ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಿಕ್ಕಟ್ಟು ಸದ್ಯ ಹಾಗೇ ಮುಂದುವರಿದಿದೆ. ಎಲ್ಲಾ  ಅಂದುಕೊಂಡ ಹಾಗೇ ನಡೆದಿದ್ರೆ, ಗ್ರಾಮ ಪಂಚಾಯತ್ ಚುನಾವಣೆ (Gramapanchayath Election) ಮುಗಿದ ಕೂಡಲೇ ಸಂಪುಟ ವಿಸ್ತರಣೆ ನಡೆಯಬೇಕಿತ್ತು. ಆದರೆ, ಸಂಪುಟ ವಿಸ್ತರಣೆಗೆ ಇನ್ನೂ ಮುಹೂರ್ತ ಫಿಕ್ಸ್ ಆಗಿಲ್ಲ. 


COMMERCIAL BREAK
SCROLL TO CONTINUE READING

ಸಂಪುಟ ವಿಸ್ತರಣೆ ಪ್ಲಾನ್ ಏನು..?


ಆದರೆ,  ಮೂಲಗಳ ಪ್ರಕಾರ ಜನವರಿ 9-10 ರಿಂದ  ಸಂಪುಟ ವಿಸ್ತರಣೆ (Cabinet Expansion) ಕಸರತ್ತು ಶುರುವಾಗಲಿದೆ. ಜನವರಿ 9 ರಿಂದ ಸಂಪುಟ ವಿಸ್ತರಣೆಗೆ ರೂಪುರೇಷೆಗೆ ಸಿದ್ಧಪಡಿಸಲು ಪ್ಲಾನ್ ಮಾಡಲಾಗಿದೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬುದನ್ನು ಜನವರಿ  9 ರ ಬಳಿಕ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ. 


 


ALSO READ: Govt Employees: ಸರ್ಕಾರಿ ನೌಕರರಿಗೆ 'ಬಿಗ್ ಶಾಕ್' ನೀಡಿದ ಬಿಎಸ್ ವೈ ಸರ್ಕಾರ..!



ವಿಸ್ತರಣೆ ಸಂಕ್ರಾಂತಿಗೋ ಅಥವಾ ಸಂಕ್ರಾಂತಿ ನಂತರವೋ..?


ಈ ಸಲ ಸಂಕ್ರಾಂತಿಗೆ (Sankranthi) ಸಂಪುಟ ವಿಸ್ತರಣೆಗೆ ನಿರ್ಧರಿಸಿರುವಂತಿದೆ ಬಿಎಸ್ ಯಡಿಯೂರಪ್ಪ  (B S  Yadiyurappa).  ಸಿಎಂ ಬಿಎಸ್‌ವೈ ಅರುಣ್ ಸಿಂಗ್ (Arun Singh) ಜೊತೆಗಿನ ಸಭೆಯಲ್ಲೂ ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಮಾಡುವುದಾಗಿ   ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ.  ಆದರೆ, ಶಿವಮೊಗ್ಗದಲ್ಲಿ ಶನಿವಾರ ಬಿಜೆಪಿ (BJP) ಕೋರ್‌ ಕಮಿಟಿ ಸಭೆ ನಡೆದಿದೆ.  ಕೋರ್ ಕಮಿಟಿ (Core Committee) ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.  ಹಾಗಾಗಿ ಸಂಪುಟ ವಿಸ್ತರಣೆ ಸಂಕ್ರಾಂತಿಗೋ ಅಥವಾ ಸಂಕ್ರಾಂತಿ ನಂತರವೋ ಎಂಬ ಗೊಂದಲವೂ ಸೃಷ್ಟಿಯಾಗಿದೆ.


“ಸಂಜೆಯೇ ನಾನು ಮಂತ್ರಿಯಾಗಬಹುದು ಹೇಳಕ್ಕಾಗಲ್ಲ..!”


ಮಂಗಳವಾರ ಯಡಿಯೂರಪ್ಪ ಭೇಟಿ ಮಾಡಿ ಮಾತಾಡಿದ ಎಂಎಲ್ ಸಿ ಆರ್ ಶಂಕರ್, (R Shankar) ಇಂದು ಸಂಜೆಯೇ ನಾನು ಮಂತ್ರಿಯಾಗಬಹುದು, ಹೇಳಕ್ಕಾಗಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.  2-3 ದಿನಗಳಲ್ಲಿ ನೀನು ಮಂತ್ರಿ ಆಗ್ತೀಯ ಎಂದು ಮುಖ್ಯಮಂತ್ರಿ ಹೇಳಿದ್ರು ಎಂದು ಶಂಕರ್ ಹೇಳಿದ್ದಾರೆ. ಸಿಎಂ ಯಾರಯಾರನ್ನ ಮಂತ್ರಿ ಮಾಡ್ತಾರೆ ನೋಡ್ಬೇಕು ಅಂತ ಶಂಕರ್ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