ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲೆಲ್ಲಾ ಆ ಪ್ರದೇಶ ಉಗ್ರರಿಗೆ ಸುರಕ್ಷಿತ ತಾಣವಾಗುತ್ತದೆ: ಬಿಜೆಪಿ ಆರೋಪ
ಹಲವಾರು ವಿಧ್ವಂಸಕ ಕೃತ್ಯ ನಡೆಸಿ, ಅಮಾಯಕರನ್ನು ಬಲಿ ಪಡೆದ ಭಯೋತ್ಪಾದಕ ಮಸೂದ್ ಅಜರ್‌ನನ್ನು, ರಾಹುಲ್ ಗಾಂಧಿ ಮಸೂದ್`ಜೀ` ಎಂದು ಕರೆಯುವ ಮೂಲಕ ಉಗ್ರರ ಬಗ್ಗೆ ತಮಗಿರುವ ಆಂತರಿಕ ಪ್ರೇಮವನ್ನು ವ್ಯಕ್ತಪಡಿಸಿದ್ದರು ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಬೆಂಗಳೂರು: ತನ್ನ ಸ್ವಾರ್ಥ ರಾಜಕೀಯ ಉದ್ದೇಶಗಳನ್ನು ಸಾಧಿಸಲು ದೇಶದ ಭದ್ರತೆಯ ವಿಷಯದಲ್ಲಿ ರಾಜೀಯಾಗುವ ವಿಶ್ವದ ಏಕೈಕ ರಾಜಕೀಯ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲೆಲ್ಲಾ ಆ ಪ್ರದೇಶ ಉಗ್ರರಿಗೆ ಸುರಕ್ಷಿತ ತಾಣವಾಗುತ್ತದೆ. ಸಕಲರಿಗೂ ನೆಮ್ಮದಿಯ ತಾಣವಾಗಿದ್ದ ಬೆಂಗಳೂರು ಈಗ ಭಯೋತ್ಪಾದಕರ ಬೀಡಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಭಾನುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಈ ಬಗ್ಗೆ ತುಘಲಕ್ ಸರ್ಕಾರದ ಪ್ರತಿನಿಧಿಗಳು, ಬಂಧನವಾದ ಉಗ್ರರ ಸಮಗ್ರ ತನಿಖೆಗೂ ಮುನ್ನ ಉಗ್ರರಿಗೆ ಕ್ಲೀನ್‍ಚಿಟ್ ನೀಡಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಉಗ್ರಗಾಮಿಗಳ ಪರ ತನ್ನ ಮೃದು ಧೋರಣೆಯನ್ನು ತೋರುತ್ತಾ ಬಂದಿದೆ. ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗುವ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದರೇ, ಅವರಿಗೆ ಕಾನೂನು ನೆರವನ್ನು ಒದಗಿಸಲು ಕಾಂಗ್ರೆಸ್‌ನ ಲೀಗಲ್ ಸೆಲ್ ಸದಾ ಸಿದ್ಧವಾಗಿರುತ್ತದೆ’ ಎಂದು ಟೀಕಿಸಿದೆ.
90ರ ಇಳಿ ವಯಸ್ಸಲ್ಲೂ ಜಿಮ್ ಮಾಡುವ ಅರಿಂಗ್ಟನ್ ಗಿನ್ನೆಸ್ ದಾಖಲು
‘ಭಯೋತ್ಪಾದಕ ಕೃತ್ಯಗಳಿಂದ ಸೈನಿಕರು, ದೇಶದ ಜನಸಾಮಾನ್ಯರು ಬಲಿಯಾದರೇ ಅದಕ್ಕೆ ಸಂತಾಪ ಸೂಚಿಸದ ಕಾಂಗ್ರೆಸ್, ಒಂದು ವೇಳೆ ಭಯೋತ್ಪಾದಕನೊಬ್ಬ ಪೊಲೀಸರ ಗುಂಡಿಗೆ ಬಲಿಯಾದರೇ ಅದಕ್ಕೆ ಕಣ್ಣೀರು ಸುರಿಸುತ್ತದೆ. ಹಲವಾರು ವಿಧ್ವಂಸಕ ಕೃತ್ಯ ನಡೆಸಿ, ಅಮಾಯಕರನ್ನು ಬಲಿ ಪಡೆದ ಭಯೋತ್ಪಾದಕ ಮಸೂದ್ ಅಜರ್‌ನನ್ನು, ರಾಹುಲ್ ಗಾಂಧಿ ಮಸೂದ್"ಜೀ" ಎಂದು ಕರೆಯುವ ಮೂಲಕ ಉಗ್ರರ ಬಗ್ಗೆ ತಮಗಿರುವ ಆಂತರಿಕ ಪ್ರೇಮವನ್ನು ವ್ಯಕ್ತಪಡಿಸಿದ್ದರು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕಾಂತರಾಜು ವರದಿ ಜಾರಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ: ಸಚಿವ ತಂಗಡಗಿ
‘ಭಯೋತ್ಪಾದಕ ಸಂಘಟನೆಗಳು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ತಮ್ಮ ಸ್ಲೀಪರ್ ಸೆಲ್‌ಗಳನ್ನು ಜಾಗೃತಗೊಳಿಸುತ್ತವೆ, ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತವೆ. ಇದೆಲ್ಲವೂ ಕಾಂಗ್ರೆಸ್ ಪಕ್ಷ ಉಗ್ರರ ಮೇಲೆ ಹೊಂದಿರುವ ಮೃದು ಧೋರಣೆಯ ಪ್ರತೀಕವಾಗಿದೆ. ಈಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೊಟ್ಟಿರುವ ಹೇಳಿಕೆಯೂ ಇದರದೇ ಭಾಗ, ತನ್ನ ಓಲೈಕೆ ರಾಜಕಾರಣಕ್ಕಾಗಿ, ಕಾಂಗ್ರೆಸ್ ಪಕ್ಷ ದೇಶದ ಭದ್ರತೆಯ ವಿಚಾರದಲ್ಲಿ ರಾಜೀಯಾಗುವಂತಹ ಧೋರಣೆಯನ್ನು ಅನುಸರಿಸುತ್ತಿರುವುದು ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಅಪರಾಧ’ವೆಂದು ಬಿಜೆಪಿ ಕುಟುಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.