Karnataka Budget 2023 : ಸಿಎಂ ಸಿದ್ದು ಬಜೆಟ್ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು ?
Karnataka budget 2023 : 2023-24ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಿಕ್ಕಿರುವ ಅನುದಾನ ಎಷ್ಟು ?
Karnataka budget 2023 : ಸಿಎಂ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ನಲ್ಲಿ ರಾಜ್ಯ ರಾಜಧಾನಿಗೆ ನೀಡಿರುವ ಕೊಡುಗೆಗೆಳು ಏನು? ಸಿಎಂ ಘೋಷಿಸಿದ ಹೊಸ ಯೋಜನೆಗಳು ಯಾವುವು ಎನ್ನುವುದರ ವಿವರವಾದ ಮಾಹಿತಿ ಇಲ್ಲಿದೆ.
ರಾಜ್ಯ ರಾಜಧಾನಿಗೆ ಸಿದ್ದು ಬಜೆಟ್ ನಲ್ಲಿ ಸಿಕ್ಕಿದೆಷ್ಟು :
• ಬೈಯಪ್ಪನಹಳ್ಳಿ ಸರ್ ಎಂವಿ ರೈಲ್ವೇ ಟರ್ಮಿನಲ್ ಗೆ ಸಂಪರ್ಕ ಕಲ್ಪಿಸಲು ಹೊಸ ಮೇಲ್ಸೇತುವೆ. ಮೆಟ್ರೋದಿಂದ ಟರ್ಮಿನಲ್ ಗೆ ಸಂಪರ್ಕ ಕಲ್ಪಿಸುವಂತೆ ಫ್ಲೈ ಓವರ್. ಇದಕ್ಕೆ 263 ಕೋಟಿ ನಿಗದಿ.
• ನಗರದಲ್ಲಿ ಹೊಸದಾಗಿ 1,411 ಕೋಟಿಯ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ
• 2023 - 24ನೇ ಸಾಲಿನಲ್ಲಿ ನಗರದಲ್ಲಿ 800 ಕೋಟಿ ವೆಚ್ಚದಲ್ಲಿ ಹೊಸ 100 km ವೈಟ್ ಟಾಪಿಂಗ್ ರಸ್ತೆ ನಿರ್ಮಾಣ
• 2023-24ರಲ್ಲಿ ಈಗಾಗಲೇ ಹೈಡೆನ್ಸೆಟಿ ಕಾರಿಡಾರ್ ಗಳಾಗಿ ಗುರುತಿಸಿರುವ 83km ರಸ್ತೆಗಳ ಅಭಿವೃದ್ಧಿಗೆ 273 ಕೋಟಿ ರೂ. ಮೀಸಲು
ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಿಎಂ ಸಿದ್ದು ಸರ್ಕಾರದ ಕೊಡುಗೆಗಳಿವು
• ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಜಾಗವನ್ನು 256 ಉದ್ಯಾನವನವಾಗಿ ಪರಿವರ್ತನೆ
• ಮುಂದಿನ ಮೂರು ವರ್ಷಗಳಲ್ಲಿ 70 km ಇರುವ ಮೆಟ್ರೋವನ್ನು 176 kmಗೆ ವಿಸ್ತರಣೆ
• ಹೆಬ್ಬಾಳದಿಂದ ಸರ್ಜಾಪುರ ವರೆಗಿನ 37km ಉದ್ದದ ಮೆಟ್ರೋ ಯೋಜನೆಯನ್ನು, 15 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸಲುವಾಗ ಕೇಂದ್ರ ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಕೆ
• ಬೆಂಗಳೂರು ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದಲೇ ಸಾವಿರ ಕೋಟಿ ಅನುದಾನ
• ನಗರದ ಕೆರೆಗಳ ತ್ಯಾಜ್ಯ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ 1,250 ಕೋಟಿ ವೆಚ್ಚದಲ್ಲಿ ಕಾಮಗಾರಿ
• ಇಂದಿರಾ ಕ್ಯಾಂಟೀನ್ ಗಳ ನವೀಕರಣ, ದುರಸ್ತಿ, ಕೆಲ ಹೊಸ ಕ್ಯಾಂಟೀನ್ ನಿರ್ಮಾಣಕ್ಕಾಗಿ 100 ಕೋಟಿ
• BSWMCL ಸಂಸ್ಥೆಗೆ ಘನ ತ್ಯಾಜ್ಯ ಸಂಸ್ಕರಣೆ ಹಾಗೂ ನಿರ್ವಹಣೆಗೆ 100 ಕೋಟಿ ಅನುದಾನ
ಇದನ್ನೂ ಓದಿ : Karnataka Budget 2023 : ಸಿದ್ದರಾಮಯ್ಯ ಬಜೆಟ್ ನಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಭರ್ಜರಿ ಕೊಡುಗೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=38l6m8543Vk
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.