ಬೆಂಗಳೂರು: ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಹಿಂದೂಗಳಾಗುವ ಕಾಂಗ್ರೆಸ್ ನಾಯಕರು, ದಶಕಗಳ ಕಾಲದಿಂದ ಹಿಂದೂಗಳನ್ನು ಹಾಗೂ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಲೇ ಬಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಜೊತೆ ಜೊತೆಗೆ ಹಿಂದೂ ಧರ್ಮವನ್ನು ಅವಹೇಳನ ಮಾಡುವ ವ್ಯಕ್ತಿಗಳಿಗೆ ಹಾಗೂ ಅಂತಹ ಸಂಘಟನೆಗಳಿಗೆ ಕಾಂಗ್ರೆಸ್ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದು ಈಗ ಗುಟ್ಟಾಗಿ ಉಳಿದಿಲ್ಲ’ವೆಂದು ಟೀಕಿಸಿದೆ.


COMMERCIAL BREAK
SCROLL TO CONTINUE READING

ಹಿಂದೂಗಳನ್ನು ಕಂಡರೆ ಸದಾ ದ್ವೇಷ ಕಾರುವ ಪಕ್ಷಗಳ ಜೊತೆ ಸ್ನೇಹ ಬೆಳೆಸಿರುವ ಕಾಂಗ್ರೆಸ್, ಈಗ ಹಿಂದೂ ಧರ್ಮದ ಮೇಲೆ ತನಗಿರುವ ದ್ವೇಷವನ್ನು ತನ್ನ ಮಿತ್ರ ಪಕ್ಷಗಳಿಂದ ವ್ಯಕ್ತಪಡಿಸುತ್ತಿದೆ.  ಕುಟುಂಬ ರಾಜಕಾರಣ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ಹಿಂದೂ ವಿರೋಧಿ ಮನಸ್ಥಿತಿ, ಹಿಂದೂ ಧರ್ಮ ಹಾಗೂ ದೇವರುಗಳ ಅವಹೇಳನ ಹೀಗೆ ಕಾಂಗ್ರೆಸ್‌ನ DNAಯಲ್ಲಿ ಅಡಕವಾಗಿರುವ ಗುಣಗಳನ್ನೇ ಹೊಂದಿರುವ ಕೆಲವು ಪಕ್ಷಗಳ ನಾಯಕರು, ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವುದನ್ನೇ ತಮ್ಮ ದಿನನಿತ್ಯದ ಕಾಯಕವನ್ನಾಗಿಸಿಕೊಂಡಿದ್ದಾರೆ. ಸಾಲದ್ದಕ್ಕೆ ಹಿಂದೂಗಳ ಮೇಲೆ ದ್ವೇಷ ಕಾರುವ ಈ ಒಕ್ಕೂಟಕ್ಕೆ I.N.D.I.Alliance ಎಂಬ ಹೆಸರಿಟ್ಟುಕೊಂಡಿದ್ದಾರೆ’ ಎಂದು ಕುಟುಕಿದೆ.


ಸಕ್ಕರೆ ನಾಡು ಮಂಡ್ಯದಲ್ಲಿ ಇನ್ನು ಆರದ ಕಾವೇರಿ ಕಿಚ್ಚು


‘I.N.D.I.Allianceನಲ್ಲಿ ಗುರುತಿಸಿಕೊಂಡಿರುವ ಪಕ್ಷಗಳ ನಾಯಕರು, ಹೊರ ಜಗತ್ತಿಗೆ ಪರಿಚಯವಾಗಿದ್ದೇ, ಅವರುಗಳ ಹಿಂದೂ ವಿರೋಧಿ ಮನಸ್ಥಿತಿಯಿಂದ ಹೊರತು ಮತ್ತ್ಯಾವ ಘನಂದಾರಿ ಕೆಲಸದಿಂದಲ್ಲ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿರವರಿಗೆ ಹಿಂದೂಗಳ ನೆರಳನ್ನು ಕಂಡರೂ ಆಗುವುದಿಲ್ಲ. ಒಂದೆಡೆ ಜೈ ಶ್ರೀರಾಮ್‌ ಘೋಷಣೆ ಸಮಾಜವನ್ನು ಒಡೆಯುತ್ತದೆ ಹಾಗಾಗಿ ಅದನ್ನು ಹೇಳಬೇಡಿ ಎನ್ನುತ್ತಾ, ಇನ್ನೊಂದೆಡೆ ತಮ್ಮ ಪಕ್ಷ TMCಯಲ್ಲಿ ‘M for Madrasa ಮತ್ತು C for Conversion’ ಎನ್ನುವಂತೆ ತಮ್ಮ ಆಂತರ್ಯದಲ್ಲಿನ ಹಿಂದೂ ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸುತ್ತಾರೆ’ ಎಂದು ಬಿಜೆಪಿ ಕಿಡಿಕಾರಿದೆ.


