ಸಿದ್ದರಾಮಯ್ಯನವರೇ ಮೊದಲು ಮೊಸರಲ್ಲಿ ಕಲ್ಲು ಹುಡುಕುವುದು ಬಿಟ್ಟುಬಿಡಿ: ಬಿಜೆಪಿ ಟೀಕೆ
Congress v/s BJP: ಅಭಿವೃದ್ಧಿಯ ರಾಜಕಾರಣ ಎಂದರೆ ಅದು ರಾಜ್ಯದ ಅಭಿವೃದ್ಧಿಯಲ್ಲ, ಪಕ್ಷದ ನಾಯಕರ ಅಭಿವೃದ್ಧಿ ಇದು ಕಾಂಗ್ರೆಸ್ ಸಿದ್ಧಾಂತ ಎಂಬುದು ಬಹಿರಂಗ ಸತ್ಯವೆಂದು ಬಿಜೆಪಿ ಟೀಕಿಸಿದೆ.
ಬೆಂಗಳೂರು: ಸಿದ್ದರಾಮಯ್ಯನವರೇ ಮೊದಲು ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಟ್ಟುಬಿಡಿ ಎಂದು ಬಿಜೆಪಿ ಟೀಕಿಸಿದೆ. #CorruptCongress ಹ್ಯಾಶ್‍ಟ್ಯಾಗ್ ಬಳಸಿ ಭಾನುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಮಾಜಿ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
‘ಅಭಿವೃದ್ಧಿಯ ರಾಜಕಾರಣ ಎಂದರೆ ಅದು ರಾಜ್ಯದ ಅಭಿವೃದ್ಧಿಯಲ್ಲ, ಪಕ್ಷದ ನಾಯಕರ ಅಭಿವೃದ್ಧಿ ಇದು ಕಾಂಗ್ರೆಸ್ ಸಿದ್ಧಾಂತ ಎಂಬುದು ಬಹಿರಂಗ ಸತ್ಯ. ಸಿದ್ದರಾಮಯ್ಯನವರ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಡಿದ್ದೂ ಅದನ್ನೇ. ಅದಕ್ಕಾಗಿ ರೂಪಿಸಿದ 2100 ಕೋಟಿ ರೂ.ವೆಚ್ಚದ ಯೋಜನೆಯೇ ಹೆಬ್ಬಾಳದವರೆಗಿನ 6.9 ಕಿಮೀ ಉದ್ದದ ಉಕ್ಕಿನ ಫ್ಲೈಓವರ್ ಎಂದು ಬಿಜೆಪಿ ಕುಟುಕಿದೆ.
Electric shock: ವಿದ್ಯುತ್ ಪ್ರವಹಿಸಿ ಕಾರ್ಮಿಕರಿಬ್ಬರ ದಾರುಣ ಸಾವು
‘ಯಾವಾಗ ಜನರಿಂದ ವಿರೋಧ ಬರಲು ಶುರುವಾಯಿತೋ ಆಗ ಆ ಯೋಜನೆ ಕೈಬಿಟ್ಟು ಕಮಿಷನ್ ಸಂಗ್ರಹಕ್ಕೆ 2000 ಚಿಲ್ಲರೆ ಕೋಟಿ ರೂ. ವೆಚ್ಚದ ವೈಟ್ ಟ್ಯಾಪಿಂಗ್ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಆರಂಭಿಸಿದ್ದು ಎಂಬುದಕ್ಕೆ ಆ ರಸ್ತೆಯ ಗುಣಮಟ್ಟ ಸಾಕ್ಷಿಯಾಗಿ ನಿಂತಿದೆ. ಪೊಲೀಸ್ ಇಲಾಖೆಯ ಉನ್ನತೀಕರಣ ಹೆಸರಲ್ಲಿಯೂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ಮಾಡಿತು. 290.48 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿ, ಅದರಲ್ಲೂ 68.8 ಕೋಟಿ ರೂ. ಉಳಿಸಿಕೊಂಡು ಅದನ್ನು ನುಂಗಿ ಹಾಕಿತು. ಆ ಹಣ ಏನಾಯಿತು ಎಂಬುದೇ ತಿಳಿಯದಂತೆ ಕಡತ ರೂಪಿಸಿದ್ದು ಇದೇ ಸಿದ್ದರಾಮಯ್ಯನವರು’ ಎಂದು ಬಿಜೆಪಿ ಟೀಕಿಸಿದೆ.
ಸಿದ್ದರಾಮಯ್ಯನವರೇ. ಮೊದಲು ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಟ್ಟುಬಿಡಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
PM Modi Karnataka Tour: ನಾಳೆ ಪ್ರಧಾನಿ ಮೋದಿ ಬೆಂಗಳೂರು ಮತ್ತು ತುಮಕೂರು ಪ್ರವಾಸ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.