ನಾಳೆ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಬಹುತೇಕ ಖಚಿತ – ಯಡಿಯೂರಪ್ಪ

ಸಂಕ್ರಾಂತಿ ಹೊತ್ತಿಗೆ ಯಡಿಯೂರಪ್ಪ ಸಂಪುಟಕ್ಕೆ ನೂತನ ಸಚಿವರು ಸೇರಲಿದ್ದಾರೆ.
ಬೆಂಗಳೂರು : ಬಹುನಿರೀಕ್ಷಿತ ರಾಜ್ಯ ಸಂಪುಟ ವಿಸ್ತರಣೆಗ ದಿನಾಂಕ, ಮುಹೂರ್ತ ನಿಗದಿಯಾಗಿದೆ. ಸಂಕ್ರಾಂತಿ ಹೊತ್ತಿಗೆ ಯಡಿಯೂರಪ್ಪ ಸಂಪುಟಕ್ಕೆ ನೂತನ ಸಚಿವರು ಸೇರಲಿದ್ದಾರೆ. ಮಂಗಳವಾರ ಬೆಳಗ್ಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನಾಳೆ (ಬುಧವಾರ) ಸಂಜೆ ನಾಲ್ಕು ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮ ನಡೆಯುವುದು ಬಹುತೇಕ ಖಚಿತವಾಗಿದೆ. ಸಂಪುಟ ಸೇರುವ ಸಚಿವರಿಗೆ ಸಂಜೆಯೊಳಗೆ ಮಾಹಿತಿ ನೀಡಲಾಗುವುದು. ನೂತನ ಸಚಿವರ ಪಟ್ಟಿ ನಾಳೆ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ಅಮವಾಸ್ಯೆ ಮುಗಿದ ಮೇಲೆ ಪದಗ್ರಹಣ :
ಸಾಮಾನ್ಯವಾಗಿ ಅಮವಾಸ್ಯೆ ದಿನ ಬಿಜೆಪಿ (BJP) ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಯಡಿಯೂರಪ್ಪ (Yadiyurappa) ವಿಚಾರದಲ್ಲೂ ಸ್ಪಷ್ಟತೆ ಇಟ್ಟುಕೊಂಡಿದ್ದಾರೆ. ಬುಧವಾರ ಮಧ್ಯಾಹ್ನ ತನಕ ಅಮವಾಸ್ಯೆ ಇರುತ್ತದೆ. ನಾಲ್ಕು ಗಂಟೆಯ ನಂತರ ತುಂಬಾ ಒಳ್ಳೆಯ ಸಮಯ ಇದೆ ಎಂದು ಹೇಳಿದ್ದಾರೆ. ಸಂಪುಟ (Cabinet) ಸೇರುವ ನೂತನ ಸಚಿವರು ಯಾರು ಎನ್ನುವ ಸ್ಪಷ್ಟತೆಯನ್ನು ಯಡಿಯೂರಪ್ಪ ಇನ್ನೂ ನೀಡಿಲ್ಲ. ನಾಳೆಯೊಳಗೆ ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : Cabinet Expansion : ಆ ಸುದ್ದಿ ಕೇಳಿ ಅಬಕಾರಿ ಸಚಿವ ಹೆಚ್ ನಾಗೇಶ್ ಗೆ ಶಾಕ್..! ಆಗಿದ್ದೇನು ಗೊತ್ತಾ..?
ಸಂಭಾವ್ಯ ಸಪ್ತ ಸಚಿವರು ಯಾರು ಯಾರು..?
ಏಳು ಶಾಸಕರು ಸಂಪುಟ ಸೇರಲಿದ್ದಾರೆ. ಅವರಲ್ಲಿ ಆರ್ ಶಂಕರ್, (R Shankar) ಎಂಟಿಬಿ ನಾಗರಾಜ್ (MTB Nagaraj), ಮುನಿರತ್ನ (Munirathna), ಸಿಪಿ ಯೋಗೀಶ್ವರ್, ಉಮೇಶ್ ಕತ್ತಿ ಹಾಗೂ ಅರವಿಂದ್ ಲಿಂಬಾವಳಿಗೆ (Aravinda Limbavali) ಸಚಿವ ಸ್ಥಾನ ಖಚಿತ ಎನ್ನಲಾಗಿದೆ. ಮಹಿಳಾ ಶಾಸಕಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಯಡಿಯೂರಪ್ಪ ಸಂಪುಟ ಸೇರಲು ಪ್ರಬಲ ಲಾಬಿ ಶುರುವಾಗಿದೆ. ಸಚಿವ ಸ್ಥಾನ ಉಳಿಸಿಕೊಳ್ಳಲು ಕೂಡಾ ಮಂತ್ರಿಗಳು ಕೊನೆ ಹಂತದ ಕಸರತ್ತು ನಡೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.