ರಾಜ್ಯದಲ್ಲಿ ಹೆಚ್ಚಾದ ಸಿಎಂ ಬದಲಾವಣೆ ಕೂಗು... ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಗರ ಅಭಿಯಾನ ..!
Who Is Next CM: ಮುಡಾ ನಿವೇಶನ ಪ್ರಕರಣ ಕಾಂಗ್ರೆಸ್ ಸರ್ಕಾರವನ್ನು ಹೈರಾಣಾಗಿಸಿದೆ. ಸಿಎಂ ವಿರುದ್ದ ಪ್ರಾಸಿಕ್ಯೂಷನ್ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಮತ್ತೊಂದೆಡೆ ರಾಜ್ಯಪಾಲರ ಆದೇಶವನ್ನು ಕೋರ್ಟ್ ಎತ್ತಿ ಹಿಡಿದರೆ ಮುಂದೇನು ಎಂಬ ಆತಂಕ ದುಗಡು ಸಿಎಂ ಅವರದ್ದು...
Next CM Of Karnataka: ಮುಡಾ ಪ್ರಕರಣ ದಲ್ಲಿ ಸಿಎಂ ವಿರುದ್ದ ತನಿಖೆಗೆ ರಾಜ್ಯಪಾಲರ ಅನುಮತಿ ನೀಡಿದ ದಿನದಿಂದಲೇ ಸಿದ್ದರಾಮಯ್ಯ ಬದಲಾವಣೆ ಧ್ವನಿ ಗಟ್ಟಿಯಾಗತೊಡಗಿದೆ. ದಿನಕ್ಕೊಬ್ಬರು ನಾನೂ ಸಿಎಂ ಆಕಾಂಕ್ಷಿ (CM aspirant), ನನಗೂ ಅವಕಾಶ ಇದೆ ಎನ್ನುತ್ತಿದ್ದಾರೆ. ಕೆಲವರಂತೂ ಬೆಂಬಲಿಗರ ಮೂಲಕ ಮುಂದಿನ ಸಿಎಂ ತಮ್ಮ ನಾಯಕ ಎಂದು ಸಮಾಜಿಕ ಜಾಲತಾಣದಲ್ಲಿ ಯುದ್ಧಕ್ಕೆ ಬಿದ್ದಿದ್ದಾರೆ. ಜತೆಗೆ ದಿನಕ್ಕೊಬ್ಬರಂತೆ ದೆಹಲಿಗೆ ದಂಡಯಾತ್ರೆ ನಡೆಸ್ತಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಹೌದು, ಮುಡಾ ನಿವೇಶನ ಪ್ರಕರಣ ಕಾಂಗ್ರೆಸ್ ಸರ್ಕಾರವನ್ನು (Congress Govt) ಹೈರಾಣಾಗಿಸಿದೆ. ಸಿಎಂ ವಿರುದ್ದ ಪ್ರಾಸಿಕ್ಯೂಷನ್ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಮತ್ತೊಂದೆಡೆ ರಾಜ್ಯಪಾಲರ ಆದೇಶವನ್ನು ಕೋರ್ಟ್ ಎತ್ತಿ ಹಿಡಿದರೆ ಮುಂದೇನು ಎಂಬ ಆತಂಕ ದುಗಡು ಸಿಎಂ ಅವರದ್ದು... ಆದರೆ ಸಚಿವ ಸಂಪುಟದಲ್ಲಿರುವ ಬಹುತೇಕ ಸಚಿವರಿಗೆ ಸಿದ್ದರಾಮಯ್ಯ ಉಸಾಬರಿ ಬಿಟ್ಟು ಸಿಎಂ ಕುರ್ಚಿ (CM Post) ಬಗ್ಗೆ ಕಾಳಜಿ ಕೇಳಿ ಬರ್ತಿದೆ. ಅದಕ್ಕಾಗಿಯೇ ಈಗಿನಿಂದಲೇ ತೆರೆ ಮರೆ ಹಾಗೂ ಬಹಿರಂಗವಾಗಿಯೂ ಕಸರತ್ತು ಆರಂಭವಾಗಿದೆ. ಕೆಲವರು ಹಿರಿತನ, ಇನ್ನೂ ಕೆಲವರು ಜಾತಿ, ಇನ್ನೂ ಕೆಲವು ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಬೆಂಬಲ ಪಡೆಯಲು ಸರ್ಕಸ್ ನಡೆಸಿದ್ದಾರೆ. ನಾಲ್ಕು ಜನರ ಬಾಯಿಂದ ಹೆಸರು ಕೇಳಿ ಬಂದರೆ ಲಾಭವಾಗವಹುದು ಎಂದು ಹವಣಿಸುತ್ತಿದ್ದಾರೆ.
