ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ನೇತೃತ್ವದ ನೂತನ ಸಚಿವ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಸಂಪುಟದ 29 ಸಚಿವರಿಗೆ ವಿವಿಧ ಖಾತೆಗಳನ್ನು ಹಂಚಲಾಗಿದೆ. ಹಣಕಾಸು, ಬೆಂಗಳೂರು ಅಭಿವೃದ್ಧಿ ಮತ್ತು ಕ್ಯಾಬಿನೆಟ್ ವ್ಯವಹಾರಗಳ ಪ್ರಮುಖ ಖಾತೆಗಳನ್ನು ಸಿಎಂ ತಮ್ಮಲ್ಲಿಯೇ ಉಳಿಸಿಕೊಂಡರೆ, ಪ್ರಮುಖ ಬಿಜೆಪಿ ಶಾಸಕರು ಸಂಪುಟದಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.


Basavaraj Bommai) ನೇತೃತ್ವದ ನೂತನ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗಿದೆ. ಪರಿಸರ ಖಾತೆ ನೀರುವುದಕ್ಕೆ ಆನಂದ್ ಸಿಂಗ್(Anand Singh) ಅಸಮಾಧಾನ ಹೊರಹಾಕಿದ್ದಾರೆ. ತಾವು ನಿರೀಕ್ಷಿಸಿದ್ದ ಖಾತೆಯನ್ನು ನೀಡಿಲ್ಲ. ಹೀಗಾಗಿ ತಮ್ಮ ದಾರಿಯನ್ನು ತಾನು ನೋಡಿಕೊಳ್ಳುವುದಾಗಿ ಆನಂದ್ ಸಿಂಗ್ ಸಿಡಿಮಿಡಿಗೊಂಡಿದ್ದಾರೆಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಯಾರಿಗೆ ಯಾವ ಖಾತೆ..?


1) ಬಸವರಾಜ್ ಬೊಮ್ಮಾಯಿ – ಡಿಪಿಎಆರ್, ಹಣಕಾಸು, ಗುಪ್ತಚರ ಇಲಾಖೆ, ಕ್ಯಾಬಿನೆಟ್ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಮತ್ತು ಇನ್ನುಳಿದ ಹಂಚಿಕೆಯಾಗದ ಖಾತೆಗಳು


2) ಗೋವಿಂದ ಎಂ.ಕಾರಜೋಳ - ಸಣ್ಣ ಮಧ್ಯಮ ನಿರಾವರಿ ಜಲಸಂಪನ್ಮೂಲ


3) ಕೆ.ಎಸ್.ಈಶ್ವರಪ್ಪ - ಗ್ರಾಮೀಣಾಭಿವೃದ್ಧಿ ಇಲಾಖೆ


4) ಆರ್.ಅಶೋಕ್ - ಕಂದಾಯ ಇಲಾಖೆ(ಮುಜರಾಯಿ ಇಲಾಖೆ ಹೊರತುಪಡಿಸಿ)


5) ಡಾ.ಅಶ್ವತ್ಥ್ ನಾರಾಯಣ್ - ಐಟಿಬಿಟಿ, ಉನ್ನತ ಶಿಕ್ಷಣ


6) ಬಿ.ಶ್ರೀರಾಮುಲು - ಸಮಾಜಕಲ್ಯಾಣ, ಸಾರಿಗೆ ಇಲಾಖೆ


7) ವಿ.ಸೋಮಣ್ಣ - ವಸತಿ


8) ಜೆ.ಸಿ.ಮಾಧುಸ್ವಾಮಿ - ಸಣ್ಣ ನಿರಾವರಿ, ಕಾನೂನು


9) ಸಿ.ಸಿ.ಪಾಟೀಲ್ - ಪಿಡಬ್ಲ್ಯೂ ಡಿ(PWD)


10) ಪ್ರಭು ಚವ್ಹಾಣ್ – ಪಶುಸಂಗೋಪನೆ


11) ಆನಂದ್ ಸಿಂಗ್ - ಪರಿಸರ


12) ಕೆ.ಗೋಪಾಲಯ್ಯ - ಅಬಕಾರಿ


13) ಬೈರತಿ ಬಸವರಾಜ - ನಗರಾಭಿವೃದ್ಧಿ


14) ಎಸ್.ಟಿ.ಸೋಮಶೇಖರ್ - ಸಹಕಾರಿ


15) ಬಿ.ಸಿ.ಪಾಟೀಲ್ - ಕೃಷಿ ಇಲಾಖೆ


16) ಡಾ.ಕೆ.ಸುಧಾಕರ್ - ಆರೋಗ್ಯ ಮತ್ತು ವೈದ್ಯಕೀಯ


17) ಕೆ.ಸಿ.ನಾರಾಯಣಗೌಡ - ಯುವಜನ ಮತ್ತು ಕ್ರೀಡೆ


18) ಶಿವರಾಮ್ ಹೆಬ್ಬಾರ್ - ಕಾರ್ಮಿಕ ಖಾತೆ


19) ಉಮೇಶ್ ಕತ್ತಿ - ಅರಣ್ಯ ಮತ್ತು ಆಹಾರ


20) ಎಸ್.ಅಂಗಾರ - ಬಂದರು, ಮೀನುಗಾರಿಕೆ


21) ಮುರುಗೇಶ್ ನಿರಾಣಿ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ


22) ಎಂಟಿಬಿ ನಾಗರಾಜ - ಪೌರಾಡಳಿತ, ಸಣ್ಣ ನೀರಾವರಿ


23)  ಕೋಟ ಶ್ರೀನಿವಾಸ ಪೂಜಾರಿ - ಸಮಾಜ ಕಲ್ಯಾಣ


24) ಶಶಿಕಲಾ ಜೊಲ್ಲೆ - ಮುಜರಾಯಿ, ಹಜ್ ಮತ್ತು ವಕ್ಫ್


25) ವಿ.ಸುನಿಲ್ ಕುಮಾರ್ - ಇಂಧನ, ಕನ್ನಡ ಮತ್ತು ಸಂಸ್ಕೃತಿ


26) ಹಾಲಪ್ಪ ಆಚಾರ್ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ


27) ಅರಗ ಜ್ಞಾನೇಂದ್ರ - ಗೃಹ ಖಾತೆ


28) ಶಂಕರ್ ಪಾಟೀಲ್ ಮುನೇನಕೊಪ್ಪ- ಜವಳಿ ಖಾತೆ


29) ಬಿ.ಸಿ.ನಾಗೇಶ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ


30) ಮುನಿರತ್ನ- ತೋಟಗಾರಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