ರಾಜ್ಯದಲ್ಲಿ ATM ಸರ್ಕಾರ ದಿನೇ ದಿನೆ ಜನರಿಗೆ ತನ್ನ ಉಗ್ರರೂಪ ತೋರಿಸುತ್ತಿದೆ: ಬಿಜೆಪಿ
Congress Vs BJP: ತರಕಾರಿ, ಬೇಳೆ ಸೇರಿದಂತೆ ದಿನಸಿ ಬೆಲೆ ಕೇಳಿ ಜನರು ಮೂರ್ಛೆ ಹೋಗುವಂತಾಗಿದೆ. ಮಳೆ ಇಲ್ಲದೆ ರೈತರು ಕಂಗಾಲಾಗಿ ಕೂತಿರುವುದರಿಂದ ಬೆಲೆ ಗಗನಕ್ಕೆ ಏರುತ್ತಿದೆ. ಗ್ರಾಹಕರ ಕಣ್ಣಲ್ಲಿ ನೀರು ಬರುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.
ಬೆಂಗಳೂರು: ತರಕಾರಿ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯದಲ್ಲಿ #ATMSarkara ದಿನೇ ದಿನೆ ಜನರಿಗೆ ತನ್ನ ಉಗ್ರ ರೂಪವನ್ನು ತೋರಿಸುತ್ತಿದೆ’ ಎಂದು ಕುಟುಕಿದೆ.
‘ತರಕಾರಿ, ಬೇಳೆ ಸೇರಿದಂತೆ ದಿನಸಿ ಬೆಲೆ ಕೇಳಿ ಜನರು ಮೂರ್ಛೆ ಹೋಗುವಂತಾಗಿದೆ. ಮಳೆ ಇಲ್ಲದೆ ರೈತರು ಕಂಗಾಲಾಗಿ ಕೂತಿರುವುದರಿಂದ ಬೆಲೆ ಗಗನಕ್ಕೆ ಏರುತ್ತಿದೆ. ಗ್ರಾಹಕರ ಕಣ್ಣಲ್ಲಿ ನೀರು ಬರುತ್ತಿದೆ. ಸಂವೇದನಾ ರಹಿತ ಧೋರಣೆಯನ್ನು ಸಿದ್ದರಾಮಯ್ಯರರ ಸರ್ಕಾರ ತೋರುತ್ತಿರುವುದು ನಾಚಿಕೆಗೇಡು..!’ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: ಲೇಡಿಸ್ ಪಿಜಿಗಳೇ ಟಾರ್ಗೆಟ್: ಯುವತಿಯರ ಸ್ನಾನದ ವಿಡಿಯೋ ಚಿತ್ರೀಕರಿಸುತ್ತಿದ್ದ ಕಾಮುಕ ಅಂದರ್
ಸ್ವಾಮೀಜಿಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ!
‘ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ, ಗೋ ಹತ್ಯೆ ನಿಷೇಧ ಕಾಯಿದೆಯನ್ನು ರದ್ದುಪಡಿಸಬೇಡಿ ಎಂದು ಸ್ವಾಮೀಜಿಗಳು ಆಗ್ರಹಿಸಿದರೂ, ಸಿದ್ದರಾಮಯ್ಯರ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಆದರೆ, ಅಕ್ರಮ ಮತಾಂತರದ ಪೋಷಾಕು ತೊಟ್ಟಿರುವ ಮಿಷನರಿಗಳನ್ನು ಹಾಡಿ ಹೊಗಳಿ ಉಪ್ಪರಿಗೆಯ ಮೇಲೆ ಕೂರಿಸಲಾಗುತ್ತಿದೆ. ಇಂದು ಕಾಂಗ್ರೆಸ್ ಸರ್ವಜನಾಂಗದ ಶಾಂತಿಯ ತೋಟವನ್ನು, ಮಿಷನರಿಗಳ ಮತಾಂತರ ತೋಟವನ್ನಾಗಿ ಮಾಡಲು ಕುಮ್ಮಕ್ಕು ಕೊಟ್ಟಿದೆ’ ಎಂದು ಬಿಜೆಪಿ ಕಿಡಿಕಾರಿದೆ.
ಹತ್ತಿಕ್ಕುವ ಹುನ್ನಾರ..!
‘ರಾಜ್ಯದಲ್ಲಿ ಕಾಂಗ್ರೆಸ್ ಮೊದಲಿನಿಂದಲೂ ಭಜರಂಗದಳದ ವಿರುದ್ಧ ದ್ವೇಷಕಾರುತ್ತಾ ಬಂದಿದೆ. ಹೀಗಾಗಿಯೇ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರಚೋದಿಸಿ ಹತ್ತಿಕ್ಕುವ ಹುನ್ನಾರ ನಡೆಸುತ್ತಿದೆ. ಸಿದ್ದರಾಮಯ್ಯನವರೇ, ನಿಮ್ಮ ತುಘಲಕ್ ಸರ್ಕಾರದ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವೇ..? ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೈಯಲ್ಲಿ ಹರಿಯುತ್ತಿರುವುದು, ನಿಮ್ಮ ಮೈಯಲ್ಲಿ ಹರಿಯುತ್ತಿರುವುದು ಕೆಂಪು ಬಣ್ಣದ ರಕ್ತವೇ ಹೊರೆತು, ಹಸಿರು ಬಣ್ಣದ ರಕ್ತವಲ್ಲ... ಇದೇನಾ ನಿಮ್ಮ ಸರ್ವಜನಾಂಗದ ಶಾಂತಿಯ ತೋಟದ ಪರಿಕಲ್ಪನೆ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಸರ್ವಪಕ್ಷಗಳ ಜೊತೆ ಗೃಹ ಸಚಿವ ಅಮಿತ್ ಶಾ ಮಹತ್ವದ ಸಭೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.