ಮೇಕೆದಾಟು ಪಾದಯಾತ್ರೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಸೋಂಕು: ಡಿಕೆಶಿ ವಿರುದ್ಧ ಬಿಜೆಪಿ ಗರಂ
ಕೋವಿಡ್ ಸೂಪರ್ ಸ್ಪ್ರೆಡರ್ ಡಿ.ಕೆ.ಶಿವಕುಮಾರ್ ಅವರೇ ಇದಕ್ಕೆ ಹೊಣೆ ಯಾರು? ಅಂತಾ ಪ್ರಶ್ನಿಸಿದೆ.
ಬೆಂಗಳೂರು: ಮೇಕೆದಾಟು ಯೋಜನೆ(Mekedatu Project Dispute)ಗೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಾಯಾತ್ರೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಅನೇಕ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ಧ ಬಿಜೆಪಿ ಗಂರ ಆಗಿದೆ.
#ಉತ್ತರಿಸಿಡಿಕೆಶಿ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ರಕ್ಷಣೆಗೆ ನಿಯೋಜನೆಯಾಗಿದ್ದ ಪೊಲೀಸರು ಕೋವಿಡ್ ಸೋಂಕಿತರಾಗುತ್ತಿದ್ದಾರೆ. ಕೋವಿಡ್ ಸೂಪರ್ ಸ್ಪ್ರೆಡರ್ ಡಿಕೆಶಿ(DK Shivakumar) ಅವರೇ ಇದಕ್ಕೆ ಹೊಣೆ ಯಾರು?’ ಅಂತಾ ಪ್ರಶ್ನಿಸಿದೆ.
Milk Price : ಸಾಮಾನ್ಯ ಜನರಿಗೆ ಬಿಗ್ ಶಾಕ್ : ನಂದಿನ ಹಾಲಿನ ದರ ₹3 ಏರಿಕೆಗೆ KMF ಚಿಂತನೆ
‘ಯಾರಿಗೆ ಆರೋಗ್ಯ ಸರಿ ಇಲ್ಲವೋ, ಅವರು ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಉಡಾಫೆ ಉತ್ತರ ಕೊಟ್ಟರೆ ಹೇಗೆ ಡಿಕೆಶಿ ಅವರೇ? ಹಳೇ ಮೈಸೂರು ಭಾಗದಲ್ಲಿ ಕೋವಿಡ್(COVID-19) ಹಂಚಿಕೆಯ ಅನಧಿಕೃತ ಫ್ರಾಂಚೈಸಿದಾರರು ನೀವು. ಸಾಂಕ್ರಾಮಿಕ ಕಾಯಿದೆ ಉಲ್ಲಂಘನೆಯ ನೇತಾರರಲ್ಲವೇ ನೀವು?’ ಅಂತಾ ಬಿಜೆಪಿ ಟ್ವೀಟ್ ಮಾಡಿ ಟೀಕಿಸಿದೆ.
ಸಂಪುಟ ವಿಸ್ತರಣೆ: ರಮೇಶ್ ಜಾರಕಿಹೊಳಿಗೆ ಮತ್ತೆ ಒಲಿಯುತ್ತಾ ಮಂತ್ರಿಗಿರಿ!?
‘ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಅತ್ಯಂತ ಅಗತ್ಯವಾಗಿ ಕೋವಿಡ್ ಪರೀಕ್ಷಾ ವರದಿ ಬಿಡುಗಡೆಗೊಳಿಸಬೇಕು. ಇವರು ಪಾದಯಾತ್ರೆ(Mekedatu Project) ನಡೆಸಿದ ಭಾಗದಲ್ಲಿ ಈಗ ಕೋವಿಡ್ ಸೋಂಕು ಹೆಚ್ಚುತ್ತಿದೆ. ಈ ಬಾರಿ ಕೋವಿಡ್ ಸೂಪರ್ ಸ್ಪ್ರೆಡರ್ ರೀತಿ ಕೆಲಸ ಮಾಡಿದ್ದೀರಿ. ಸಾರ್ವಜನಿಕ ಹಿತದೃಷ್ಟಿಯಿಂದ ನಿಮ್ಮ ಕೋವಿಡ್ ವರದಿ ಬಹಿರಂಗಗೊಳಿಸುವಿರಾ?’ ಅಂತಾ ಬಿಜೆಪಿ ಪ್ರಶ್ನಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.