ಬೆಂಗಳೂರು: ಇನ್ನಾದರೂ ನಕಲಿ ಗಾಂಧಿ ಕುಟುಂಬ ಪೂಜಕರು ಬುದ್ದಿ ಕಲಿಯಬಹುದೇ? ಎಂದು ಬಿಜೆಪಿ(Karnataka BJP) ಪ್ರಶ್ನಿಸಿದೆ. ‘ಪಂಚ’ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿರುವ ಹಿನ್ನೆಲೆ ಟ್ವೀಟ್ ಮಾಡಿರುವ ಬಿಜೆಪಿ ‘ಕೈ’ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದೆ.


COMMERCIAL BREAK
SCROLL TO CONTINUE READING

‘ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ವಿಸರ್ಜಿಸಿ ಎಂದು ಗಾಂಧೀಜಿ(Mahatma Gandhi) ಪ್ರತಿಪಾದಿಸಿದ್ದರು. ಆದರೆ ನಕಲಿ ಗಾಂಧಿಗಳು, ನಕಲಿ ಕಾಂಗ್ರೆಸ್ಸಿಗರು ಗಾಂಧೀಜಿ ಮಾತಿಗೆ ಬೆಲೆ ಕೊಡಲಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂಬಂತೆ ಈಗ ಜನರೇ‌ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿದ್ದಾರೆ. ಇನ್ನಾದರೂ ನಕಲಿ ಗಾಂಧಿ ಕುಟುಂಬ ಪೂಜಕರು ಬುದ್ದಿ ಕಲಿಯಬಹುದೇ?’ ಅಂತಾ ವ್ಯಂಗ್ಯವಾಡಿದೆ.


'ಪಂಜಾಬ್ ಕಾಂಗ್ರೆಸ್ ಸಿಧು ಹಾಳು ಮಾಡಿದಂತೆ ಕರ್ನಾಟಕ ಕಾಂಗ್ರೆಸ್ಸನ್ನ ಸಿದ್ಧು ಹಾಳ ಮಾಡ್ತಾರೆ'


‘ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ(5 State Election Result)ದ ಬಳಿಕ ಒಂದಷ್ಟು ಜನ ಸೋನಿಯಾ ಹಾಗೂ ಪ್ರಿಯಾಂಕಾ ಗಾಂಧಿ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನೈತಿಕ ಹೊಣೆ ಎಂಬ ಶಬ್ದಕ್ಕೆ ಅರ್ಥವಿದೆಯೇ? ಅವರವರೇ ಅವರ ಕುಟುಂಬದೊಳಗೆ ಜವಾಬ್ದಾರಿ ಹಂಚಿಕೊಳ್ಳುವ ವಾಸ್ತವತೆಯಲ್ಲಿ ನಕಲಿ ಗಾಂಧಿಗಳು ರಾಜೀನಾಮೆ ನೀಡುವುದು ಹೇಗೆ ಸಾಧ್ಯ?’ ಅಂತಾ ಬಿಜೆಪಿ ಪ್ರಶ್ನಿಸಿದೆ.


ಇಂದು ಸಂಜೆ CWC ಸಭೆ


‘ಪಂಚ’ ರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲು(5 State Election Result) ಕಂಡಿರುವ ಕಾಂಗ್ರೆಸ್ ಗೆ ದೊಡ್ಡ ಆಘಾತವುಂಟಾಗಿದೆ. ‘ಕೈ’ ಪಕ್ಷ ಇದೀಗ ಭವಿಷ್ಯದ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವಂತಾಗಿದೆ. ಈ ಮಧ್ಯೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಭಾನುವಾರ ಸಭೆ ಸೇರಿ ಪಕ್ಷದ ಸೋಲಿನ ಕಾರಣಗಳ ಬಗ್ಗೆ ಪರಾಮರ್ಶೆ ನಡೆಸಿ ಮುಂದಿನ ಹಾದಿಯ ಬಗ್ಗೆ ಚರ್ಚಿಸಲಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾನುವಾರ ಸಂಜೆ 4 ಗಂಟೆಗೆ ಸಿಡಬ್ಲ್ಯೂಸಿ ಸಭೆ(CWC Meeting)ಯನ್ನು ಕರೆದಿದ್ದಾರೆ.


ಮುಖ್ಯಮಂತ್ರಿ ಅಭ್ಯರ್ಥಿಯನ್ನು ಒಟ್ಟಿಗೆ ಘೋಷಿಸಿ ನೋಡೋಣ? ಡಿಕೆಶಿ-ಸಿದ್ದುಗೆ ಬಿಜೆಪಿ ಸವಾಲು


ಈ ಸಭೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವೇನು ಎಂಬುದರ ಬಗ್ಗೆ ಚಿಂತನ-ಮಂಥನ ನಡೆಯಲಿದೆ. ಇಂದು ನಡೆಯಲಿರುವ ಸಿಡಬ್ಲ್ಯೂಸಿ ಸಭೆಯಲ್ಲಿ ರಾಹುಲ್ ಗಾಂಧಿ(Rahul Gandhi), ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಾರೆಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ವರದಿಗಳನ್ನು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ನಿರಾಕರಿಸಿದ್ದಾರೆ. ‘ಕಾಂಗ್ರೆಸ್ ಉನ್ನತ ನಾಯಕರು ರಾಜೀನಾಮೆ ನೀಡುವ ಸುದ್ದಿ ಸುಳ್ಳು, ಇವುಗಳನ್ನು ನಂಬಬೇಡಿ’ ಎಂದು ಟ್ವೀಟ್ ಮಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.