ಬೆಂಗಳೂರು: ಸುಳ್ಳಿನ ಜಾತ್ರೆಯ ಸರದಾರ ಅಂದು ಕನಕಪುರದ ಬಂಡೆ ಕದ್ದು ವಿದೇಶಕ್ಕೆ ಸಾಗಿಸಿ ತಿಹಾರ್ ಯಾತ್ರೆ ಮಾಡಿದ್ದರು ಎಂದು ಬಿಜೆಪಿ ಟೀಕಿಸಿದೆ. ಮೇಕೆದಾಟು ಯೋಜನೆ(Mekedatu Project Dispute) ಜಾರಿಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲು ನಾಳೆಯಿಂದ (ಜ.9) ಕಾಂಗ್ರೆಸ್ ‘ಮೇಕೆದಾಟು ಪಾದಯಾತ್ರೆ’ ಹಮ್ಮಿಕೊಂಡಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪಾದಯಾತ್ರೆ(Mekedatu Project) ಮಾಡದಂತೆ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದೆ.


COMMERCIAL BREAK
SCROLL TO CONTINUE READING

‘ಕನಕಪುರದ ನೆಲ, ಬಂಡೆಗಳನ್ನು ನುಂಗಿ‌ ನೀರು ಕುಡಿದು ವಿದೇಶಕ್ಕೆ ಕಳುಹಿಸಿದ್ದಾರೆ ಎಂದು ಡಿಕೆ ಸೋದರರ(DK Brothers) ವಿರುದ್ಧ ಮಾಜಿ ಸಿಎಂ ಎಚ್‌ಡಿಕೆ(HD Kumaraswamy) ಅವರು ಆರೋಪಿಸಿದ್ದಾರೆ. ಹಾಗಾದರೆ ಮೇಕೆದಾಟು ಯೋಜನೆಯ ಹಿಂದಿರುವ ರಹಸ್ಯ ಉದ್ದೇಶವೇನು? ಕಾವೇರಿಯ ಪವಿತ್ರ ಜಲವನ್ನೂ ವಿದೇಶಕ್ಕೆ ರಫ್ತು ಮಾಡಿ ಕುಬೇರರಾಗುವ ಉದ್ದೇಶವೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.


ಕಾಂಗ್ರೆಸ್ ಗೆ ಟಕ್ಕರ್: ಜ.26ರಿಂದ ಜೆಡಿಎಸ್ ನಿಂದ ‘ಜನತಾ ಜಲಧಾರೆ’ ಆಂದೋಲನ


‘ಸಿದ್ದರಾಮಯ್ಯ(Siddaramaiah)ನವರೇ #ಸುಳ್ಳಿನಜಾತ್ರೆ ಯ ಸರದಾರ ಅಂದು ಕನಕಪುರದ ಬಂಡೆ ಕದ್ದು ವಿದೇಶಕ್ಕೆ ಸಾಗಿಸಿ ತಿಹಾರ್ ಯಾತ್ರೆ ಮಾಡಿದ್ದರು. ಈಗ ನೀರಿನ ಮಾರಾಟ ಯೋಜನೆ ಹಾಕಿಕೊಂಡಿದ್ದಾರೆ. ಡಿಸ್ಟಿಲರಿಗೆ, ಕ್ರಷರ್‌ಗೆ ಮೇಕೆದಾಟು ನೀರನ್ನೇ ಅಕ್ರಮವಾಗಿ ಬಳಸುವ ಯೋಜನೆಯಲ್ಲಿದ್ದಾರೆ‌. ಅವರ ಜೊತೆ ಪಾದಯಾತ್ರೆ ಮಾಡಿದರೆ ನಿಮ್ಮ ತಿಹಾರದ ಯಾತ್ರೆಯೂ ನಿಶ್ಚಿತ’ ಅಂತಾ ಬಿಜೆಪಿ(BJP) ಎಚ್ಚರಿಸಿದೆ.


Mekedatu Padayatra) ಮೇಲೆ ನಿರ್ಬಂಧ ಹೇರಲು ಷಡ್ಯಂತ್ರ ರೂಪಿಸಿದೆ. ಏನೇ ಆಗಲಿ ನಾವು ಮೇಕೆದಾಟು ಯಾತ್ರೆ ನಡೆಸಿಯೇ ತಿರುತ್ತೇವೆ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಸವಾಲ್ ಹಾಕಿದ್ದಾರೆ.


ಇದನ್ನೂ ಓದಿ: Road Accident: ನೈಸ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ, ಸ್ಥಳದಲ್ಲೇ ನಾಲ್ವರ ದುರ್ಮರಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.