17 ಕೆರೆಗಳಿಗೆ ನೀರು ತುಂಬಿಸಿದ್ದೀರಿ, ಸರಿಯಪ್ಪಾ.. ಡ್ಯಾಂ ಕಟ್ಟಿಸಿದವರು ಯಾರು.? : ಕೈ ಅಭ್ಯರ್ಥಿಗೆ ಮಾಜಿ ಪ್ರಧಾನಿ ತಿರುಗೇಟು..
ನಾನು ಮುಖ್ಯಮಂತ್ರಿ ಆಗಿದ್ದಾಗ ಎಂಜಿನಿಯರ್ ಗಳನ್ನು ಕರೆತಂದೆ. ಆಗ ₹150 ಕೋಟಿ ಬಿಡುಗಡೆ ಮಾಡಿದೆ. ತೆಪ್ಪದಲ್ಲಿ ಹೋಗಿ ಅಣೆಕಟ್ಟೆಯನ್ನು ಉದ್ಘಾಟನೆ ಮಾಡಿದ್ದೆ. ಅದನ್ನೆಲ್ಲವನ್ನು ತಾಲೂಕಿನ ಜನರು, ಎಂಜಿನಿಯರುಗಳು ಪ್ರತ್ಯಕ್ಷವಾಗಿ ನೋಡಿದ್ದಾರೆ. ಆಗಲೇ ನಾನು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಸಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು..
ಚನ್ನಪಟ್ಟಣ/ರಾಮನಗರ: ಹದಿನೇಳು ಕೆರೆಗಳಿಗೆ ನೀರು ತುಂಬಿಸಿದ್ದೇನೆ ಎಂದು ಆ ವ್ಯಕ್ತಿ ಹೇಳುತ್ತಾರೆ. ಆದರೆ, ನೀರು ತುಂಬಿಸಲು ಮೂಲ ಕಾರಣವಾದ ಇಗ್ಗಲೂರು ಅಣೆಕಟ್ಟು ಕಟ್ಟಿಸಿದವರು ಯಾರಪ್ಪಾ? ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ ಅಭ್ಯರ್ಥಿಯನ್ನು ನೇರವಾಗಿ ಪ್ರಶ್ನೆ ಮಾಡಿದ್ದಾರೆ.
ತಿಟ್ಟಮಾರನಹಳ್ಳಿ, ಮಾಕಳಿ, ನಾಗವಾರ, ಬೇವೂರು ಪ್ರದೇಶಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದ ಅವರು, ಸಿ.ಪಿ.ಯೋಗೇಶ್ವರ್ ವಿರುದ್ಧ ಕಿಡಿಕಾರಿದರು ಅವರು. ಯೋಗೇಶ್ವರ್ ಅವರು ನಾನು ಭಗೀರಥ ಎಂದು ಹೇಳಿಕೊಂಡು ಎರಡು ಚುನಾವಣೆ ಮಾಡಿದರು? ನಾನು ಮುಖ್ಯಮಂತ್ರಿ ಆಗಿದ್ದಾಗ ಎಂಜಿನಿಯರ್ ಗಳನ್ನು ಕರೆತಂದೆ. ಆಗ ₹150 ಕೋಟಿ ಬಿಡುಗಡೆ ಮಾಡಿದೆ. ತೆಪ್ಪದಲ್ಲಿ ಹೋಗಿ ಅಣೆಕಟ್ಟೆಯನ್ನು ಉದ್ಘಾಟನೆ ಮಾಡಿದ್ದೆ. ಅದನ್ನೆಲ್ಲವನ್ನು ತಾಲೂಕಿನ ಜನರು, ಎಂಜಿನಿಯರುಗಳು ಪ್ರತ್ಯಕ್ಷವಾಗಿ ನೋಡಿದ್ದಾರೆ. ಆಗಲೇ ನಾನು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಸಿದೆ. ನನ್ನ ಬದ್ಧತೆ, ಚನ್ನಪಟ್ಟಣ, ರಾಮನಗರ ಜನರ ಉದ್ಧಾರಕ್ಕಾಗಿ ಇಗ್ಗಲೂರು ಜಲಾಶಯ ಕಟ್ಟಿಸಿದೆ. ಆಮೇಲೆ ಸದಾನಂದಗೌಡರು ಸಿಎಂ ಆಗಿದ್ದಾಗ ಹದಿನೇಳು ಕೆರೆಗಳಿಗೆ ನೀರು ತುಂಬಿಸಲು ಹಣ ಕೊಟ್ಟರು. ಅದು ಬಿಜೆಪಿ ಸರ್ಕಾರ, ಯೋಗೇಶ್ವರ್ ಮಾಡಿದ್ದು ಏನೂ ಇಲ್ಲ. ಹಾಗಾದರೆ ಈ ಯೋಗೇಶ್ವರ್ ಯಾಕೆ ಕಾಂಗ್ರೆಸ್ ಸರ್ಕಾರದಿಂದ ಈ ಕೆಲಸ ಮಾಡಿಸಲಿಲ್ಲ? ಎಂದು ಮಾಜಿ ಪ್ರಧಾನಿಗಳು ಪ್ರಶ್ನಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ ಮತ್ತೊಮ್ಮೆ ನರಗುಂದ ಮಾದರಿ ರೈತ ಬಂಡಾಯ ಆಗಲಿದೆ: ಬಸವರಾಜ ಬೊಮ್ಮಾಯಿ
ಅವರು ಕೇವಲ ಬಾಯಿ ಮಾತಿನಲ್ಲಿ ಮಾತ್ರ ಭಗೀರಥ. ಕೃತಿಯಲ್ಲಿ ಅಲ್ಲ. ನಾನು ಸದಾನಂದ ಗೌಡ ಕೃತಿಯಲ್ಲಿ ಮಾಡಿ ತೋರಿಸಿದ್ದೇವೆ. ಸುಳ್ಳು ಹೇಳಿಕೊಂಡು ತಿರುಗಾಡಬಾರದು. ಅವರಿಗೆ ಎಲ್ಲಾ ಪಕ್ಷಗಳು ಆಗಿ ಹೋಗಿವೆ ಎಂದು ಮಾಜಿ ಪ್ರಧಾನಿಗಳು ಗುಡುಗಿದರು.
