ವಿದ್ಯಾರ್ಥಿಗಳ ಪ್ರವಾಸಕ್ಕೂ ಕಾಂಗ್ರೆಸ್ ಸರ್ಕಾರದಿಂದ ಕೊಕ್ಕೆ: ಬಿಜೆಪಿ ಆಕ್ರೋಶ
ವಿದ್ಯಾರ್ಥಿ ವೇತನವನ್ನು ಕಾಂಗ್ರೆಸ್ ಸರ್ಕಾರ ಈಗಾಗಲೇ ಶೇ.90ರಷ್ಟು ಕಡಿತಗೊಳಿಸಿದೆ. ಆದರೆ ಶೈಕ್ಷಣಿಕ ವರ್ಷ ಆರಂಭವಾಗಿ 6 ತಿಂಗಳಾದರೂ ಅದನ್ನೂ ಬಿಡುಗಡೆ ಮಾಡದೆ #ATMSarkara ವಿದ್ಯಾರ್ಥಿಗಳಿಗೆ ದ್ರೋಹ ಬಗೆಯುತ್ತಿದೆ ಎಂಬು ಬಿಜೆಪಿ ಕಿಡಿಕಾರಿದೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳ ಪ್ರವಾಸಕ್ಕೂ ಕೊಕ್ಕೆ ಹಾಕಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಮಕ್ಕಳ ಪ್ರವಾಸಕ್ಕೂ ಕಾಂಗ್ರೆಸ್ ಕೊಕ್ಕೆ ಹಾಕಿದೆ, ಇದರಿಂದ ಮಕ್ಕಳ ಶಾಲಾ ಪ್ರವಾಸದ ಕನಸು ಭಗ್ನವಾಗಿದೆ’ ಎಂದು ಟೀಕಿಸಿದೆ.
‘ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜ್ಯದ ವಿದ್ಯಾರ್ಥಿಗಳ ಪಾಲಿಗೆ ಮರಣಶಾಸನವಾಗಿದೆ. ಅರ್ಧ ಶೈಕ್ಷಣಿಕ ವರ್ಷ ಮುಗಿದರೂ, ಪಠ್ಯಪುಸ್ತಕ, ಶೂ, ಸಮವಸ್ತ್ರ ವಿತರಿಸಿಲ್ಲ, ಈಗ ಮಕ್ಕಳ ಶೈಕ್ಷಣಿಕ ಪ್ರವಾಸವನ್ನೂ ಸಹ ಮೊಟಕುಗೊಳಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪನವರೇ #NEP ಬದಲು #SEP ಅಳವಡಿಸಿಕೊಳ್ಳುತ್ತೆವೆಂಬ ವಿತಂಡವಾದವನ್ನು ದೂರವಿಟ್ಟು, ಮೊದಲು ಇತ್ತ ಕಡೆ ಗಮನಹರಿಸಿ’ ಎಂದು ಬಿಜೆಪಿ ಸಲಹೆ ನೀಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಮಳೆ
ನಿಮಗೆ ಕಲೆಕ್ಷನ್ ಚೆಲ್ಲಾಟ, ಬಡರೋಗಿಗಳಿಗೆ ಪ್ರಾಣ ಸಂಕಟ!
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದೆಸೆಯಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಜನರ ಬದುಕು ದುರ್ಬರವಾಗುತ್ತಿರುವ ಹೊತ್ತಲ್ಲೇ, ಸಿಎಂ ಸಿದ್ದರಾಮಯ್ಯರ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಪೂರೈಕೆಯಲ್ಲಿ ಗೋಲ್‌ಮಾಲ್ ಮಾಡಿ ರೋಗಿಗಳನ್ನು ಪರದಾಡುವಂತೆ ಮಾಡಿದೆ. ಒಂದು ಕಡೆ ಜೀವ ಸಂರಕ್ಷಕ ಔಷಧಗಳ ಬೆಲೆ ಏರಿಸಿ ಕಲೆಕ್ಷನ್‌ಗೆ ಇಳಿದಿರುವ ಸಿದ್ದರಾಮಯ್ಯರವರ ಸರ್ಕಾರ, ಇನ್ನೊಂದು ಕಡೆ ಸರ್ಕಾರಿ ಆಸ್ಪತ್ರೆಗಳ ಅಗತ್ಯ ಔಷಧಗಳನ್ನೇ ಕೊಳ್ಳೆ ಹೊಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ, ನಿಮ್ಮಗಳ ಪರಮಸ್ವಾರ್ಥಕ್ಕಾಗಿ ಇಡೀ ರಾಜ್ಯವನ್ನೇ ಐಸಿಯುನಲ್ಲಿ ಇಟ್ಟಿದ್ದೀರಿ. ಈಗ ಕಲೆಕ್ಷನ್ ಹಪಹಪಿಗಾಗಿ ಬಡವರನ್ನು ಬಲಿ ತೆಗೆದುಕೊಳ್ಳಬೇಡಿ. ನಿಮಗೆ ಕಲೆಕ್ಷನ್ ಚೆಲ್ಲಾಟ, ಬಡರೋಗಿಗಳಿಗೆ ಪ್ರಾಣ ಸಂಕಟ’ವೆಂದು ಬಿಜೆಪಿ ಕಿಡಿಕಾರಿದೆ.
ಶೇ.90ರಷ್ಟು ವಿದ್ಯಾರ್ಥಿ ವೇತನ ಕಡಿತ!
ಸಮಯಕ್ಕೆ ಸರಿಯಾಗಿ ಬಸ್ ಬಾರದ ಹಿನ್ನಲೆ ಲಕ್ಕುಂಡಿಯಲ್ಲಿ ಪ್ರತಿಭಟನೆ
ಬಕಾಸುರನಂತೆ ವರ್ತಿಸುತ್ತಿರುವ ಕಾಂಗ್ರೆಸ್ ಸರ್ಕಾರ!
‘ಎಷ್ಟು ತಿಂದರೂ ಸಾಕಾಗದ ಬಕಾಸುರನಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ವರ್ತಿಸುತ್ತಿದೆ. ಕಾವೇರಿಯನ್ನು ಹರಿಬಿಟ್ಟೂ ಬಿಟ್ಟು ರೈತರ ಹೊಲಗಳನ್ನು ಒಣಗಿಸಿದ್ದಾಗಿದೆ, ಗುತ್ತಿಗೆದಾರರ ಮಂಚದ ಅಡಿ ಸಂಗ್ರಹಿಸಿಟ್ಟೂ ಇಟ್ಟು ಹಂಚಿದ್ದೂ ಆಗಿದೆ. ಇದೀಗ ರಾಜ್ಯದಲ್ಲಿ ಅಕ್ರಮ ಕ್ವಾರಿಗಳನ್ನು ನಡೆಸುವುದೂ ಅಲ್ಲದೆ, ಅಕ್ರಮವಾಗಿ ಕೇರಳಕ್ಕೂ ಸಾಗಾಟ ಮಾಡುವ ದಂಧೆಯಲ್ಲಿ ಪಾಲುದಾರಿಕೆ ವ್ಯವಹಾರಕ್ಕೆ #ATMSarkara ಕೈ ಹಾಕಿದೆ’ ಎಂದು ಬಿಜೆಪಿ ಟೀಕಿಸಿದೆ.
ಬಿಜೆಪಿ ಟೀಕಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.