ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (Chief Minister B.S. Yediyurappa) ಅವರ ಸರ್ಕಾರ ಕರ್ನಾಟಕ‌ ರಾಜ್ಯದಲ್ಲಿ ಬಂದಿದ್ದೆ ಅನೈತಿಕ ಮಾರ್ಗದಿಂದ. ಅದಾದ ಮೇಲೆ ರಾಜ್ಯ ಬಿಜೆಪಿ ಸರ್ಕಾರ ಅನೈತಿಕತೆಯ ಆಗರವಾಗಿದೆ. ಆದುದರಿಂದ ಇಂದಿನ ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಸಭಾತ್ಯಾಗ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former Chief Minister Siddaramaiah) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.


COMMERCIAL BREAK
SCROLL TO CONTINUE READING

ಅದರಂತೆಯೇ ಅತ್ತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (B.S. Yediyurappa) ರಾಜ್ಯದ ಬಜೆಟ್ ಮಂಡಿಸುಸುತ್ತಿದ್ದರೆ ಇತ್ತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರೂ  ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಿದರು.


ಇದನ್ನೂ ಓದಿ - Karnataka Budget 2021- ಸಿಎಂ ಯಡಿಯೂರಪ್ಪ ಅವರಿಂದ 8ನೇ ಬಜೆಟ್, ರಾಜಾಹುಲಿ ಮುಂದಿರುವ ಸವಾಲುಗಳೇನು?


ಇದಕ್ಕೂ ಮೊದಲು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು 'ಅನೈತಿಕ ಸರ್ಕಾರದ ಬಜೆಟ್ ಅನ್ನು ನಾವು ಕೇಳಿಸಿಕೊಳ್ಳುವುದಿಲ್ಲ. ಆದುದರಿಂದ ನಾವು ವಿಧಾನಸಭೆಯಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡುತ್ತೇವೆ. ಇದು ಅನೈತಿಕ ಸರ್ಕಾರದ ವಿರುದ್ಧ ಬಜೆಟ್ ಮಂಡಿಸುವ ಸಂದರ್ಭದಲ್ಲಿ ವಿರೋಧಿಸುತ್ತೇವೆ ಮತ್ತು ಸಭಾತ್ಯಾಗ ಮಾಡುತ್ತೇವೆ ಎಂದು ತಿಳಿಸಿದರು.


ಇದನ್ನೂ ಓದಿ - Karnataka Budget : ಬಿಎಸ್ ವೈ 8 ನೇ ಬಜೇಟ್ ; ಜನ ಮಾನಸದ ನಿರೀಕ್ಷೆಗಳೇನು..?


ನಾವು ಈ ಹಿಂದೆ ಯಾವಾಗಲೂ ಬಜೆಟ್ ಮಂಡನೆ ವೇಳೆ ವಿರೋಧಿಸಿಲ್ಲ. ಆದರೆ ಈ ಬಾರಿ ನಾವು ಪ್ರತಿಭಟಿಸಿ ಸಭಾತ್ಯಾಗ ಮಾಡುತ್ತೇವೆ. ಸರ್ಕಾರದ ಭಾಗವಾಗಿರುವ 6 ಸಚಿವರು ತಮ್ಮ 'ರಾಸಲೀಲೆ'ಯ ಸಿಡಿ ಇರಬಹುದು, ಅದನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದ ಈ ಸರ್ಕಾರದ ಸ್ಥಿತಿ ಎಂತಹುದು ಎಂಬುದು ಅರ್ಥ ಆಗುತ್ತದೆ. ಆದುದರಿಂದ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.