ಬೆಂಗಳೂರು: ಸಿಎಂ ಬೊಮ್ಮಾಯಿ ಸರ್ಕಾರದ ಕೊನೆ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. 10:15ರ ಶುಭ ಲಗ್ನದಲ್ಲಿ ಸಿಎಂ ಲೆಕ್ಕ ಬೋಧನೆ ಮಾಡಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ಕೊನೆಯ ಬಜೆಟ್ ಇದಾಗಿರುವುದರಿಂದ ರಾಜ್ಯ ಬಜೆಟ್ ಮೇಲೆ ಎಲ್ಲರಿಗೂ ಸಾಕಷ್ಟು ನಿರೀಕ್ಷೆಗಳಿವೆ. ಚುನಾವಣಾ ಹೊಸ್ತಿಲಲ್ಲಿ ಮಂಡನೆಯಾಗುತ್ತಿರುವ ಬಜೆಟ್ ಇದಾಗಿರುವುದರಿಂದ ಬಿಜೆಪಿಗೆ ಬೂಸ್ಟರ್‌ ಡೋಸ್‌ ನೀಡ್ತಾರಾ ಕಾಮನ್‌ಮ್ಯಾನ್‌ ಎಂಬ ಕುತೂಹಲವೂ ಹೆಚ್ಚಿದೆ. 


COMMERCIAL BREAK
SCROLL TO CONTINUE READING

ಕಳೆದ ಬಾರಿ  2ಲಕ್ಷ 65ಸಾವಿರ ಕೋಟಿ ಮೌಲ್ಯದ ಬಜೆಟ್ ಮಂಡಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ 3 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆಗೆ ತಯಾರಿ ನಡೆಸಿದ್ದಾರೆ. ಈ ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಎಲ್ಲಾ ವರ್ಗಕ್ಕೂ ಶಿವರಾತ್ರಿ ಸಿಹಿ ನೀಡಲಿದ್ದು ಕಾಂಗ್ರೆಸ್‌ ಫ್ರೀ ಪಾಲಿಟಿಕ್ಸ್‌ಗೂ ಚೆಕ್‌ಮೇಟ್ ನೀಡಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. 


ಇದನ್ನೂ ಓದಿ- Karnataka Budget 2023: ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಬಂಪರ್‌.. ಗೌರವಧನ ಹೆಚ್ಚಳದ ಭರವಸೆ.!!


ಬೊಮ್ಮಾಯಿ ಸರ್ಕಾರದ ಕೊನೆ ಬಜೆಟ್‌ ನಿರೀಕ್ಷೆಗಳೇನು?
* ಕಾಂಗ್ರೆಸ್‌ನ ಗೃಹಲಕ್ಷ್ಮೀ ಯೋಜನೆ ಪ್ರತಿಯಾಗಿ ಗೃಹಿಣಿಯರಿಗೆ 1500 ರೂ. ನೀಡುವ ಸಾಧ್ಯತೆ 
* ಸ್ವಸಹಾಯ ಸಂಘಗಳ ಬಡ್ಡಿ ಅಥವಾ ಸಾಲಮನ್ನಾ ಸಾಧ್ಯತೆ
* ಕೃಷಿಯಲ್ಲಿ ಬೆಳೆಗೆ ಖರ್ಚಿಗೆ ತಕ್ಕಂತೆ ಬೆಳೆ ವೆಚ್ಚ ನಿಗದಿ
* ರೈತರಿಗೆ ಶೂನ್ಯ ಬಡ್ಡಿ ದರ ಸಾಲ 3 ರಿಂದ 5 ಲಕ್ಷಕ್ಕೆ ಏರಿಕೆ
* ಕೃಷಿ ಸಾಲ 10 ಲಕ್ಷದಿಂದ 20 ಲಕ್ಷಕ್ಕೆ ಏರಿಸುವ ನಿರೀಕ್ಷೆ
* ಅಡಿಕೆ ರೋಗಕ್ಕೆ ವಿಶೇಷ ಕೊಡುಗೆಗಳ ಘೋಷಣೆ ಸಾಧ್ಯತೆ
* ದಲಿತ ಸಮುದಾಯಕ್ಕೆ 75 ಯೂನಿಟ್‌ ಉಚಿತ ವಿದ್ಯುತ್‌ 200ಕ್ಕೆ ಏರಿಕೆ
* 7ನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗೆ ಕ್ರಮ 
* ಬೆಂಗಳೂರು ಟ್ರಾಫಿಕ್‌ ನಿಯಂತ್ರಣಕ್ಕೆ ವಿಶೇಷ ಯೋಜನೆ
* ಮೆಟ್ರೋ 4ನೇ ಹಂತದ ಮಾರ್ಗಗಳ ಘೋಷಣೆ ಸಾಧ್ಯತೆ 
* ಮೆಟ್ರೋ 4ನೇ ಹಂತದಲ್ಲಿ ಬಿಡದಿ ಮತ್ತು ಮಾಗಡಿ
* ನೆಲಮಂಗಲ, ಹೋಸಕೋಟೆಗೆ ಮಾರ್ಗ ವಿಸ್ತರಣೆ ಸಾಧ್ಯತೆ
* ಮಠಮಾನ್ಯಗಳಿಗೆ ಅನುದಾನ ನೀಡಿ ಸಮುದಾಯಗಳ ಓಲೈಕೆ


