ಬೆಂಗಳೂರು : ಬಿಜೆಪಿಗರು ಪ್ರತಿ ಮತದಾರನಿಗೆ 6000 ರೂಪಾಯಿ ಲಂಚದ ಬಹಿರಂಗ ಆಮಿಷದ ಮೂಲಕ ರಾಜ್ಯದ 5 ಕೋಟಿ ಮತದಾರರನ್ನು ಒಟ್ಟು 30 ಸಾವಿರ ಕೋಟಿ ಕೊಟ್ಟು ಖರೀದಿ ನಡೆಸುತ್ತಿದ್ದಾರೆ ಎಂಬ ಆರೋಪ ಮಾಡಿರುವ ಕಾಂಗ್ರೆಸ್ ಇಂದು ನಗರದ ಹೈ ಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದೆ.


COMMERCIAL BREAK
SCROLL TO CONTINUE READING

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ಸರ್ಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ತನಿಖೆ ನಡೆಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ದೂರು ನೀಡಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ನಡೆಯನ್ನು ಜನರು ಗಮನಿಸುತ್ತಿದ್ದಾರೆ. ಬಿಜೆಪಿ ಮಂತ್ರಿಗಳು, ಶಾಸಕರು ನಾವು ಗೆಲ್ಲೋದಿಲ್ಲಾ ಆದ್ರೂ ಸರ್ಕಾರ ರಚನೆ ಮಾಡ್ತೀವಿ ಅಂತಾ ಹೊರಟಿದ್ದಾರೆ.


ಇದನ್ನೂ ಓದಿ: Bengaluru: 44 ಲಕ್ಷ ಮೌಲ್ಯದ 114 ಕೆಜಿ ಗಾಂಜಾ ವಶ; ಇಬ್ಬರ ಬಂಧನ!


ಮತದಾರರಿಗೆ ಆಮಿಷ ಒಡ್ಡಲು ಹೊರಟಿದ್ದಾರೆ. 40 ಪರ್ಸೆಂಟ್ ಕಮಿಷನ್ ನಲ್ಲಿ ಹಣ ಸಂಗ್ರಹ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಮತದಾರರಿಗೆ ಆರು ಸಾವಿರ ಕೊಡ್ತೀವಿ ಅಂತಾ ಹೇಳಿಕೆ ಕೊಟ್ಟಿದ್ದಾರೆ. ಇದರ ವಿರುದ್ಧ ದೂರು ಕೊಟ್ಟಿದ್ದೇವೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ. ನಡ್ಡಾ, ಕಟೀಲು, ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಮೇಲೆ ದೂರು ದಾಖಲು ಮಾಡಿದ್ದೇವೆ. ಇವತ್ತು ರಾಷ್ಟ್ರೀಯ ಮತದಾರರ ದಿನ, ಮತದಾನದ ಹಕ್ಕಿಗೆ ಒಂದು ಗೌರವ ಬೇಕಲ್ವಾ..? ಅದಕ್ಕೇ ಈ ದಿನವನ್ನು ಆಯ್ಕೆ ಮಾಡಿ ದೂರು ಕೊಡ್ತಾ ಇದೀವಿ ಎಂದು ಡಿಕೆಶಿ ತಿಳಿಸಿದರು.


ಇದು ಬಿಜೆಪಿಗರ ಹುನ್ನಾರ : ಬಿಜೆಪಿ ಒಂದು ಸಂಚು ರೂಪಿಸಿದ್ದಾರೆ, ಇದರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ರಾಜ್ಯಾಧ್ಯಕ್ಷ ಕಟೀಲು, ಸಿಎಂ ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಇದ್ದಾರೆ. 2023ರ ಚುನಾವಣೆಯಲ್ಲಿ ಸೋಲ್ತೀವಿ ಅಂತಾ ಮನವರಿಕೆ ಆಗಿದೆ. ಹೇಗಾದ್ರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಬೇಕು ಅಂತಾ ಹುನ್ನಾರ ಮಾಡಿದ್ದಾರೆ. ವರ್ಗಾವಣೆ, ಅಪಾಯಿಂಟ್ಮೆಂಟ್, ಪ್ರಾಜೆಕ್ಟ್‌ ಎಲ್ಲದರಲ್ಲೂ ಭ್ರಷ್ಟಾಚಾರ ನಡೀತಿದೆ. ಈ ಭ್ರಷ್ಟಾಚಾರ ದಿಂದ ಅಗಾಧ ಪ್ರಮಾಣದ ಹಣ ಸಂಪಾದನೆ ಮಾಡಿದ್ದಾರೆ. ಮೂವತ್ತು ಸಾವಿರ ಕೋಟಿ ಮತದಾರರಿಗೆ ಹಂಚಲು ಸಿದ್ದತೆ ಮಾಡಿಕೊಂಡಿದ್ದಾರೆ. ಒಬ್ಬ ಮತದಾರರಿಗೆ ಆರು ಸಾವಿರ ಹಂಚ್ತೀವಿ ಅಂತಾ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇವರ ಹುನ್ನಾರ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಹುನ್ನಾರ ಎಂದು ಆಕ್ರೋಶ ಹೊರಹಾಕಿದರು.


ಇದನ್ನೂ ಓದಿ: Republic Day 2023: ಗಣರಾಜ್ಯೋತ್ಸವ ಪರೇಡ್‍ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಳ್ಳಾರಿಯ ವಿದ್ಯಾರ್ಥಿನಿ ಆಯ್ಕೆ


ಬಿಜೆಪಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಕಾರಣ : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋಕೆ ಕಾರಣವೇ ಕುಮಾರಸ್ವಾಮಿ. 2006 ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಯಾರು..? ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಕಾರಣವೇ ಕುಮಾರಸ್ವಾಮಿ.ಅವತ್ತು ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟು ಕೊಡದೇ ಮೋಸ ಮಾಡಿದ್ದು ಕುಮಾರಸ್ವಾಮಿ,ಅವತ್ತು ಅಧಿಕಾರ ಬಿಟ್ಟು ಕೊಟ್ಟಿದ್ರೆ, ಇವತ್ತು ಬಿಜೆಪಿ ಈ ಮಟ್ಟಿಗೆ ಬೆಳೆಯುತ್ತಲೇ ಇರಲಿಲ್ಲ.ಬಿಜೆಪಿ ಬೆಳೆಯಲು ಕಾರಣವೇ ಮಿಸ್ಟರ್ ಕುಮಾರಸ್ವಾಮಿ. ಭ್ರಷ್ಟಾಚಾರ ಪಿತಾಮಹ ಸಿಎಂ ಬೊಮ್ಮಾಯಿ‌,ನಾವು ಹಿಂದೆ ಮಾಡಿದ್ವಿ ಅಂತ ನೀವು ಈಗ ಮಾಡ್ತಿರ, ಎಂದು ಸಿಎಂ ವಿರುದ್ಧ ಸಿದ್ದರಾಮಯ್ಯ, ಡಿಕೆಶಿ ವಾಗ್ದಾಳಿ ನಡೆಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.