ಬೆಂಗಳೂರು : ರಾಜ್ಯದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಬಿಜೆಪಿ ತಯಾರಿ ಮಾಡ್ಕೊಳ್ಳುತ್ತಿದ್ದು, ರಾಜ್ಯದ ನಾಲ್ಕು ದಿಕ್ಕಿನಿಂದ ರಥ ಯಾತ್ರೆ ಮಾಡುವ ಸಂಕಲ್ಪ ಮಾಡಿದೆ. ಫೆಬ್ರವರಿ ಅಂತ್ಯದೊಳಗೆ ಆರಂಭ ಆಗಲಿರುವ ಈ ಯಾತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿಎಸ್  ಯಡಿಯೂರಪ್ಪ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವ ವಹಿಸಲಾಗಿದೆ.


COMMERCIAL BREAK
SCROLL TO CONTINUE READING

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರಗೆ ಮೋರ್ಚಾಗಳ ಜಿಲ್ಲಾ ಸಮಾವೇಶ ಉಸ್ತುವಾರಿ ನೀಡಲಾಗಿದೆ. ಮೋರ್ಚಾಗಳ ಜಿಲ್ಲಾ ಸಮಾವೇಶದ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದ್ದು, ಬಿವೈ ವಿಜಯೇಂದ್ರಗೆ ಸಂಚಾಲಕರನ್ನು ನೇಮಕ ಮಾಡಲಾಗಿದೆ. ಜಗದೀಶ್ ಹಿರೇಮನಿ ಹಾಗೂ ಯಶಪಾಲ್ ಸುವರ್ಣ ಅವರನ್ನು ಸಹ ಸಂಚಾಲಕರನ್ನಾಗಿ ನಿಯೋಜಿಸಲಾಗಿದೆ. 


ಇದನ್ನೂ ಓದಿ : DK Sivakumar : ಸರ್ವೇ ಆಧಾರದಲ್ಲಿ ಕೈ ಟಿಕೆಟ್ ಹಂಚಿಕೆ ಇದ್ದರೂ ಬೆಂಬಲಿಗರ ಪರ ಡಿಕೆ ಬ್ಯಾಟಿಂಗ್!


ಯಾತ್ರೆ ಪ್ರಮುಖರು ಯಾರು?


