Cauvery water dispute: ಕಾಂಗ್ರೆಸ್ ಗೋಸುಂಬೆ ರೀತಿ ಬಣ್ಣ ಬದಲಿಸುವ ಪಕ್ಷ- ಬಿಜೆಪಿ
Cauvery Water Sharing Dispute: ಕಾಂಗ್ರೆಸ್‌ನ INDI Allianceನ ಪ್ರಮುಖ ಸದಸ್ಯ ಪಕ್ಷವಾದ ಡಿಎಂಕೆಯ ಸ್ಟಾಲಿನ್ ಅವರ ಹೆಗಲ ಮೇಲೆ ಕೈ ಹಾಕಿ ಮಾತನಾಡುವ ಡಿಸಿಎಂ ಡಿಕೆಶಿ ಈಗೇಕೆ ಮೇಕೆದಾಟು ಯೋಜನೆಗೆ ಸಹಕಾರ ಕೇಳುತ್ತಿಲ್ಲ? ಮಾತುಕತೆಯಲ್ಲಿ ಮುಗಿಯುವ ಸಮಸ್ಯೆಗೆ ಊರು ತುಂಬಾ ಪಾದಯಾತ್ರೆ ಮಾಡಿದ್ದು ಏಕೆ? ಎಂದು BJP ಪ್ರಶ್ನಿಸಿದೆ.
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ, ‘ಗೋಸುಂಬೆ ರೀತಿ ಆಗಾಗ ಬಣ್ಣ ಬದಲಿಸುವ ಪಕ್ಷವೇ ಕಾಂಗ್ರೆಸ್. ತಾನು ವಿಪಕ್ಷದಲ್ಲಿದ್ದಾಗ ಒಂದು ಬಣ್ಣ, ಅಧಿಕಾರ ಸಿಕ್ಕರೆ ಮತ್ತೊಂದು ಬಣ್ಣ. ವಿಪಕ್ಷದಲ್ಲಿದ್ದಾಗ ನೀರಾವರಿ ವಿಷಯಗಳನ್ನು ಅನವಶ್ಯಕವಾಗಿ ರಾಜಕೀಯಗೊಳಿಸಿ, ವಿವಾದ ಎಬ್ಬಿಸುವ ಕಾಂಗ್ರೆಸ್, ಆಡಳಿತ ಸಿಕ್ಕಾಗ ನೀರಿನ ಬಗ್ಗೆ ದನಿಯೇ ಎತ್ತುವುದಿಲ್ಲ’ವೆಂದು ಟೀಕಿಸಿದೆ.
‘ಹಿಂದೆ ತಾನೇ ಅರಚಾಡಿದ್ದರ ಬಗ್ಗೆ ತುಟಿಕ್ ಪಿಟಿಕ್ ಎನ್ನುವುದಿಲ್ಲ. ಒಂದು ವೇಳೆ ಕಾಂಗ್ರೆಸ್ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಿದೆ ಎಂದರೆ, ಸಮೀಪದಲ್ಲಿಯೇ ಚುನಾವಣೆ ಇದೆ ಎಂದರ್ಥ. ವಿಧಾನಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ಸಿಗರು ಇದೇ ಕಾವೇರಿ ಕೊಳ್ಳದಲ್ಲಿ, ಕೋವಿಡ್‌ನ ಅಪಾಯಗಳನ್ನೂ ಧಿಕ್ಕರಿಸಿ, “ನಮ್ಮ ನೀರು-ನಮ್ಮ ಹಕ್ಕು” ಅಂತ ಕಿರುಚಾಡುತ್ತಾ ವಾಕಿಂಗ್ ಮಾಡಿ, ಬೊಂಡಾ, ಬಜ್ಜಿ ತಿಂದು ಮಜಾ ಮಾಡಿದ್ದರು’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಡಿ.ಕೆ.ಶಿವಕುಮಾರ್‌ರವರು ಕಾಂಗ್ರೆಸ್ ಹೈಕಮಾಂಡ್‌ಗೆ ತಮ್ಮ ಅಸ್ತಿತ್ವ ಸಾಬೀತು ಪಡಿಸುವುದಕ್ಕೆ ಮಾಡಿದ ಗಿಮಿಕ್ ಆಗಿತ್ತೇ ವಿನಃ ನೀರಾವರಿಯ ಕಾಳಜಿ, ಯೋಜನೆಯ ಅನುಷ್ಠಾನ ಎಂಬುದೆಲ್ಲಾ ಬರೀ ಮಣ್ಣಂಗಟ್ಟಿ. ಕಾಂಗ್ರೆಸ್‌ನ I.N.D.I. Allianceನ ಪ್ರಮುಖ ಸದಸ್ಯ ಪಕ್ಷವಾದ ಡಿಎಂಕೆಯ ಎಂ.