ಸದ್ಯ ಸಿಎಂ ರೇಸ್ ನಲ್ಲಿ (CM Race) ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್, ಶಿವಾನಂದ ಪಾಟೀಲ್ ಹೆಸರು ಸೇರಿ ಹಲವರ ಹೆಸರು ಮುಂಚೂಣಿಯಲ್ಲಿ ಇವೆ. ಇಲ್ಲಿಯವರೆಗೂ ಸಿದ್ದರಾಮಯ್ಯ ಐದು ವರ್ಷ ಮುಂದುವರೆಯಲಿದ್ದಾರೆ. ಹಿಂದುಳಿದ ನಾಯಕನ್ನು ಬದಲಾವಣೆ ಬೇಡ ಹೀಗೆಲ್ಲ ಹೇಳಿಕೆ ಕೊಡುತ್ತಿದ್ದರೆ, ಮತ್ತೊಂದೆಡೆ ಅವರ ಬೆಂಬಲಿಗರು ಮುಂದಿನ ಸಿಎಂ ಅವರೇ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟರ್ ಹಾಕುತ್ತಿದ್ದಾರೆ. ಮೊನ್ನೆರೆಗೂ ಸತೀಶ್ ಜಾರಕಿಹೊಳಿ ಬೆಂಬಲಿಗರು, ಇತ್ತೀಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar).. ಇದೀಗ ಡಾ. ಜಿ. ಪರಮೇಶ್ವರ್ (Dr G Parameshwar) ಬೆಂಬಲಿಗರು ಮುಂದಿನ ಸಿಎಂ ಎಂದು ಪೋಸ್ಡರ್ ಹಾಕಿ ಪರಂಗೆ ಮೇಲೆಕ್ಕೇರಿಸ್ತಿದ್ದಾರೆ.
ಇದನ್ನೂ ಓದಿ- ಸಿ.ಟಿ.ರವಿ ಅವರದ್ದು ಬುರುಡೆ ಮಾತು: ಶಾಸಕ ಸಿ.ಪುಟ್ಟರಂಗಶೆಟ್ಟಿ ಕಿಡಿ
ಇನ್ನು ಸಿಎಂ ಸ್ಥಾನ ಖಾಲಿ ಇಲ್ಲ, ಸಿದ್ದರಾಮಯ್ಯ (Siddaramaiah) ಪರ ಹೈ ಕಮಾಂಡ್ ಹಿಂದೆ ನಿಂತಿದೆ. ಅವರೇ ಐದು ವರ್ಷ ಸಿಎಂ ಎಂದು ಸಣ್ಣ ನೀರಾವರಿ ಸಚಿವರು ಹೇಳಿಕೆ ನೀಡಿದ್ದಾರೆ. ನಡುವೆ ಎಂ.ಬಿ.ಪಾಟೀಲ್. ಇಲಾಖೆ ಕಾರ್ಯಕ್ರಮ ಎಂದು ದೆಹಲಿ ಫ್ಕೈಟ್ ಹಾರಿದ್ದಾರೆ.
