ಬೆಂಗಳೂರು: #LuckyDipCMHDK ಪಕ್ಷದಲ್ಲಿ ಕುಟುಂಬ ರಾಜಕಾರಣ(Dynastic Politics)ಕ್ಕೆ ಮಾತ್ರ ಅವಕಾಶವೆಂದು ಬಿಜೆಪಿ ಟೀಕಿಸಿದೆ. ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy)ಯವರ ಕುಟುಂಬ ರಾಜಕಾರಣದ ಬಗ್ಗೆ ವ್ಯಂಗ್ಯವಾಡಿದೆ.


COMMERCIAL BREAK
SCROLL TO CONTINUE READING

‘ಮಾಜಿ #LuckyDipCMHDK ಅವರೇ, ಮುಂದಿನ ಚುನಾವಣೆ(Vidhan Sabha Election 2022)ಯಲ್ಲಿ ಮಿಶನ್-123 ಎನ್ನುತ್ತಿದ್ದೀರಿ. ನಿಮ್ಮ ಕುಟುಂಬದ ಎಲ್ಲಾ ಕವಲುಗಳಿಗೂ ಈಗಾಗಲೇ ಅವಕಾಶ ಕಲ್ಪಿಸಿದ್ದೀರಿ. ಮುಂದಿನ ಚುನಾವಣೆಗೆ ಇನ್ನು ಯಾರ್ಯಾರು ನಿಮ್ಮ ಮನೆತನದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ?’ ಎಂದು ಪ್ರಶ್ನಿಸಿದೆ.


Electricity Bill: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ, ಜನರ ಜೇಬಿಗೆ ಮತ್ತಷ್ಟು ಹೊರೆ


‘ಜೆಡಿಎಸ್‌ ಮಿಶನ್-123 ಎನ್ನುವ ಸಂಕಲ್ಪ ಮಾಡಿದೆ. ಮಾಜಿ #LuckyDipCMHDK ಅವರೇ, ಇದರರ್ಥ ಜೆಡಿಎಸ್‌(JDS Party) 123 ಸ್ಥಾನ ಗಳಿಸಲಿದೆ ಎಂದೋ ಅಥವಾ ಯಾವ ಪಕ್ಷವನ್ನೂ 123 ಸ್ಥಾನ ದಾಟಲು ಬಿಡುವುದಿಲ್ಲವೆಂದೋ? ಅತಂತ್ರದ ತಂತ್ರ ಹೂಡಿ ಮತ್ತೆ ಸಾಂದರ್ಭಿಕ ಶಿಶು ಎನಿಸಿಕೊಳ್ಳುವ ತವಕವೇ?’ ಎಂದು ಕುಟುಕಿದೆ.


ರಾಜ್ಯದ ಜನತೆಗೆ ಕರೆಂಟ್ ಶಾಕ್!; ಸರ್ಕಾರಕ್ಕೆ ಹಣ ಮಾಡುವುದೇ ದಂಧೆ ಆಗಿದೆ ಎಂದ ಎಚ್‌ಡಿಕೆ


NH Konaraddi)ಯವರನ್ನು ಕೇಳಿದರೆ ಉತ್ತರ ಸಿಗಬಹುದೇ? ಅಥವಾ ರಾಜ್ಯಸಭೆಯ ಕನಸು ಕಂಡ ಫಾರೂಕ್ ವಿವರಿಸಬಹುದೇ?’ ಎಂದು ಟ್ವೀಟ್ ಮಾಡಿದೆ.


‘#ಬ್ರದರ್ ನಿಮ್ಮ ಪಕ್ಷದ ಮಿಶನ್-123ಗೆ ತೆನೆ ಹೊರಬೇಕೆಂದರೆ ಒಬ್ಬರೇ ಪಕ್ಷಕ್ಕೆ ಸೇರಬೇಕೋ, ಕುಟುಂಬ ಸಮೇತರಾಗಿ ಸೇರಬೇಕೋ? ಏಕೆಂದರೆ ಮಾಜಿ #LuckyDipCMHDK ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಮಾತ್ರ ಅವಕಾಶ. ಇನ್ನು ಕೆಲವು ಕಡೆ ಪ್ರಚಾರ ಮಾಡುವುದಕ್ಕೂ‌ ಕುಟುಂಬದವರು ಮಾತ್ರ ಉಳಿಯುವುದಲ್ಲವೇ?’ ಎಂದು ಪ್ರಶ್ನಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.