ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತುಗೆ ಆಘಾತ !! ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ಭರ್ಜರಿ ಗೆಲುವು..!
Karnataka by poll elections 2024: ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾವಿ ಸೇರಿದಂತೆ ಕರ್ನಾಟಕದ ಮೂರು ಭಾಗಗಳಲ್ಲಿ ಉಪ ಚುಣಾವಣೆ ನಡೆದಿದತ್ತು, ಇಂದು ಈ ಮೂರು ಕ್ಷೇತ್ರಗಳ ಚುಣಾವಣೆಯ ಮತ ಎಣಿಕೆ ಶುರುವಾಗಿದ್ದು, ಸಂಡೂರಿನ ಫಲಿತಾಂಶ ಹೊರಬಿದ್ದಿದೆ.
Karnataka by poll elections 2024: ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾವಿ ಸೇರಿದಂತೆ ಕರ್ನಾಟಕದ ಮೂರು ಭಾಗಗಳಲ್ಲಿ ಉಪ ಚುಣಾವಣೆ ನಡೆದಿದತ್ತು, ಇಂದು ಈ ಮೂರು ಕ್ಷೇತ್ರಗಳ ಚುಣಾವಣೆಯ ಮತ ಎಣಿಕೆ ಶುರುವಾಗಿದ್ದು, ಸಂಡೂರಿನ ಫಲಿತಾಂಶ ಹೊರಬಿದ್ದಿದೆ.
ಇಂದು ಬೆಳಗ್ಗೆ 8 ಗಂಟೆಗೆ ಸಂಡೂರಿನಲ್ಲಿ ಮತ ಎಣಿಕೆ ಕಾರ್ಯ ಶುರುವಾಗಿತ್ತು, ರಾಜಕೀಯ ನಾಯಕರು ಹಾಗೂ ಪೋಲಿಸ್ ಅಧಿಅಕರಿಗಳ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿತ್ತು. ಬಳ್ಳಾರಿಯ ಸಂಡೂರು ಉಪಚುಣಾವಣೆಯ ಮತ ಎಣಿಕೆ ಕಾರ್ಯವನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಾಡಲಾಗಿತ್ತು. ಬೆಳಗ್ಗೆ 7:30 ಕ್ಕೆ ಜಿಲ್ಲೆಯ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಅವರ ನೇತೃತ್ವದಲ್ಲಿ ಸ್ಟ್ರಾಂಗ್ ರೂಂ ಅನ್ನು ತೆರುವುದ ಗೊಳಿಸಲಾಗಿತ್ತು.
ಮತ ಎಣಿಕೆ ಶುರುವಾಗುವ ಮುಂಚೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು ಸ್ಪರ್ಧೆ ಮಾಡಿದ್ದರು, ಇವರೆ ಈ ಭಾರಿ ಸಂಡೂರು ಕ್ಷೇತ್ರದಲ್ಲಿ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಕಾರ್ಯಕರ್ತರು ವೈಟ್ ಮಾಡುತ್ತಿದ್ದರು, ಆದರೆ ಮತ ಎಣಿಕೆ ಶುರುವಾಗುತ್ತಿದ್ದಂತೆ ಫಲಿತಾಂಶದ ಮೇಲಿನ ನಿರೀಕ್ಷೆಗಳು ತಲೆಕೆಳಗಾಗಿದ್ದವು.
ಬಿಜೆಪಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು ಅವರು ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಸೋಲನ್ನು ಅಣುಭವಿಸಿದ್ದಾರೆ. ಅನ್ನಪೂರ್ಣ ತುಕಾರಾಂ ಅವರು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಪಕ್ಷದ ಅನ್ನಪೂರ್ನ ತುಕಾರಾಂ ಅವರು 9105 ಮತಗಳ ಮುನ್ನಡೆಯ ಮೂಲಕ ಬಿಜೆಪಿ ಅಭ್ಯರ್ಥಿ ಹನುಮಂತು ಪರಾಜಯ ವಿರುದ್ಧ ಗೆಲುವನ್ನು ಸಾಧಿಸಿದ್ದಾರೆ.
ಅನ್ನಪೂರ್ಣ ತುಕಾರಾಂ ಒಟ್ಟು 88727 ಮತಗಳನ್ನು ಸಾಧಿಸಿದ್ದರೆ, ಬಿಜೆಪಿ ಅಭ್ಯರ್ಥಿ 79622 ಮತಗಳನ್ನು ಸಾಧಿಸಿದ್ದಾರೆ, ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ 9105 ಮತಗಳ ಮುನ್ನಡೆ ಕಾಯ್ದುಕೊಂಡು ಗೆಲುವನ್ನು ಸಾಧಿಸಿದ್ದಾರೆ.