ಮುಖ್ಯಮಂತ್ರಿ ರೇಸ್: ಆರ್ ಅಶೋಕ್ ಲೇವಡಿ:
ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ (CM change in Congress) ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಆರ್ ಅಶೋಕ್ (R Ashok), ಸಿಎಂ ಬದಲಾವಣೆ ವಿಚಾರ ಸೃಷ್ಟಿ ಮಾಡಿರೋದು ಬಿಜೆಪಿಯವರು ಎಂದು ನಮ್ಮನ್ನ ದೂರುತ್ತಾರೆ. ನಮಗಿಂತಲೂ ಕಾಂಗ್ರೆಸ್ ನವರಿಗೇ ಸಿಎಂ ಬದಲಾವಣೆ ಖಚಿತ, ನಿಶ್ಚಿತ ಆಗಿಹೋಗಿದೆ. ಕೋರ್ಟ್ ತೀರ್ಪನ್ನೂ ಕಾಯದೇ ಸಿಎಂ ಸ್ಥಾನಕ್ಕೆ ಟವೆಲ್ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಈಗ ಸಿಎಂ ಆಗಲು ಕಾಂಗ್ರೆಸ್‌ನಲ್ಲಿ ಸೀನಿಯಾರಿಟಿ ಅಭಿಯಾನ ನಡೀತಿದೆ. ದೇಶಪಾಂಡೆ ನಂತರ ಸತೀಶ್ ಜಾರಕಿಹೊಳಿ ಅಭಿಯಾನ ನಡೆಸ್ತಿದ್ದಾರೆ. ಎಂ ಬಿ ಪಾಟೀಲ್ ನಾನೇ ಸೀನಿಯರ್ ಅಂತಿದ್ದಾರೆ. ಪರಮೇಶ್ವರ್, ತಮಗೆ ಹಿಂದೆ ಅನ್ಯಾಯ ಆಗಿದೆ ಅದನ್ನು ಸರಿಪಡಿಸಿ ಸಿಎಂ ಮಾಡಿ ಅಂತಿದ್ದಾರೆ. ಸಿದ್ದರಾಮಯ್ಯ ಪರ ಬಂಡೆಯಂತೆ ಇದ್ದೀವಿ ಅನ್ನೋರೇ ಸಿಎಂ ಆಗ್ತೀವಿ ಅಂತಿದ್ದಾರೆ. ಬೇರೆಯವರೆಲ್ಲ ಸಿಎಂ ಕುರ್ಚಿಗೆ ಟವೆಲ್ ಹಾಕ್ತಿದ್ರೆ ಡಿಕೆಶಿ ಸ್ಟಿಕ್ಕರ್ ಅನ್ನೇ ಅಂಟಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದಲ್ಲಿ ಘಟಾನುಘಟಿ ನಾಯಕರ ಮುಖ್ಯಮಂತ್ರಿ ರೇಸ್ ಬಗ್ಗೆ ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ- ಸಿದ್ಧು ಸರ್ಕಾರದ ವಿರುದ್ಧ ಸಿ.ಟಿ.ರವಿ ಹೊಸ ಬಾಂಬ್: ದೀಪಾವಳಿಯೊಳಗೆ ಸರ್ಕಾರ ಡಮಾರ್..!
ಒಟ್ಟಾರೆ ಮೇಲ್ನೋಟಕ್ಕೆ ಸಿಎಂ ಪರವಾಗಿಯೇ ಎಲ್ಲರೂ ಮಾತನಾಡುತ್ತಿದ್ದು, ತಾವೂ ಪ್ರಯತ್ನಿಸೋದ್ರಲ್ಲಿ ತಪ್ಪೇನು ಎಂಬಂತೆ ವರ್ತಿಸ್ತಿದ್ದಾರೆ. ಕೆಲವರು ಇಲಾಖೆ ನೆಪದಲ್ಲಿ ಮತ್ತೂ ಕೆಲವರು ಖಾಸಗಿ ಎಂದುಕೊಂಡು ದೆಹಲಿಗೆ ದೌಡಾಯಿಸ್ತಿರುವುದು ಸಿದ್ದು ಬುಡಕ್ಕೆ ಬಿಸಿನೀರು ಬಿಟ್ಟಂಗೆ ಆಗ್ತಿದೆ. ಇವೆಲ್ಲಾ ನ್ಯಾಯಾಲಯದ ತೀರ್ಪು ಬರುವವರೆಗೂ ಮುಂದುವರೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.