ಹತ್ತಿದ ಏಣಿ ಒದೆಯುವುದರಲ್ಲಿ ‘ಬುರುಡೆರಾಮಯ್ಯ’ ನಿಸ್ಸೀಮರು: ಬಿಜೆಪಿ ಟೀಕೆ
ದಲಿತ ವಿರೋಧಿ ಸಿದ್ದರಾಮಯ್ಯನವರೇ ನೀವು ಹೊಟ್ಟೆಪಾಡಿಗಾಗಿ ಮಲ್ಲಿಕಾರ್ಜುನ್ ಖರ್ಗೆಯವರಿಂದ ಪ್ರತಿಪಕ್ಷ ನಾಯಕನ ಸ್ಥಾನ ಕಸಿದಿರಿ. ಜಿ.ಪರಮೇಶ್ವರರನ್ನು ಸೋಲಿಸಿದಿರಿ ಎಂದು ಬಿಜೆಪಿ ಟೀಕಿಸಿದೆ.
ಬೆಂಗಳೂರು: ಹತ್ತಿದ ಏಣಿ ಒದೆಯುವುದರಲ್ಲಿ ಸಿದ್ದರಾಮಯ್ಯ(Siddaramaiah) ನಿಸ್ಸೀಮರು ಎಂದು ಕರ್ನಾಟಕ ಬಿಜೆಪಿ ಟೀಕಿಸಿದೆ. #ದಲಿತವಿರೋಧಿಸಿದ್ದರಾಮಯ್ಯ ಹ್ಯಾಶ್ ಟ್ಯಾಗ್ ಬಳಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜಕೀಯವಾಗಿ ಬೆಳೆಸಿದ ಎಚ್.ಡಿ.ದೇವೇಗೌಡರಿಗೆ ದ್ರೋಹ ಮಾಡಿದಿರಿ. ಹೆಗಲುಕೊಟ್ಟ ಜಿ.ಪರಮೇಶ್ವರ್ ಅವರ ಬೆನ್ನಿಗೆ ಚೂರಿ ಹಾಕಿದಿರಿ. ಜೊತೆಯಾಗಿ ಬಂದ ಎಚ್.ಸಿ.ಮಹದೇವಪ್ಪ ಅವರನ್ನು ದೂರವಿಟ್ಟಿರಿ. ಈಗ ಜನತಾ ಪರಿವಾರದ ದಲಿತ ನಾಯಕರನ್ನೇ ನಿಂದಿಸುತ್ತಿದ್ದೀರಿ’ ಎಂದು ಕುಟುಕಿದೆ.
‘ಹೊಟ್ಟೆಪಾಡಿಗಾಗಿ ಹೋಗಿರುವುದು.... #ಬುರುಡೆರಾಮಯ್ಯ ಅವರೇ, ಎಷ್ಟು ಸರಳವಾಗಿ ನಿಮ್ಮ ಸಮಕಾಲೀನ ದಲಿತ ನಾಯಕ(Dalith Leaders)ರನ್ನು ತುಚ್ಛೀಕರಿಸಿಬಿಟ್ಟಿರಿ. ನಿಮ್ಮ ಈ ದುರಂಹಕಾರದ ನಡೆಯನ್ನು ರಾಜ್ಯದ ಸ್ವಾಭಿಮಾನಿ ದಲಿತ ಸಮುದಾಯ ಎಂದಿಗೂ ಖಂಡಿತ ಕ್ಷಮಿಸಲಾರದು. ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ ಸೇರಿದಂತೆ ಅನೇಕ ಮುಖಂಡರು ಬಿಜೆಪಿ ಸೇರಿದ್ದಾರೆ. ಅವರೆಲ್ಲರೂ ತಮ್ಮ ಸಮುದಾಯದ ಜನರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದರೆ, ದಲಿತ ಸಮುದಾಯವನ್ನು ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡ #ಬುರುಡೆರಾಮಯ್ಯ ಅವರಿಗೆ ದಲಿತ ವರ್ಗದ ಬಗ್ಗೆ ಕಿಂಚಿತ್ ಗೌರವವೂ ಇಲ್ಲ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ ಸಾಧ್ಯತೆ
‘ಸಿದ್ದರಾಮಯ್ಯ(Siddaramaiah)ನವರೇ, ಮೀಸಲಾತಿ ಕೊಡಿಸಿದ್ದು ಕಾಂಗ್ರೆಸ್ಸೂ ಅಲ್ಲ, ನೀವೂ ಅಲ್ಲ. ಮೀಸಲು ಹಕ್ಕು ನೀಡಿದ್ದು ಸಂವಿಧಾನ. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ, ದಲಿತರಿಗೆ ಅನ್ಯಾಯ ಮಾಡಿದೆ. ಆ ಐತಿಹಾಸಿಕ ಅಪಮಾನವನ್ನು ಮರೆಯಲು ಸಾಧ್ಯವೇ #ಬುರುಡೆರಾಮಯ್ಯ?’ ಎಂದು ಬಿಜೆಪಿ(Karnataka BJP) ಪಶ್ನಿಸಿದೆ.
Mallikarjun Kharge)ಯವರಿಂದ ಪ್ರತಿಪಕ್ಷ ನಾಯಕನ ಸ್ಥಾನ ಕಸಿದಿರಿ. ಜಿ.ಪರಮೇಶ್ವರರನ್ನು ಸೋಲಿಸಿದಿರಿ. ಎಚ್.ಸಿ.ಮಹಾದೇವಪ್ಪರನ್ನು ಓಡಿಸಿದಿರಿ ಮತ್ತು ಜಾತಿ ಗಣತಿ ಮಾಡಿಸಿದಿರಿ. ನಿಮ್ಮ ಹೊಟ್ಟೆಪಾಡಿಗಾಗಿ ದಲಿತರಿಗೆ ನಿರಂತರ ದ್ರೋಹವೆಸಗಿದ್ದನ್ನು ಮರೆಯಲು ಸಾಧ್ಯವೇ #ಬುರುಡೆರಾಮಯ್ಯ?’ ಎಂದು ಬಿಜೆಪಿ ಟೀಕಿಸಿದೆ.
ಬಿಜೆಪಿ ರಾಜಕೀಯ ಕಾರಣಗಳಿಂದಾಗಿ ಸಿದ್ದರಾಮಯ್ಯನವರ ವಿರುದ್ಧ ಅಪಪ್ರಚಾರ ಮಾಡುತ್ತಿದೆ-ರಾಮಲಿಂಗಾರೆಡ್ಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