ಬಿಜೆಪಿಗರ ನಿದ್ದೆಗೆಡಿಸಿದ ವಿಪಕ್ಷ ನಾಯಕನ ಆಯ್ಕೆ ಕಸರತ್ತು


‘ಇನ್ನು ಭಾರತಕ್ಕಿಂತಲೂ ಚೀನಾಕ್ಕೆ ಅಡಿಯಾಳಾಗಿ ಕೆಲಸ ಮಾಡುವ ಎಡಪಕ್ಷಗಳು, ದಶಕಗಳಿಂದ  ಹಿಂದೂಗಳ ಹಾಗೂ ಹಿಂದೂ ಧರ್ಮದ ಮೇಲೆ ಸದಾ ದ್ವೇಷ ಕಾರುತ್ತಿವೆ. ಒಂದೆಡೆ ಹಿಂದೂ ದೇವರುಗಳನ್ನೇ ಅವಹೇಳನ ಮಾಡುತ್ತಾ, ಮತ್ತೊಂದೆಡೆ ಭಾರತಕ್ಕೆ ಕಮ್ಮಿ ನಿಷ್ಠೆ ತೋರುವುದೇ ಈ ಪಕ್ಷಗಳ main line ಅಜೆಂಡಾವಾಗಿದೆ. ಈಗ ತಮಿಳುನಾಡಿನ ಡಿಎಂಕೆ ಪಕ್ಷದ ಮುಖ್ಯಮಂತ್ರಿ ಪುತ್ರ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ, ಅದನ್ನೂ ಶಾಶ್ವತವಾಗಿ ನಿರ್ಮೂಲನೆ ಮಾಡಬೇಕೆಂದು ಕರೆ ನೀಡುತ್ತಾರೆ’ ಎಂದು ಬಿಜೆಪಿ ಕಿಡಿಕಾರಿದೆ.


ರಾಹುಲ್‌ ಗಾಂಧಿಯವರ ಕಾಂಗ್ರೆಸ್‌ ಇಂತಹ ಕೀಳು ಮಟ್ಟದ ಹೇಳಿಕೆಯನ್ನು ಖಂಡಿಸುವ ಬದಲು, ಎಲ್ಲಾ ರಾಜಕೀಯ ಪಕ್ಷಗಳಿಗೂ ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಉದಯನಿಧಿಯವರ ಹಿಂದೂ ವಿರೋಧಿ ಹೇಳಿಕೆಗೆ ಪರೋಕ್ಷವಾಗಿ ಬೆಂಬಲಿಸುತ್ತಿದೆ. ಈ ಎಲ್ಲಾ ಹಿಂದೂ ವಿರೋಧಿ ರಾಜಕೀಯ ಪಕ್ಷಗಳು I.N.D.I.Allianceನ ಪ್ರಮುಖ ಸದಸ್ಯರು. ಈ ಸ್ವಾರ್ಥದ ಮೈತ್ರಿಕೂಟಕ್ಕೆ I.N.D.I.Alliance ಎನ್ನುವ ಬದಲು, ಹಿಂದೂ ವಿರೋಧಿ ಮೈತ್ರಿಕೂಟ ಎಂಬ ಹೆಸರು ಅತ್ಯಂತ ಸೂಕ್ತವಾಗಿದೆ’ ಎಂದು ಬಿಜೆಪಿ ಟೀಕಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.