ಬೆಂಗಳೂರು: 37 ತಾಲೂಕುಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿದ ಬಿಜೆಪಿ, ‘ಪ್ರಿಯಾಂಕ್ ಖರ್ಗೆಯವರೇ ಬರ ಪರಿಸ್ಥಿತಿಯ ಮಾಹಿತಿ ನಿಮಗಿದೆ ಎಂದು ತೋರಿಸಲು ಪ್ರಯತ್ನಿಸುತ್ತಿದ್ದೀರೋ ಅಥವಾ ನಿಮ್ಮದೇ ಪಕ್ಷ ಇದನ್ನು ನಿಭಾಯಿಸುವಲ್ಲಿ ಹೇಗೆ ಸೋತಿದೆ ಎಂದು ಪರೋಕ್ಷವಾಗಿ ತಿಳಿಸುತ್ತಿದ್ದೀರೋ?’ ಎಂದು ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

‘ಕುಡಿಯುವ ನೀರಿನ ಸಮಸ್ಯೆ 37 ತಾಲೂಕುಗಳಲ್ಲಿ ಮಾತ್ರ ಎದುರಾಗಿದೆ ಎಂಬ ಮೂಲಕ ನಿಮ್ಮ ನಿರೀಕ್ಷೆ ಇನ್ನಷ್ಟು ಜಾಸ್ತಿಯಿತ್ತು ಎಂಬುದನ್ನೂ ತಾವು ತೋರಿಸಿಕೊಟ್ಟಿದ್ದೀರಿ. ಈಗಾಗಲೇ ಕಲುಷಿತ ನೀರಿಗೆ ಸಾಕಷ್ಟು ಜೀವಗಳು ಬಲಿಯಾಗಿವೆ, ಹೀಗಿರುವಾಗಲೂ ಎಲ್ಲಾ ಇಲಾಖೆಯ ಒಳಗೂ ಮೂಗು ತೂರಿಸುವ ನೀವು ಜಿಲ್ಲಾ ಸಿಇಒಗಳಿಗೆ ಸೂಚನೆ ನೀಡಿ ಕೈ ತೊಳೆದುಕೊಂಡರೆ ಸಾಕೇ?’ ಎಂದು ಬಿಜೆಪಿ ಕುಟುಕಿದೆ.


Dharwad: ಅಧಿಕಾರ ಸ್ವೀಕರಿಸಿದ ದಿನವೇ ಹೃದಯಾಘಾತದಿಂದ ಅಧಿಕಾರಿ ಸಾವು..!


ಪ್ರಿಯಾಂಕ್ ಖರ್ಗೆ ಸಾಹೇಬರು ತಮ್ಮ ಗಮನವನ್ನು ರಾಜ್ಯಾದ್ಯಾಂತ ಹರಿಸುವ ಮೊದಲು ಅವರದೇ ತವರು ಜಿಲ್ಲೆಯ ಸಮಸ್ಯೆಗಳ ಕಡೆಗೆ ಮೊದಲು ಗಮನ ಹರಿಸಬೇಕು. ಕಲಬುರ್ಗಿ ಮರಳು ಮಾಫಿಯಾ, ಪೊಲೀಸರ ಹತ್ಯೆ, ಪುಡಿ ರೌಡಿಗಳ ಗೂಂಡಾಗಿರಿ, ನಿಮ್ಮ ಬೆಂಬಲಿಗರಿಂದ ನಡೆಯುತ್ತಿರುವ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣಗಳ ಬಗ್ಗೆ ಒಂದಷ್ಟು ಅಂಕಿ-ಅಂಶಗಳನ್ನಾದರೂ ತರಿಸಿ ನೋಡುವುದು ಒಳಿತು. ನಿಮ್ಮ ಇಲಾಖೆ ಮತ್ತು ಕ್ಷೇತ್ರದ ಜನತೆ ನೀಡಿದ ಜವಾಬ್ದಾರಿಯನ್ನಾದರೂ ಸರಿಯಾಗಿ ನಿರ್ವಹಿಸಿ ಅದಕ್ಕೆ ನ್ಯಾಯ ಒದಗಿಸಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.


ಇದನ್ನೂ ಓದಿ: ಗಾಂಧಿಜಿಯನ್ನು ಕೊಂದ ಮನಸ್ಥಿತಿಯೇ ಗೌರಿಲಂಕೇಶ್, ಕಲ್ಬುರ್ಗಿಯವರನ್ನೂ ಕೊಂದಿದೆ: ಸಿಎಂ ಸಿದ್ದರಾಮಯ್ಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.