ಕೆ.ಸ್ಟಾಲಿನ್ ಅವರ ಹೆಗಲ ಮೇಲೆ ಕೈ ಹಾಕಿ ಮಾತನಾಡುವ ಡಿಸಿಎಂ ಡಿಕೆಶಿ ಅವರು ಈಗೇಕೆ ಮೇಕೆದಾಟು ಯೋಜನೆಗೆ ಸಹಕಾರ ಕೇಳುತ್ತಿಲ್ಲ? ಮಾತುಕತೆಯಲ್ಲಿ ಮುಗಿಯುವ ಸಮಸ್ಯೆಗೆ ಊರು ತುಂಬಾ ಪಾದಯಾತ್ರೆ ಮಾಡಿದ್ದು ಏಕೆ..?’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಕೇಂದ್ರ ನೌಕರರು, ಪಿಂಚಣಿದಾರರಿಗೆ ಗುಡ್ ನ್ಯೂಸ್
ರಾಜ್ಯದ 3ನೇ ಒಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚಾಲನೆ ಫಿಕ್ಸ್
‘ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ₹30,000 ಕೋಟಿ ಮೀಸಲಿರಿಸುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಸಿಎಂ ಸಿದ್ದರಾಮಯ್ಯರವರು ಮಂಡಿಸಿದ ಈ ಬಾರಿಯ ಬಜೆಟ್‌ನಲ್ಲಿ ನೀರಾವರಿಗೆ ನೀಡಿದ್ದು ₹940 ಕೋಟಿ ಮಾತ್ರ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಪರಿಗಣಿಸಿ, ಈ ಬಾರಿ ₹5000 ಕೋಟಿ ಅನುದಾನವನ್ನು ಸಹ ಬಿಜೆಪಿ ಸರ್ಕಾರ ಒದಗಿಸಿದೆ. ಸಿಂಗಾಟಲ್ಲೂರು ಏತ ನೀರಾವರಿ ಯೋಜನೆ, ದೇವತ್ಕಲ್ ಏತ ನೀರಾವರಿ ಯೋಜನೆ, ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ, ಕಲ್ಲಮರಡಿ ಏತ ನೀರಾವರಿ ಯೋಜನೆ ಸೇರಿದಂತೆ ಅನೇಕ ನೀರಾವರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ರೈತರ ಬಾಳನ್ನು ಹಸನುಗೊಳಿಸಿದ್ದು ಬಿಜೆಪಿ ಸರ್ಕಾರ. ಆದರೆ ತಮ್ಮ ವೈಯುಕ್ತಿಕ ಹಿತಾಸಕ್ತಿಗಾಗಿ ತಮಿಳುನಾಡಿಗೆ ನೀರು ಹರಿಸಿ, ರಾಜ್ಯದ ರೈತರ ಬದುಕನ್ನು ಹದಗೆಡಿಸುತ್ತಿರುವುದು ಮಾತ್ರ ಕಾಂಗ್ರೆಸ್ ಸರ್ಕಾರ’ವೆಂದು ಬಿಜೆಪಿ ಕುಟುಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.