ಬೆಂಗಳೂರು: ರಾಜ್ಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವ ಮೇಕೆದಾಟು ಯೋಜನೆ(Mekedatu Project)ತುರ್ತಾಗಿ ಆಗಬೇಕಿದೆ ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಇಂದು ಅಂತಿಮ ಹಂತದ ಪಾದಯಾತ್ರೆಯನ್ನು ನಡೆಸಿತು.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್(Congress), ‘ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಛಾಪು ಮೂಡಿಸಲು ಹೊರಟ #MekedatuPadayatreಯ ಅಂತಿಮ ದಿನದಂದು ಬೆಂಗಳೂರಿಗರು ಪಕ್ಷಾತೀತವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಭಾಗಿಯಾದರು. ರಾಜಧಾನಿಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಐತಿಹಾಸಿಕ ಹೋರಾಟದಲ್ಲಿ ಸಿಕ್ಕ ಜನಬೆಂಬಲಕ್ಕೆ ಧನ್ಯವಾದ’ ತಿಳಿಸಿದೆ.


ಶಿಕ್ಷಣ ಕ್ಷೇತ್ರವನ್ನು ಕುಲಗೆಡಿಸಿದ ಕುಖ್ಯಾತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ: ಬಿಜೆಪಿ


‘ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಸಾಫ್ಟ್‌ವೇರ್ & ಆಟೋಮೊಬೈಲ್ ಕಂಪೆನಿಗಳು, ಅನೇಕ ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್‌ಅಪ್ ಕಂಪನಿಗಳಿವೆ. ಈಗಲೂ ಬೆಂಗಳೂರು ನಿತ್ಯ 100 ಮೆಗಾವ್ಯಾಟ್ ವಿದ್ಯುತ್ ಕೊರತ ಇದೆ. ರಾಜ್ಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವ ಮೇಕೆದಾಟು ಯೋಜನೆ(Mekedatu Project) ತುರ್ತಾಗಿ ಆಗಬೇಕಿದೆ’ ಅಂತಾ ಕಾಂಗ್ರೆಸ್ ಟ್ವೀಟ್ ಮಾಡಿದೆ.


2023ರಲ್ಲಿ ಜೆಡಿಎಸ್ ಸರ್ಕಾರ ಬಂದರೆ ನೀಟ್ ವಿರುದ್ಧ ಅಸೆಂಬ್ಲಿಯಲ್ಲಿ ನಿರ್ಣಯ: ಎಚ್​ಡಿಕೆ


Bengaluru) ಸೇರಿದಂತೆ 5 ಜಿಲ್ಲೆಗಳ ಕುಡಿಯುವ ನೀರಿಗೆ, ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬಹುದು’ ಅಂತಾ ಹೇಳಿದೆ.


‘ಬೆಂಗಳೂರಿಗೆ ಪ್ರತಿನಿತ್ಯ ಸುಮಾರು 1,500 ಮಿಲಿಯನ್ ಮೆಟ್ರಿಕ್ ಲೀಟರ್ ನೀರಿನ ಅಗತ್ಯವಿದೆ. ಬಿಡದಿ, ತುಮಕೂರು, ರಾಮನಗರದಂತಹ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳೂ ಸಹ ಬಂಡವಾಳ ಹೂಡಿಕೆಯ ಕೇಂದ್ರಗಳಾಗುತ್ತಿವೆ. ಈ ಹೊತ್ತಿನಲ್ಲಿ ಮೇಕೆದಾಟು ಯೋಜನೆ ಅತ್ಯಗತ್ಯವಾಗಿದ್ದು, ಅಭಿವೃದ್ಧಿಗೆ ಪೂರಕವಾಗಿದೆ’ ಅಂತಾ ಹೇಳಿದೆ.


ಕಾಂಗ್ರೆಸ್ ನಾಯಕರಿಗೆ ಬೃಹತ್ ಸೇಬಿನ ಹಾರ


ಮೇಕೆದಾಟು ಪಾದಯಾತ್ರೆಯ ಅಂತಿಮ ದಿನವಾದ ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರಿಗೆ ಕಾರ್ಯಕರ್ತರು ಬೃಹತ್ ಸೇಬು ಹಣ್ಣಿನ ಹಾರವನ್ನು ಹಾಕಿ ಬೆಂಬಲ ವ್ಯಕ್ತಪಡಿಸಿದರು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.