ಕರ್ನಾಟಕವನ್ನು ಭಯೋತ್ಪಾದಕರ ಸ್ವರ್ಗವನ್ನಾಗಿಸುತ್ತಿರುವ ಕಾಂಗ್ರೆಸ್: ಬಿಜೆಪಿ ಆರೋಪ
ಐಸಿಸ್ ಜೊತೆ ನಂಟು ಹೊಂದಿರುವ ಕಾರಣ, ರಾಜ್ಯದ ಧಾರವಾಡ, ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಕೇಂದ್ರ ತನಿಖಾ ದಳವು ಉಗ್ರರನ್ನು ಬಂಧಿಸುತ್ತಿದೆ. ಇಷ್ಟು ವರ್ಷ ಶಾಂತಿಯ ನೆಲೆಬೀಡಾಗಿದ್ದ ಕರ್ನಾಟಕ, ದಿಢೀರ್ ಅಂತಾ ಉಗ್ರರ ವಾಸಸ್ಥಾನವಾಗಿ ಬದಲಾಗಲು ಕಾಂಗ್ರೆಸ್ ಸರ್ಕಾರವೇ ಕಾರಣವೆಂದು ಬಿಜೆಪಿ ಆರೋಪಿಸಿದೆ.
ಬೆಂಗಳೂರು: ತೈಲಪ ಹೊಯ್ಸಳರಾಳಿದ ನಾಡು, ಡಂಕಣ ಜಕಣರ ನೆಚ್ಚಿನ ಬೀಡಾಗಿದ್ದ ಕರ್ನಾಟಕವನ್ನು ಭಯೋತ್ಪಾದಕರ ಸ್ವರ್ಗವನ್ನಾಗಿಸುತ್ತಿದೆ ಕಾಂಗ್ರೆಸ್ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ರಾಜ್ಯದಲ್ಲಿ ಜಿಹಾದಿಗಳ ಅಟ್ಟಹಾಸ ಮಿತಿ ಮೀರಿದ್ದು, ಮಲಗಿದ್ದ ಸ್ಲೀಪರ್ ಸೆಲ್‌ಗಳೆಲ್ಲಾ ಎದ್ದು ನಿಂತಿವೆ. ಈ ನೆಲದ ಕಾನೂನಿಗೂ ಗೌರವ ನೀಡದೆ, ಪೊಲೀಸರನ್ನು ಕಂಡರೂ ಭಯವಿಲ್ಲದೆ ರಾಜಾರೋಷವಾಗಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ’ ಎಂದು ಕಿಡಿಕಾರಿದೆ.
‘ಆದರೆ ಇವುಗಳಿಗೆ ಕಡಿವಾಣ ಹಾಕಬೇಕಿದ್ದ "ಕೈ" ಸರ್ಕಾರ ಜಿಹಾದಿಗಳ ಗುಲಾಮರಂತೆ ವರ್ತಿಸುತ್ತಿರುವುದು ಆರು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಮಹಾಮೋಸ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಲ ಮುದುರಿಕೊಂಡು ಕೂತಿದ್ದ ಜಿಹಾದಿ ಶಕ್ತಿಗಳು, ಕಾಂಗ್ರೆಸ್ ಸರ್ಕಾರ ಬಂದಿದೆ ಎಂಬ ಕಾರಣಕ್ಕೆ ಸಂಪೂರ್ಣ ಬಾಲ ಬಿಚ್ಚಿದ್ದು, ರಾಜ್ಯಾದ್ಯಂತ ಶಾಂತಿ ಕದಡುವ ಕೆಲಸಗಳನ್ನು ಈ ನಾಲ್ಕು ತಿಂಗಳಿನಿಂದ ಮಾಡುತ್ತಲೇ ಬಂದಿವೆ. ರಾಮನಗರದಲ್ಲಿ ತಮ್ಮವರೇ ಶಾಸಕರು, ತಮ್ಮವರೇ ಸಚಿವರು ಎಂಬ ಕಾರಣಕ್ಕೆ ಜಿಹಾದಿಗಳ ಅಟ್ಟಹಾಸ ವ್ಯಾಪಕವಾಗಿದ್ದು, ಹಾಡುಹಗಲೇ ಹಿಂದೂಗಳ ಮನೆ ಮುಂದಿರುವ ಗೋವುಗಳನ್ನು ಕದ್ದು, ವಧಿಸಿ, ಗೋ ಮಾಂಸದ ತ್ಯಾಜ್ಯವನ್ನು ಹಿಂದೂಗಳ ಜಮೀನಿನಲ್ಲಿಯೇ ಸುರಿಯುವಷ್ಟು ದಾರ್ಷ್ಟ್ಯತನ ಪ್ರದರ್ಶಿಸಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.
