ಬೆಂಗಳೂರು : ಕುಟುಂಬ ರಾಜಕಾರಣ ವಿಚಾರ ನಾನೂ ಒಪ್ಪೋದಿಲ್ಲ. ತಂದೆಯವರು ಕಾರ್ಯಕರ್ತರ ಮಾತಿಗೆ ಉತ್ತರ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ  ವಿಜಯೇಂದ್ರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಮಾಧ್ಯಮದವರ ಜೊತೆ ಮಾತನಾಡಿದ ಬಿವೈ  ವಿಜಯೇಂದ್ರ, ಪೂಜ್ಯ ತಂದೆಯವರ ಮಾತು ಆದರ್ಶ ನಾನೂ ಪಾಲಿಸಬೇಕಾಗುತ್ತದೆ. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ ಹೊರತು ಸಕ್ರಿಯ ರಾಜಕಾರಣದಿಂದ ಅಲ್ಲ. ಪಕ್ಷ ಏನೇ ನಿರ್ಧಾರ ಕೈಗೊಂಡರೂ ಕೂಡ ಪಾಲಿಸ್ತೇನೆ. ಯಡಿಯೂರಪ್ಪ ಘೋಷಣೆ ಬಳಿಕ ಹಲವಾರು ಚರ್ಚೆ ಆಗ್ತಿದೆ. ಅವರು ಪಕ್ಷದ ಹಿತದೃಷ್ಟಿಯಿಂದ ತೀರ್ಮಾನ ಮಾಡ್ತಾರೆ. ಪಕ್ಷಕ್ಕೆ ಒಳ್ಳೆಯದಾಗಬೇಕು ಅನ್ನೋ ಕಾರಣದಿಂದ ತಿಳಿಸಿದ್ದಾರೆ. 


ಇದನ್ನೂ ಓದಿ : Mallikarjun Kharge : 'ಚುನಾವಣೆ ಮುನ್ನೆವೇ ನಾನು ಸಿಎಂ, ನಾನು ಸಿಎಂ ಎನ್ನುವುದು ಸರಿಯಲ್ಲಾ'


ನಾನು ರಾಜ್ಯದಾದ್ಯಂತ ಪ್ರವಾಸ ಮಾಡಿ ಹಳೆ ಮೈಸೂರು ಭಾಗದಲ್ಲಿ ಗಟ್ಟಿಗೊಳಿಸಬೇಕು ಅನ್ನೋ ಅಪೇಕ್ಷೆ ಇದೆ. ತಮ್ಮ ಮಕ್ಕಳು ತಮ್ಮ ಪರಿಶ್ರಮದಿಂದ ಮುಂದೆ ಬರಬೇಕು ಅಂತ ಯಡಿಯೂರಪ್ಪ ಅಪೇಕ್ಷೆ ಪಟ್ಟವರು. ವಿಜಯೇಂದ್ರಗೆ ಶಕ್ತಿ ಇದೆ ಅಂತ ಪಕ್ಷಕ್ಕೆ ಅನಿಸಿದರೆ ಪಕ್ಷ ಜವಾಬ್ದಾರಿ ನೀಡುತ್ತದೆ ಎಂದರು. 


ಈ ಇನ್ನು ಮುಂದುವರೆದು ಮಾತನಾಡಿದ ಅವರು, ಪಿಎಸ್ಐ ಹಗರಣ ಕಾಂಗ್ರೆಸ್ ಪಕ್ಷದ ಕೂಸು. ಪಿಎಸ್ಐ ಹಗರಣದಲ್ಲಿ ಯಾವ ಪುಣ್ಯಾತ್ಮ ನನ್ನ ಹೆಸರು ಹೇಳಿದವನು? ಸಿದ್ದರಾಮಯ್ಯ ನವರಿಗೆ ನಾನು ಉತ್ತರ ಕೊಡುವುದಿಲ್ಲ. ಕಪೋಲ ಕಲ್ಪಿತ ಪ್ರಶ್ನೆಗಳಿಗೆಲ್ಲ ನಾನು ಉತ್ತರಿಸುವುದಿಲ್ಲ.ಕೆಲಸಕ್ಕೆ ಬಾರದ್ದರಲ್ಲಿ ನಾನು ಇನವಾಲ್ವ್ ಆಗಿಲ್ಲ. ಅಕಸ್ಮಾತ್ ಅಧಿಕೃತವಾಗಿ ಪಿಎಸ್ಐ ಅಕ್ರಮದಲ್ಲಿ ನನ್ನ ಹೆಸರು ಕೇಳಿ ಬಂದರೆ ನಾನು ಚುನಾವಣೆಗೇ ನಿಲ್ಲುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 


ಇದನ್ನೂ ಓದಿ : ಮೂಲ ಕಾಂಗ್ರೆಸಿಗರ ಸರ್ವನಾಶವೇ ‘ಸಿದ್ದರಾಮೋತ್ಸವ’ದ ಉದ್ದೇಶ: ಬಿಜೆಪಿ ಆರೋಪ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.