ಬೆಂಗಳೂರು: ಸಾಮಾನ್ಯವಾಗಿ ಬಜೆಟ್‌ ಮಂಡನೆ ಬಳಿಕ ಶ್ರೀಸಾಮಾನ್ಯರು ಕುತೂಹಲದಿಂದ ನೋಡುವುದೆಂದರೆ ಯಾವುದು ಏರಿಕೆಯಾಗಿದೆ, ಯಾವುದು ಇಳಿಕೆಯಾಗಿದೆ ಎಂದು.


COMMERCIAL BREAK
SCROLL TO CONTINUE READING

ಆದರೆ ಈ ಬಾರಿಯ ಬಜೆಟ್‌(Budget)ನಲ್ಲಿ ಅಂಥಹ ಬದಲಾವಣೆಗಳನ್ನೇನೂ ಮಾಡಿಲ್ಲ. ಹಾಗಾಗಿ ಏರಿಕೆ, ಇಳಿಕೆಯ ಸಂಖ್ಯೆ ಕಡಿಮೆ ಇದ್ದು, ಹೆಚ್ಚಿನ ವಸ್ತುಗಳ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.


'ಮುಂದಿನ ಬಾರಿಯೂ ಸಿದ್ದರಾಮಯ್ಯನನ್ನು ಪತಿಪಕ್ಷದಲ್ಲೇ ಕೂರಿಸದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ'


ಏರಿಕೆ: ಯಾವುದೂ ಇಲ್ಲ. ಸರ್ಕಾರ ಸಾಮಾನ್ಯವಾಗಿ ಸಿಗರೇಟ್‌, ಮದ್ಯದ ಮೇಲಿನ ತೆರಿಗೆ(Tax) ಏರಿಕೆ ಮಾಡುವುದು ರೂಢಿ. ಆದರೆ ಈ ಬಾರಿ ಅವುಗಳ ಮೇಲಿನ ತೆರಿಗೆಯನ್ನೂ ಏರಿಕೆ ಮಾಡಿಲ್ಲ.


G Parameshwara: 'ಕರ್ನಾಟಕ ಇತಿಹಾಸದಲ್ಲೇ ಇದು ಕೆಟ್ಟ ಬಜೆಟ್'


ಇಳಿಕೆ: ಅಪಾರ್ಟ್‌ಮೆಂಟ್‌ 35-45 ಲಕ್ಷ ರೂ. ವರೆಗಿನ ಅಪಾರ್ಟ್‌ಮೆಂಟ್‌ಗಳ ಮೊದಲನೇ ನೋಂದಣಿಯ ಮುದ್ರಾಂಕ ಶುಲ್ಕ(Stamp Fee)ವನ್ನು ಶೇ. 5 ರಿಂದ ಶೇ. 3ಕ್ಕೆ ಸರ್ಕಾರ ಇಳಿಕೆ ಮಾಡಿದೆ. ಇದರಿಂದ ಅಪಾರ್ಟ್‌ಮೆಂಟ್‌ಗಳ ದರ ಇಳಿಕೆಯಾಗದಿದ್ದರೂ, ಖರೀದಿ ದರ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಮಧ್ಯಮ ವರ್ಗದವರಿಗೆ ಇದರಿಂದ ಹೆಚ್ಚಿನ ಲಾಭವಾಗಲಿದೆ.


Karnataka Budget 2021: ಕೃಷಿ, ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಉತ್ತೇಜನ ನೀಡಿದ ಬಜೆಟ್


ಯಥಾಸ್ಥಿತಿ: ಪೆಟ್ರೋಲ್‌, ಡೀಸೆಲ್‌ - ಪೆಟ್ರೋಲ್‌ ಹಾಗೂ ಡೀಸೆಲ್‌(Diesel Petrol Price) ಮೇಲೆ ವಿಧಿಸುವ ಕರ್ನಾಟಕ ಮಾರಾಟ ತೆರಿಗೆ(Sale)ಯಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಸರಕಾರ ನಿರ್ಧರಿಸಿದೆ. ಹೀಗಾಗಿ ದರದಲ್ಲಿ ಯಾವುದೇ ಬದಲಾವಣೆಯಾಗುತ್ತಿಲ್ಲ.


-ಮದ್ಯ


-ಸಿಗರೇಟ್‌, ಗುಟ್ಕಾ, ತಂಬಾಕು ಉತ್ಪನ್ನಗಳು


Karnataka Budget 2021 :ಸಿದ್ದರಾಮಯ್ಯ ಕ್ಷೇತ್ರಕ್ಕೆ ಭರ್ಜರಿ ಅನುದಾನ ನೀಡಿದ ಸಿಎಂ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.