ಬೆಂಗಳೂರು: ಅಧಿಕಾರಕ್ಕೆ ಬಂದ ಕೂಡಲೇ ಕೊಟ್ಟ ಐದೂ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದಿದ್ದ ಕಾಂಗ್ರೆಸ್‌, ಇದೀಗ ಒಂದೊಂದರಂತೆ ಜನವಿರೋಧಿ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಹೈನುಗಾರರ ಪ್ರೋತ್ಸಾಹಧನ ಕಡಿತಗೊಳಿಸುವ ಮೂಲಕ ಅನ್ನದಾತರಿಗೂ ಕಾಂಗ್ರೆಸ್‌ ಸರ್ಕಾರ ದ್ರೋಹ ಬಗೆದಿದೆ. ರೈತರಿಗೆ ಆಸರೆಯಾಗುವ ಹಾಲಿನ ಪ್ರೋತ್ಸಾಹಧನವನ್ನು ಕಡಿತಗೊಳಿಸುವ ರೈತವಿರೋಧಿ ಆದೇಶವನ್ನು ಕೂಡಲೆ ಹಿಂಪಡೆಯಬೇಕೆಂದು ಎಚ್ಚರಿಸುತ್ತೇವೆ. ರಾಜ್ಯದ ಅನ್ನದಾತರ ಪರವಾಗಿ ಧ್ವನಿ ಎತ್ತಲು, ಹೋರಾಡಲು ಬಿಜೆಪಿ ಸದಾ ಬದ್ಧವಾಗಿದೆ’ ಎಂದು ಹೇಳಿದೆ.


ಗ್ಯಾರಂಟಿ ಯೋಜನೆ ಬಗ್ಗೆ ಇಂದೇ ಅಂತಿಮ ನಿರ್ಧಾರ


‘#ATMSarkaraದ ಮೊದಲ ಸಚಿವ ಸಂಪುಟದಲ್ಲೇ ಎಲ್ಲಾ 5 ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಸ್ವತಃ ಗಡುವು ವಿಧಿಸಿಕೊಳ್ಳುವಾಗ ಪ್ರಿಯಾಂಕ್‌ ಖರ್ಗೆ ಅವರಿಗೆ ಪರಿಜ್ಞಾನ ಇರಲಿಲ್ಲವೇ? ಗ್ಯಾರಂಟಿಗಳ ನಿರೀಕ್ಷೆಯಲ್ಲಿರುವ ಕನ್ನಡಿಗರ ಪರವಾಗಿ ನಾವು ಧ್ವನಿ ಎತ್ತಿದ್ದೇವೆ. ತಾವುಗಳು ಹೇಳಿರುವ ಗ್ಯಾರಂಟಿಗಳು ಜಾರಿಯಾಗದಿದ್ದರೆ ಜನತೆಯ ಪರವಾಗಿ ಮುಂದೆ ಬೀದಿಗಿಳಿಯಲೂ ಬಿಜೆಪಿ ಸಿದ್ಧವಿದೆ’ ಎಂದು ಹೇಳಿದೆ.


ಆರ್ಥಿಕ ತಂತ್ರಗಾರಿಕೆ ಎಂಬುದನ್ನು ಉತ್ತರಿಸಲಿ’ ಎಂದು ಬಿಜೆಪಿ ಟೀಕಿಸಿದೆ.


ಮೊದಲ ಹಂತದಲ್ಲಿ 3 ಗ್ಯಾರಂಟಿ ಜಾರಿಗೆ ಚಿಂತನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.