ಪೂಜನೀಯ ದೇವೇಗೌಡರೇ, ನಿಮ್ಮ ಸುಪುತ್ರ ಪದೇ ಪದೆ ಪಕ್ಷ ವಿಸರ್ಜನೆ ಘೋಷಿಸಿದರೆ ಕಾರ್ಯಕರತರು ಎಲ್ಲಿ ಹೋಗಬೇಕು?: ಡಿ.ಕೆ.ಶಿವಕುಮಾರ್
‘ಐಸಿಸ್ ಜೊತೆ ನಂಟು ಹೊಂದಿರುವ ಕಾರಣ, ರಾಜ್ಯದ ಧಾರವಾಡ, ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಕೇಂದ್ರ ತನಿಖಾ ದಳವು ಉಗ್ರರನ್ನು ಬಂಧಿಸುತ್ತಿದೆ. ಇಷ್ಟು ವರ್ಷ ಶಾಂತಿಯ ನೆಲೆಬೀಡಾಗಿದ್ದ ಕರ್ನಾಟಕ, ದಿಢೀರ್ ಅಂತಾ ಉಗ್ರರ ವಾಸಸ್ಥಾನವಾಗಿ ಬದಲಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ. ಹಿಂದೂಗಳಿಗೆ ಚೌತಿ ಸಮಯದಲ್ಲಿ ಗಣೇಶ ಪ್ರತಿಷ್ಠಾಪನೆಗೆ ನೂರೆಂಟು ಕಂಡಿಷನ್‌ಗಳು ವಿಧಿಸುವ, ಬಾಂಡ್‌ಗಳನ್ನು ಕೇಳುವ ಕಾಂಗ್ರೆಸ್ ಸರ್ಕಾರ, ಶಿವಮೊಗ್ಗ ಮತ್ತು ಕೋಲಾರದಲ್ಲಿ ದ್ವೇಷಪೂರಿತ ಬರಹಗಳನ್ನು ಹೊಂದಿರುವ ತಲ್ವಾರ್ ಮಾದರಿಯ ಕಮಾನ್‌ಗಳು, ಟಿಪ್ಪು, ಔರಂಗಜೇಬನಂತಹ ಹಿಂದೂ ವಿರೋಧಿಗಳ ಕಟೌಟ್‌ಗಳನ್ನು ನಿರ್ಮಿಸಲು ಬೇಷರತ್ ಅನುಮತಿ ನೀಡುತ್ತದೆ. ಇದು ಸಿದ್ದರಾಮಯ್ಯರ ಸರ್ಕಾರದ ಹಿಂದೂ ವಿರೋಧಿ ರಾಜಕಾರಣಕ್ಕೆ ಸ್ಪಷ್ಟ ಉದಾಹರಣೆ’ ಎಂದು ಬಿಜೆಪಿ ಟೀಕಿಸಿದೆ.
ಸಿದ್ದರಾಮಯ್ಯರವರಂತೂ ಜಿಹಾದಿ ಶಕ್ತಿಗಳನ್ನು ಪೋಷಿಸುವ ಸಲುವಾಗಿ ₹10,000 ಕೋಟಿ ಅನುದಾನ ನೀಡುತ್ತೇವೆಂದು ಘೋಷಿಸುವುದು ಮಾತ್ರವಲ್ಲದೆ, ಕಾಂಗ್ರೆಸ್ ಸರ್ಕಾರ ಜಿಹಾದಿಗಳ ಋಣದಲ್ಲಿದೆ ಎಂಬುದನ್ನು ತುಂಬಿದ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆ, ನಡವಳಿಕೆ ಮತ್ತು ಅತಿಯಾದ ತುಷ್ಟೀಕರಣದ ಆಡಳಿತವನ್ನು ಗಮನಿಸಿದರೆ, ಕಾಂಗ್ರೆಸ್ ಕರ್ನಾಟಕವನ್ನು ತಾಲಿಬಾನ್ ಮಾಡುವ ಗುಪ್ತಕಾರ್ಯಸೂಚಿಯನ್ನು ಹೊಂದಿದೆ ಎಂಬ ಅಂಶ ಸ್ಪಷ್ಟವಾಗುತ್ತದೆ. ವೋಟಿಗಾಗಿ ಏನನ್ನು ಬೇಕಾದರೂ ಮಾಡಲು ಹೇಸದ ಕಾಂಗ್ರೆಸ್, ರಾಜ್ಯದಲ್ಲಿನ ಹಿಂದೂಗಳನ್ನು ಒಕ್ಕಲೆಬ್ಬಿಸುವುದಕ್ಕೂ ಹಿಂದುಮುಂದು ನೋಡುವುದಿಲ್ಲ. ಕರ್ನಾಟಕದ ಹಿಂದೂಗಳು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಕರ್ನಾಟಕ ತಾಲಿಬಾನ್ ಆಗುವುದು ಖಚಿತ-ನಿಶ್ಚಿತ!!’ವೆಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಬಿಟ್ಟು, ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ತರಲಿ : ಡಿಸಿಎಂ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.