ಇದನ್ನೂ ಓದಿ- ನಾನು ಸದಾ ರಿಲವೆಂಟ್ ರಾಜಕಾರಣಿ:ಸದನದಲ್ಲಿ ಸಿದ್ದು ಗುಡುಗು!


ಬಜೆಟ್‌ನಲ್ಲಿ ವಿವಿಧ ವಲಯಗಳಿಗೆ ಮೀಸಲಿಟ್ಟ ಹಣದ ವಿವರ:-
>> ಕೃಷಿ ಮತ್ತು ಪೂರಕ ಚಟುವಟಿಕೆಗಳು-  4,0000 ಕೋಟಿ ರೂ.
>> ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ - 7,5000 ಕೋಟಿ ರೂ.
>> ಆರ್ಥಿಕ ಅಭಿವೃದ್ಧಿಗೆ ಉತ್ತೇಜನ - 6,0000 ಕೋಟಿ ರೂ.
>> ಬೆಂಗಳೂರು ಸಮಗ್ರ ಅಭಿವೃದ್ಧಿಗೆ - 1,0000 ಕೋಟಿ ರೂ.
>> ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ  - 400 ಕೋಟಿ ರೂ.
>> ಆಡಳಿತ ಸುಧಾರಣೆ, ಸಾರ್ವಜನಿಕ ಸೇವೆಗೆ - 65,000 ಕೋಟಿ ರೂ.
>> ಮಹಿಳೆಯರ ಸಬಲೀಕರಣ, ಕ್ಷೇಮಾಭಿವೃದ್ಧಿಗೆ-  50,000 ಕೋಟಿರೂ.
>> Sc/ST ಅಭಿವೃದ್ದಿ ಇಲಾಖೆಗೆ - 35,000 ಕೋಟಿ ರೂ.
>> ಆರೋಗ್ಯ, ಶಿಕ್ಷಣ  ಮತ್ತು ಇತರ ಕಲ್ಯಾಣಕ್ಕೆ-10,000 ಕೋಟಿ ರೂ.


ಬೊಮ್ಮಾಯಿ ಸರ್ಕಾರದಿಂದ ಹೊಸ ಯೋಜನೆಗಳು:
* ಅನ್ನಭಾಗ್ಯ, ಕ್ಷೀರಭಾಗ್ಯಗಳಿಗೆ ಹೆಚ್ಚಿನ ಅನುದಾನ ಸಾಧ್ಯತೆ
* ಗಾಣಿಗ, ಮಡಿವಾಳ, ನೇಕಾರ, ಕುಂಬಾರ ಪ್ರತ್ಯೇಕ ನಿಗಮ
* ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ಅನುದಾನ ಸಾಧ್ಯತೆಯಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.