ಚನ್ನಪಟ್ಟಣಕ್ಕೆ ಕುಡಿಯುವ ನೀರನ್ನು ಯಾರು ಕೊಟ್ಟಿದ್ದು? ಚನ್ನಪಟ್ಟಣ, ರಾಮನಗರಕ್ಕೆ ಕೆರೆಕಾಡನಹಳ್ಳಿಯಲ್ಲಿ ಬೆಂಗಳೂರಿಗೆ ಪಂಪ್ ಮಾಡುವ ನೀರನ್ನು ನಿಮಗೆ ಕೊಟ್ಟಿದ್ದೇನೆ. ನೀರು ಕೊಟ್ಟಿರುವ ವ್ಯಕ್ತಿ ನಾನು ನಿಮ್ಮಮುಂದೆ ಜೀವಂತವಾಗಿ ಇದ್ದೇನೆ. ಒಬ್ಬ ಸಾಮಾನ್ಯ ರೈತನ ಮಗ ಏನೇನು ಮಾಡಿದ್ದಾನೆ ಅಂತಾ ಒಂದು ಪುಸ್ತಕ ಮಾಡಿದ್ದಾರೆ, ಅದನ್ನು ಓದಿ ಎಂದು ಅವರು ಮನವಿ ಮಾಡಿದರು.
ಇದನ್ನೂ ಓದಿ:ಆಸ್ತಿ ಕಬಳಿಸುವುದು ವಕ್ಫ್ ಬೋರ್ಡ್‌ನ ಒಂದು ದಂಧೆ: ಪ್ರತಿಪಕ್ಷ ನಾಯಕ ಆರ್.ಅಶೋಕ
ಎರಡು ರೂಪಾಯಿ ಬೆಲೆಯಲ್ಲಿ ಕೆಜಿ ಅಕ್ಕಿ ಕೊಟ್ಟವನು ನಾನು : ಐದು ಗ್ಯಾರಂಟಿ ಅಂತೆ. ಇದರಲ್ಲಿ ಒಂದು ಗ್ಯಾರಂಟಿಗೆ ತೊಂದರೆ ಇದೆ ಅಂತಾ ಒಬ್ಬ ಹೇಳ್ತಾನೆ. ಮೋದಿ ಅವರು ಪ್ರತಿ ವರ್ಷ ರೈತರ ಖಾತೆಗೆ ಹಣ ಜಮೆ ಮಾಡ್ತಾರೆ. ಎರಡು ರೂಪಾಯಿ ಅಕ್ಕಿ ಮೂರು ರೂಪಾಯಿಗೆ ಗೋದಿ ಸಕ್ಕರೆ ಕೊಟ್ಟ ವ್ಯಕ್ತಿ ನಿಮ್ಮಮುಂದೆ ಕೂತಿದ್ದೇನೆ. ಅನೇಕರು ಚಿಕ್ಕ ಹುಡುಗರು ಪುಸ್ತಕ ಓದಬೇಕು. ಈ ಗೌಡ ಏನು ಮಾಡಿದ್ದಾನೆ ಗೊತ್ತಾಗುತ್ತೆ. ಅಲಮಟ್ಟಿ ಸೇರಿ ಏಳು ಅಣೆಕಟ್ಟು ಕಟ್ಟಿದ್ದೇನೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಇವತ್ತು ಕಾಂಗ್ರೆಸ್ ಪಕ್ಷವನ್ನು ದೇಶದಿಂದ ಕಿತ್ತೆಸೇತುವ ಕೆಲಸ ಆಗಬೇಕು. ಆ ಪಕ್ಷದಿಂದ ದೇಶಕ್ಕೆ ಒಳ್ಳೆಯದಾಗಿಲ್ಲ. ಕಾಂಗ್ರೆಸ್ ಶಾಸಕರು ಲೂಟಿ ಮಾಡಿ ಜೈಲು ಸೇರುತ್ತಿದ್ದಾರೆ. ಇದನ್ನೆಲ್ಲ ಮಾತನಾಡಲು ಯಾರು ಬೇಕು? ಇವಕ್ಕೆ ಕಡಿವಾಣ ಹಾಕಲು ಯುವಕರನ್ನು ಸೃಷ್ಟಿ ಮಾಡಬೇಕು. ಈಗಾಗಿ ನಿಖಿಲ್ ಕುಮಾರಸ್ವಾಮಿ ಅಂತಾ ಅಭ್ಯರ್ಥಿ ಬೇಕು ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