಜಗಳದಲ್ಲಿ ನಿರತರಾಗಿದ್ದರೇ ಹೊರತು ರಾಜ್ಯದ ಹಿತ ಕಾಪಾಡಲಿಲ್ಲ. ಅಸಲಿಗೆ ಕಾಂಗ್ರೆಸ್‌ನ ಸಿಎಂ ಮತ್ತು ಡಿಸಿಎಂ ಬಣ ಒಗ್ಗಟ್ಟಾಗಿದ್ದು ರಾಜ್ಯವನ್ನು ಲೂಟಿ ಹೊಡೆಯುವ ವಿಷಯದಲ್ಲಿ ಮಾತ್ರ!!’ವೆಂದು ಬಿಜೆಪಿ ಕಿಡಿಕಾರಿದೆ.


ಯಾವ ಅಧಿಕಾರಿಗಳಿದ್ದರೂ ಸರ್ಕಾರದ ಪರವಾಗಿ ಕೆಲಸ ಮಾಡುತ್ತೇವೆ


‘ಸಿಎಂ ಮತ್ತು ಡಿಸಿಎಂ ಬಣ ರಾಜ್ಯವನ್ನು ಹೈಕಮಾಂಡ್‌ನ #ATM ಆಗಿ ಮಾಡುವಲ್ಲಿ ತೋರುತ್ತಿರುವ ಒಗ್ಗಟ್ಟನ್ನು ರಾಜ್ಯದ ಅಭಿವೃದ್ಧಿಯ ಬಗ್ಗೆ ಕಡೆಗೆ ಎಳ್ಳಷ್ಟು ತೋರುತ್ತಿಲ್ಲ. ಯಾರು ಹೆಚ್ಚು ಕಲೆಕ್ಷನ್‌ ಮಾಡುತ್ತಾರೆಂಬ ಪೈಪೋಟಿಗೆ ಬಿದ್ದಿರುವುದಕ್ಕೆ ಕಳೆದ ವಾರ ಅಕ್ರಮವಾಗಿ ದೊರೆತ ₹100 ಕೋಟಿ ರೂ.ಗೂ ಅಧಿಕ ಹಣವೇ ಪುರಾವೆ. ದಿನ ಕಳೆದಂತೆ ಸಿಎಂ ಸಿದ್ದರಾಮಯ್ಯರ ಕುರ್ಚಿಯ ವ್ಯಾಲಿಡಿಟಿ ಸಹ ಕಡಿಮೆ ಆಗುತ್ತಿದೆ. ಹೀಗಾಗಿ ಎಷ್ಟು ದಿನ ಇರುತ್ತಾರೋ ಅಷ್ಟು ದಿನ ಭರಫೂರ ಲೂಟಿಗೆ ಅಖಾಡ ಸಿದ್ಧವಾದಂತಿದೆ. ಇದಕ್ಕೆ ಪ್ರಮುಖ ಸಾಕ್ಷಿ ಐಟಿ ದಾಳಿಗೆ ಒಳಗಾದ ಗುತ್ತಿಗೆದಾರ ಅಂಬಿಕಾಪತಿ ಜೊತೆ ಸಿಎಂ ಸಿದ್ದರಾಮಯ್ಯರವರ ಆಪ್ತ ಸಚಿವ ಬೈರತಿ ಸುರೇಶ್ ಹೊಂದಿರುವ ಗಳಸ್ಯ-ಕಂಠಸ್ಯ ಗೆಳೆತನ’ವೆಂದು ಬಿಜೆಪಿ ಟೀಕಿಸಿದೆ.


‘ಸಿದ್ದರಾಮಯ್ಯರ ಸಿಎಂ ಕುರ್ಚಿಗೆ ಮಗ್ಗುಲ ಮುಳ್ಳಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಹಣಿಯಲು ಸಿಎಂ ಸಿದ್ದರಾಮಯ್ಯರವರ ಬಣ ಸರ್ಕಾರದ ಆರಂಭದಿಂದಲೇ ಪ್ರಯತ್ನಪಟ್ಟಿತ್ತು. ಆದರೆ ಡಿ.ಕೆ.ಶಿವಕುಮಾರ್‌ ಅವರ ಸಹೋದರ ಡಿ.ಕೆ.ಸುರೇಶ್ ಅವರ ಗೂಂಡಾಗಿರಿಗೆ ಬೆದರಿ ಸುಮ್ಮನಾಗಿತ್ತು. ಆದರೆ ಈಗ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಮೇಲಿನ ತನಿಖೆಗೆ ತಂದಿದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ಹಿಂಪಡೆದುದ್ದಕ್ಕೆ ಅತಿಹೆಚ್ಚು ಸಂಭ್ರಮಿಸಿದವರೆಂದರೆ ಅದು ಸಿಎಂ ಸಿದ್ದರಾಮಯ್ಯ ಮತ್ತವರ ಪಟಾಲಂ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.


"ಕಮೀಷನ್‌ ಕಲೆಕ್ಷನ್‌ʼಗಾಗಿ ಕಾಂಗ್ರೆಸ್‌ ಸರಕಾರದಿಂದ ರಾಜ್ಯದಲ್ಲಿ ಕೃತಕ ವಿದ್ಯುತ್‌ ಅಭಾವ ಸೃಷ್ಟಿ"-ಎಚ್ಡಿಕೆ


‘ಲೋಕಸಭಾ ಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯರವರನ್ನು ಶತಾಯಗತಾಯ ಕುರ್ಚಿಯಿಂದ ಇಳಿಸಲು ಪಣ ತೊಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಸೈಲೆಂಟಾಗಿ ಇಲಾಖೆಯ ಪ್ರವಾಸದ ನೆಪದಲ್ಲಿ ಸಿದ್ದರಾಮಯ್ಯ ಬಣದ ಶಾಸಕರನ್ನು ಸೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಇದನ್ನು ಗ್ರಹಿಸಿಯೇ ಸಿಎಂ ಸಿದ್ದರಾಮಯ್ಯರವರು, ಬೆಳಗಾವಿಗೆ ಹೋಗಿದ್ದ  ಡಿ.ಕೆ.ಶಿವಕುಮಾರ್‌ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ತಮ್ಮ ಬಣದ ಶಾಸಕರು ಹೋಗಬಾರದೆಂದು ಕಟ್ಟಪ್ಪಣೆ ಹೊರಡಿಸಿದ್ದರು’ ಎಂದು ಬಿಜೆಪಿ ಟೀಕಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.