ಸಿಸಿ ಪಾಟೀಲ್ - ಯಾತ್ರೆ ಪ್ರಮುಖರು 


ಎನ್ ರವಿಕುಮಾರ್‌ ಯಾತ್ರೆ ಸಹ ಪ್ರಮುಖರು 


ಗೀತಾ ವಿವೇಕಾನಂದ - ಯಾತ್ರೆ ಸಹ ಪ್ರಮುಖರು 


ಯಾತ್ರೆ - 1


ಎಂ. ರಾಜೇಂದ್ರ ( ರಾಜ್ಯ ಬಿಜೆಪಿ ಉಪಾಧ್ಯಕ್ಷ) - ಸಂಚಾಲಕ 


ಎಸ್ ದತ್ತಾತ್ರಿ ಹಾಗೂ ಕಿಶೋರ್‌ - ಸಹ ಸಂಚಾಲಕರು 


ಯಾತ್ರೆ  - 2 


ಚಲವಾದಿ ನಾರಾಯಣ ಸ್ವಾಮಿ - ಸಂಚಾಲಕರು 


ಸಚ್ಚಿದಾನಂದ ಮೂರ್ತಿ ಹಾಗೂ ಆ. ದೇವೇಗೌಡ ಸಹ ಸಂಚಾಲಕರು 


ಯಾತ್ರೆ - 3


ಅರುಣ್ ಸಹಾಪುರ ( ಮಾಜಿ ಎಂಎಲ್‌ಸಿ) ಸಂಚಾಲಕರು 


ವಿವೆಕಾನಂದ ಡಬ್ಬಿ ಹಾಗೂ ಮಲ್ಲಿಕಾರ್ಜುನ ಬಾಳಿಕಾಯಿ ಸಹ ಸಂಚಾಲಕರು 


ಯಾತ್ರೆ -  4 


ರಘುನಾಥ ಮಲ್ಕಾಪುರೆ ( ಎಂಎಲ್‌ಸಿ) ಸಂಚಾಲಕರು 


ಅಮರನಾಥ್ ಪಾಟೀಲ್ ಹಾಗೂ ಸಿದ್ದೇಶ್ ಯಾದವ್ - ಸಹ ಸಂಚಾಲಕರು 


ಫಲಾನುಭವಿಗಳ ಸಮ್ಮೇಳದ ಸಂಚಾಲಕರಾಗಿ ಸಚಿವ  ಹಾಲಪ್ಪ ಆಚಾರ್ ಅವರನ್ನು, ಸಹ ಸಂಚಾಲಕರಾಗಿ ಸಚಿವ ಎಸ್‌.ಟಿ ಸೋಮಶೇಖರ್, ಹಾಗೂ ಶಾಸಕ ಪಿ. ರಾಜೀವ್ ಅವರನ್ನು ನೇಮಕ ಮಾಡಲಾಗಿದೆ.  ವಿಡಿಯೋ ವ್ಯಾನ್ ಪ್ರಚಾರಕ್ಕೆ ಎಸ್‌ವಿ ರಾಘವೇಂದ್ರ ಸಂಚಾಲಕರಾದರೆ ಪ್ರೇಮಾನಂದ ಶೆಟ್ಟಿ, ಭಾರತಿ ಮುಗ್ದುಂ ಅವರನ್ನು  ಸಹ ಸಂಚಾಲಕರನ್ನಾಗಿ ನೇಮಿಸಲಾಗಿದೆ. 


ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನಕ್ಕೆ ಸಂಚಾಲಕರನ್ನಾಗಿ ಸಚಿವ ಡಾ. ಕೆ ಸುಧಾಕರ್‌ ಅವರನ್ನು ನೇಮಿಸಲಾಗಿದೆ.  ಸಹ ಸಂಚಾಲಕರಾಗಿ ಬಿ.ಸಿ ನಾಗೇಶ್, ತೇಜಸ್ವನಿ ಅನಂತ್ ಕುಮಾರ್‌, ಎಸ್‌ ಸುರೇಶ್ ಕುಮಾರ್‌,  ಅಭಯ್ ಪಾಟೀಲ್, ರಾಜಕುಮಾರ್‌ ಪಾಟೀಲ್ ತೇಲ್ಕೂರು, ಎನ್‌. ಮಹೇಶ್, ಪಿ. ರಾಜೀವ್, ಕೆ.ಎಸ್‌ ನವೀನ್, ಸಮೀರ್‌ ಕಾಗಲ್ಕರ್, ಡಾ. ಪ್ರಕಾಶ್, ರವೀಂದ್ರ ಪೈ, ವಿಶ್ವನಾಥ್ ಭಟ್ ಹಾಗೂ  ಮಾಳವಿಕಾ ಅವಿನಾಶ್ ಅವರನ್ನು ನೇಮಿಸಲಾಗಿದೆ. 


ಇದನ್ನೂ ಓದಿ : Karnataka Joint Session 2023 : ಬಜೆಟ್ ಅಧಿವೇಶನಕ್ಕೆ ಶಾಸಕರ ಗೈರು ಸಾಧ್ಯತೆ..!


ರಥ ಯಾತ್ರೆ ಶುರುವಾಗುವ ಸ್ಥಳಗಳು


- ಬೆಂಗಳೂರಿನ ಕೆಂಪೇಗೌಡ ಪ್ರತಿಮೆಯಿಂದ ರಥಯಾತ್ರೆ ಆರಂಭ.


- ಚಾಮರಾಜನಗರದ  ಮಲೈ ಮಹದೇಶ್ವರ ಬೆಟ್ಟದಿಂದ ರಥಯಾತ್ರೆ ಆರಂಭ.


- ಬೆಳಗಾವಿ ಬೈಲಹೊಂಗಲದ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ರಥಯಾತ್ರೆ ಆರಂಭ.


- ಬೀದರ್ ನ ಬಸವ ಕಲ್ಯಾಣದ ಅನುಭವದ ಮಂಟಪದಿಂದ ರಥಯಾತ್ರೆ ಆರಂಭ.


- ಫೆಬ್ರವರಿ ಕೊನೆಯ ವಾರದಲ್ಲಿ ‌ವಿಜಯ ಸಂಕಲ್ಪ ರಥಯಾತ್ರೆಗಳ ಆರಂಭ.


- ನಾಲ್ಕು ಭಾಗಗಳಿಂದ ಶುರುವಾಗುವ ರಥಯಾತ್ರೆಗಳು ದಾವಣಗೆರೆಯಲ್ಲಿ ವಿಲೀನ.


- ದಾವಣಗೆರೆಯಲ್ಲಿ ನಾಲ್ಕೂ ರಥಯಾತ್ರೆಗಳ ಬೃಹತ್ ಸಮಾರೋಪ ಸಮಾವೇಶ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.